Advertisement

ಮೋಡೆಲ್‌ ಬ್ಯಾಂಕಿನ 23ನೇ ಶಾಖೆ ಪನ್ವೇಲ್‌ನಲ್ಲಿ  ಉದ್ಘಾಟನೆ

12:30 AM Mar 22, 2019 | Team Udayavani |

ಮುಂಬಯಿ: ಯಾವುದೇ ಸಂಸ್ಥೆಯ ಸರ್ವೋನ್ನತಿ ಅಲ್ಲಿನ ನೌಕರವೃಂದದ ಸೇವಾ ವೈಖರಿಯಲ್ಲಿರುತ್ತದೆ. ಆದ್ದರಿಂದ ಉದ್ಯೋಗಸ್ಥರು ಬರೇ ಸಂಬಳಕ್ಕಾಗಿ ಶ್ರಮಿಸದೆ ಸೇವೆಯನ್ನೇ ವೃತ್ತಿಯಾಗಿಸಿ ಕೆಲಸ ನಿರ್ವಹಿಸಬೇಕು. ದಕ್ಷ ಸೇವೆಯ ಮುಖೇನವೇ ಗ್ರಾಹಕರ ಮನವನ್ನು ಆಕರ್ಷಿಸಬೇಕು. ಇಂತಹ ಸೇವೆಯಿಂದ ಅವರಿಗೂ ಸಂಸ್ಥೆಗೂ ಗ್ರಾಹಕರಿಗೂ ತೃಪ್ತಿಯನ್ನುಂಟು ಮಾಡುತ್ತದೆ. ಉದ್ಯೋಗಸ್ಥರಿಂದಲೇ ಉದ್ಯಮದ ಸರ್ವೋನ್ನತಿ ಸಾಧ್ಯ. ಬಹುಶಃ ಪನ್ವೇಲ್‌ಗೆ ಮೊಡೇಲ್‌ ಬ್ಯಾಂಕ್‌ನ ಆಗಮನ ಸರಿಯಾದ ಸಮಯಕ್ಕಾಗಿದೆ. ಇಲ್ಲಿನ ಜನತೆ ಇದರ ಫಲಾನುಭವ ಪಡೆದು ಸಂತೃಪ್ತರಾಗಲಿ ಎಂದು ಸೈಂಟ್‌ ಫ್ರಾನ್ಸಿಸ್‌ ಕ್ಸೇವಿಯರ್  ಚರ್ಚ್‌ ಪನ್ವೇಲ್‌ನ ಪ್ರಧಾನ ಧರ್ಮಗುರು ರೆ| ಫಾ| ಲಿಯೋ ಲೋಬೋ ನುಡಿದರು.  

Advertisement

ಮಾ. 20ರಂದು ಪೂರ್ವಾಹ್ನ ರಾಯಗಢ ಜಿಲ್ಲೆಯ ನ್ಯೂಪನ್ವೇಲ್‌ನ  ಮಾಥೇರನ್‌ ರಸ್ತೆಯ ಕ್ರಿಸ್ಟಲ್‌ ಅಪಾರ್ಟ್‌ಮೆಂಟ್‌ನಲ್ಲಿ ಮೋಡೆಲ್‌ ಕೋ. ಆಪರೇಟಿವ್‌ ಬ್ಯಾಂಕ್‌ ಲಿಮಿಟೆಡ್‌ ಇದರ 23ನೇ ಶಾಖೆಯನ್ನು ದೀಪ ಬೆಳಗಿಸಿ ವಿಧ್ಯುಕ್ತವಾಗಿ ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕವಾಗಿ ಹಿಂದುಳಿದ ವರ್ಗದವರೊಂದಿಗೆ ನಿಕಟ ಸಂಬಂಧವನ್ನು ಹೊಂದಿ ಅವರ ಇಷ್ಟಾರ್ಥಗಳಿಗೆ ಸ್ಪಂದಿಸುತ್ತಿರುವ ಮೋಡೆಲ್‌ ಬ್ಯಾಂಕಿನ ಕಾರ್ಯ ಅಭಿನಂದನೀಯವಾಗಿದೆ. ಬ್ಯಾಂಕ್‌ ಗ್ರಾಹಕರ ಹಿತದೃಷ್ಟಿಯನ್ನು ಕಾಯ್ದುಕೊಂಡು ಮುನ್ನಡೆದು ಎಲ್ಲರ ಆಶಾಕಿರಣವಾಗಿ ಕಂಗೊಳಿಸಲಿ ಎಂದು ಹಾರೈಸಿದರು. 
ಬ್ಯಾಂಕ್‌ನ ಕಾರ್ಯಾಧ್ಯಕ್ಷ ಆಲ್ಬರ್ಟ್‌ ಡಬುÉÂ. ಡಿ’ಸೋಜಾ ಅಧ್ಯಕ್ಷತೆಯಲ್ಲಿ ನೆರವೇರಿದ ಉದ್ಘಾಟನಾ ಸಮಾರಂಭದಲ್ಲಿ ನವಿಮುಂಬಯಿ ವಾಶಿ ಫಾ| ಸಿ. ರೋಡ್ರಿಗಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಪ್ರಾಂಶುಪಾಲ ಡಾ| ಎಸ್‌. ಎಂ. ಖೋತ್‌ ರಿಬ್ಬನ್‌ ಕತ್ತರಿಸಿ ನೂತನ ಶಾಖೆಗೆ ಚಾಲನೆಯನ್ನಿತ್ತ‌ರು. 

