Advertisement

ಚಿಂದಿ ಆಯುವ-ಭಿಕ್ಷೆ ಬೇಡುವ 24 ಮಕ್ಕಳ ರಕ್ಷಣೆ

06:55 PM Sep 24, 2020 | Suhan S |

ಬೀದರ: ನಗರದಾದ್ಯಂತ ಬುಧವಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮೇಲ್ವಿಚಾರಣೆಯಲ್ಲಿ ಚಿಂದಿ ಆಯುವ ಮತ್ತು ಭಿಕ್ಷೆ ಬೇಡುವ ಮಕ್ಕಳ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಒಟ್ಟು 24 ಮಕ್ಕಳನ್ನು ರಕ್ಷಿಸಲಾಯಿತು. ಜಿಲ್ಲೆಯಲ್ಲಿ ಚಿಂದಿ ಆಯುವ ಮಕ್ಕಳ ಸಂಖ್ಯೆ ತಗ್ಗಬೇಕು. ಕೋವಿಡ್‌-19 ಹಿನ್ನೆಲೆಯಲ್ಲಿ ಚಿಂದಿ ಆಯ್ದರೆ ಮಕ್ಕಳಿಗೆ ಸೋಂಕು ತಗುಲಿ ಅನಾರೋಗ್ಯಕ್ಕೀಡಾಗುತ್ತಾರೆ. ಶಿಕ್ಷಣದಿಂದಲೂ ವಂಚಿತರಾಗುತ್ತಾರೆ.

Advertisement

ಈ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣೆ, ಪೋಷಣೆ ಮತ್ತು ಪುನರ್ವಸತಿ ಉದ್ದೇಶದಿಂದ ನಗರದ ಪ್ರಮುಖ ಬೀದಿಗಳಲ್ಲಿ ಬೆಳಗ್ಗೆ 7ರಿಂದ ನಿರಂತರ 5 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಚಿಂದಿ ಆಯುವ ಮತ್ತು ಭಿಕ್ಷೆ ಬೇಡುವ ಮಕ್ಕಳನ್ನು ರಕ್ಷಿಸಲಾಯಿತು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೌರಿಶಂಕರ ಪರತಾಪೂರೆ ನೇತೃತ್ವದಲ್ಲಿ ಮೈಲೂರ, ಗುಂಪಾ, ಗಾಂ ಧೀಗಂಜ್‌, ಹಳೆ

ಬೀದರ ಸಿಟಿ, ಮಂಗಲಪೇಟ, ನಾವದಗೇರಿ, ಹೈದ್ರಾಬಾದ್‌ ರಸ್ತೆ, ಜನವಾಡ ರಸ್ತೆ, ನೌಬಾದ್‌, ಪ್ರತಾಪನಗರ, ಆಟೋನಗರ, ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ವಿವಿಧೆಡೆ ಮೂರ್‍ನಾಲ್ಕು ವಾಹನಗಳ ಮೂಲಕ ಸಂಚರಿಸಿದ ಅಧಿ  ಕಾರಿಗಳು ಮತ್ತು ಸಿಬ್ಬಂದಿ 13 ಬಾಲಕರು, 11 ಬಾಲಕಿಯರು ಸೇರಿ 24 ಮಕ್ಕಳನ್ನು ರಕ್ಷಿಸಿ ಬಾಲಕರ ಮತ್ತು ಬಾಲಕಿಯರ ಬಾಲ ಮಂದಿರದಲ್ಲಿ ಆಶ್ರಯ ನೀಡಿದರು.