ಡಾ| ಎಸ್‌. ಎಂ. ಖೋತ್‌ ಅವರು  ಮಾತನಾಡಿ ಸೇವೆಯಲ್ಲಿ ಶತಮಾನ ಮೀರಿದ ಈ ಹಣಕಾಸು ಸಂಸ್ಥೆಯ ಸಾಧನೆ ಮತ್ತು ಮುನ್ನಡೆ ಶ್ಲಾಘನೀಯ. ಇಂದು ಹಣಕಾಸು ಸಂಸ್ಥೆಗಳು ಜಾಗತಿಕವಾಗಿ ಸರಳ, ಸುಲಭವಾಗಿ ವ್ಯವಹರಿಸುವ ಕಾಲಘಟ್ಟದಲ್ಲೂ ಮೋಡೆಲ್‌ ಬ್ಯಾಂಕ್‌ನಂತಹ ಸಂಸ್ಥೆಗಳು ಇದನ್ನು ಬರೇ ವ್ಯಾವಹಾರಿಕವಾಗಿ ಪರಿಗಣಿಸದೆ ಸೇವೆಯಾಗಿಯೂ ಗಮನಿಸುತ್ತಿರುವುದು ಅಭಿನಂ ದನೀಯ ಎಂದರು.

ಬ್ಯಾಂಕಿನ ಕಾರ್ಯ ನಿರ್ವಹಣೆ, ಗ್ರಾಹಕರ ಸಂತೃಪ್ತಿಯೇ ಹಣಕಾಸು ಉದ್ಯಮದ ಸಮೃದ್ಧಿ, ಬ್ಯಾಂಕಿಂಗ್‌ ಅಥವಾ ಆರ್ಥಿಕ ವ್ಯವಸ್ಥೆಗೆ ಇಂತಹದ್ದೇ ಅನ್ನುವ ಸಮುದಾಯದ ಪರಿಧಿಯಿ ಲ್ಲ.  ಕಾರಣ ಬ್ಯಾಂಕಿಂಗ್‌ ಅಭಿವೃದ್ಧಿಯ ಬೆನ್ನು ಮೂಳೆಯಾಗಿದೆ. ಭವಿಷ್ಯದಲ್ಲೂ ಬ್ಯಾಂಕ್‌ ಇನ್ನಷ್ಟು ಶಾಖೆಗಳನ್ನು ತೆರೆದು ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಸಹಕಾರಿಯಾಗುವಂತಾಗಲಿ ಎಂದು ನುಡಿದರು. 

ಹಣಕಾಸು ಸೇವೆಯಲ್ಲಿ  ಇ ಬ್ಯಾಂಕಿಗೆ ತನ್ನದೇ ಆದ ಇತಿಹಾಸವಿದೆ. ಇದಕ್ಕೆ ಮಿಗಿಲಾಗಿ ಹೆಜ್ಜೆಯನ್ನಿಟ್ಟ ದಿಟ್ಟ ಬ್ಯಾಂಕ್‌ ಇದಾಗಿದೆ. ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿಯೇ ಬ್ಯಾಂಕ್‌ ಈ ಮಟ್ಟಕ್ಕೆ ಬೆಳೆದಿದೆ. ಬ್ಯಾಂಕ್‌ ಅತೀ ವೇಗದಲ್ಲಿ ಅಭಿವೃದ್ಧಿ ಕಾಣುತ್ತಿದ್ದು ಪನ್ವೇಲ್‌ ಪ್ರದೇಶಕ್ಕೆ ಸೇವಾ ನಿರತವಾಗಲು ಸನ್ನದ್ಧಗೊಂಡಿದೆ. ಗ್ರಾಹಕರು ಬ್ಯಾಂಕಿನ ಎಲ್ಲಾ ಸೇವೆಗಳ ಲಾಭ ಪಡೆಯಬೇಕು ಎಂದು ಮೋಡೆಲ್‌ ಬ್ಯಾಂಕ್‌ನ ಸಂಸ್ಥಾಪಕಾಧ್ಯಕ್ಷ ಜೋನ್‌ ಡಿ’ಸಿಲ್ವ ತಿಳಿಸಿದರು.