ಡಿಸಿ ಚಾಲನೆ: ಜಿಲ್ಲಾ ಧಿಕಾರಿ ಆರ್‌. ರಾಮಚಂದ್ರನ್‌ ಅವರು ಬೆಳಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕಾರ್ಯಾಚರಣೆಗೆ ಚಾಲನೆ ನೀಡಿದರು. ನಾವು ಒಗ್ಗೂಡಿ ಕೆಲಸ ಮಾಡಿದಲ್ಲಿ ಯಾವುದೇ ಕಾರ್ಯ ಯಶಸ್ವಿಯಾಗಲು ಸಾಧ್ಯ. ನಗರದ ಯಾವ ಯಾವ ಕಡೆಗಳಲ್ಲಿ ಚಿಂದಿ ಆಯುವ, ಭಿಕ್ಷೆ ಬೇಡುವ ಮಕ್ಕಳು ಕಾಣುತ್ತಾರೋ ಅಂಥವರನ್ನು ರಕ್ಷಣೆ ಮಾಡಬೇಕು. ಇದಕ್ಕೆ ಪಾಲಕರು ವಿರೋಧಿಸಿದರೆ ಅವರಿಗೆ ತಿಳಿ ಹೇಳಬೇಕು. ಮುಂದಿನ ದಿನಗಳಲ್ಲಿ ಈ ಬಗ್ಗೆ ಸಭೆ ನಡೆಸಿ, ಚರ್ಚಿಸಿ, ಅಂತಹ ಮಕ್ಕಳ ಪಾಲಕರಿಗೆ ಪರ್ಯಾಯ ಉದ್ಯೋಗ ಒದಗಿಸಲು, ಸರ್ಕಾರದಿಂದ ಮತ್ತಷ್ಟು ಸಾಲ ಸೌಲಭ್ಯ ಕಲ್ಪಿಸಲು ಪ್ರಯತ್ನಿಸೋಣ ಎಂದು ತಿಳಿಸಿದರು.

ಕಾರ್ಯಾಚರಣೆ ಮುಂದುವರಿಸೋಣ: ಈ ರೀತಿಯ ಕಾರ್ಯಾಚರಣೆಯಿಂದ ಚಿಂದಿ ಆಯುವ ಮಕ್ಕಳಿಗೆ ಬಿಸಿ ಮುಟ್ಟಲಿದೆ ಎಂದು ಮನವರಿಕೆ ಮಾಡಿದ ಡಿಸಿ, ನಗರಸಭೆ, ಪುರಸಭೆ ಅಧಿಕಾರಿಗಳ ಸಹಕಾರ ಪಡೆದು, ಮುಂದಿನ ದಿನಗಳಲ್ಲಿ ಕೆಲವು ಕಾಲೋನಿಗಳಿಗೆ ಭೇಟಿ ನೀಡಿ ತಿಳಿವಳಿಕೆ ಕಾರ್ಯಕ್ರಮ ರೂಪಿಸೋಣ. ಈ ಕಾರ್ಯಾಚರಣೆಯನ್ನು ನಾವು ಜಿಲ್ಲೆಯ ಎಲ್ಲ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಡ ಮುಂದುವರಿಸೋಣ ಎಂದರು.

Advertisement

ಮಕ್ಕಳ ರಕ್ಷಣಾ ಘಟಕದ ಸಂಗೀತಾ ಸಿರಂಜಿ, ಸುರೇಖಾ, ರವಿರಾಜ್‌, ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕರಾದ ವಿಜಯಲಕ್ಷ್ಮೀ, ಭಾಗ್ಯವಂತಿ, ಅಲಕಾ, ಡಾನ್‌ ಬಾಸ್ಕೋ ಸಂಸ್ಥೆಯ ನೆಲಸನ್‌, ಜಾನಸನ್‌, ಸಾಲೋಮನ್‌, ರೈಲ್ವೆ ಚೈಲ್ಡ್‌ ಲೈನ್‌ದ ಸುಧಾಕರ, ಡಿಎಚ್‌ಒ ಡಾ| ವಿ.ಜಿ.ರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶಂಭುಲಿಂಗ ಹಿರೇಮಠ, ವಾರ್ತಾಧಿಕಾರಿ ಗವಿಸಿದ್ದಪ್ಪ, ಬಾಲಭವನ ಸಮಿತಿ ಜಿಲ್ಲಾ ಸಂಯೋಜಕ ಸೂರ್ಯಕಾಂತ ಮೋರೆ, ಕಾರ್ಮಿಕ ಅಧಿಕಾರಿ ರಮೇಶ ಸುಂಬದ, ಬಾಲ ಕಾರ್ಮಿಕ ನಿರ್ಮೂಲನೆ ಪಿಡಿ ಅರ್ಜುನ ಸಿತಾಳಗೇರಾ, ಶಿಕ್ಷಣ ಇಲಾಖೆಯ ನೋಡಲ್‌ ಅಧಿಕಾರಿ ಗುಂಡಪ್ಪ, ವಿಜಯಲಕ್ಷ್ಮೀ ಶಹಬಾದೆ, ಬಸಪ್ಪ, ನಾಗನಾಥ ಮತ್ತು ಪೊಲೀಸ್‌ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next