Advertisement

ಕಾರ್ಯಕ್ರಮದಲ್ಲಿ ಅತಿಥಿ- ಅಭ್ಯಾಗತರಾಗಿ ಬೊಂಬೆ ಕೆಥೋಲಿಕ್‌ ಸಭಾ ಪನ್ವೇಲ್‌ ಘಟಕದ ಕಾರ್ಯಾಧ್ಯಕ್ಷ ಜಾರ್ಜ್‌ ವರ್ಗೀಸ್‌, ಕಾರ್ಯದರ್ಶಿ ವಿನ್ಸೆಂಟ್‌ ಜೋಸೆಫ್‌, ಸದಸ್ಯ ಲ್ಯಾನ್ಸಿ ಪಿಂಟೋ, ಕ್ರಿಸ್ಟಲ್‌ ಸೊಸೈಟಿಯ ಕಾರ್ಯಾಧ್ಯಕ್ಷ ಗೋಪಾಲ ಕೃಷ್ಣನ್‌,  ಮಹಾರಾಷ್ಟ್ರ ರಾಜ್ಯ ಜಿಎಸ್‌ಟಿ ಸಹ ಅಧಿಕಾರಿ ದೀಪಕ್‌ ಬಿ. ವರ್ಶವೊ, ಉದ್ಯಮಿ  ಖಾಂಜಿ ಕೆ. ಪಾಟೇಲ್‌, ಬ್ಯಾಂಕಿನ ನಿರ್ದೇಶಕರಾದ ವಿನ್ಸೆಂಟ್‌ ಮಥಾಯಸ್‌, ಸಿ ಎ| ಪೌಲ್‌ ನಝರೆತ್‌, ತೋಮಸ್‌ ಡಿ. ಲೋಬೋ, ಲಾರೆನ್ಸ್‌ ಡಿಸೋಜಾ, ಅಬ್ರಹಾಂ ಕ್ಲೆಮೆಂಟ್‌ ಲೋಬೋ, ಬೆನೆಡಿಕ್ಟಾ ರೆಬೆಲ್ಲೋ, ಮರಿಟಾ ಡಿಮೆಲ್ಲೋ, ಜೆರಾಲ್ಡ್‌ ಕಡೋìಜಾ, ಆ್ಯನ್ಸಿ  ಡಿ’ಸೋಜಾ, ಬ್ಯಾಂಕ್‌ನ ಡಿಜಿಎಂ ಝೆನೆರ್‌ ಡಿಕ್ರೂಜ್‌ ಸೇರಿದಂತೆ ನೂತನ ಗ್ರಾಹಕರು, ಷೇರುದಾರರು ಹಾಜರಿದ್ದು ಶಾಖೆಯ ಅಭಿವೃದ್ಧಿಗೆ ಶುಭಹಾರೈಸಿದರು. 

ಕಾರ್ಯಾಧ್ಯಕ್ಷ ಆಲ್ಬರ್ಟ್‌ ಡಿ’ಸೋಜಾ, ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರ, ಬ್ಯಾಂಕ್‌ನ ಸಿಜಿಎಂ ಮತ್ತು ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ  ವಿಲಿಯಂ ಎಲ್‌. ಡಿ’ಸೋಜಾ ಉಪಸ್ಥಿತರಿದ್ದರು, ಉಪಸ್ಥಿತ ಅತಿಥಿ-ಗಣ್ಯರಿಗೆ ಪುಷ್ಪಗುಚ್ಚವನ್ನಿತ್ತು ಗೌರವಿಸಿದರು. ಎಡ್ವರ್ಡ್‌ ರಸ್ಕಿನ್ಹಾ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು.  ಶಾಖಾ ಪ್ರಬಂಧಕ ವಿನೋದ್‌ ಶೆಟ್ಟಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು. 

ಆರ್‌ಬಿಐ ಸಂಸ್ಥೆಯ ಕಾನೂನು ಚೌಕಟ್ಟಿನೊಳಗೆ ಶ್ರಮಿಸಿ ಗ್ರಾಹಕರ ಹಣಕಾಸು ಬೇಡಿಕೆಗಳನ್ನು ಈಡೇರಿಸುವ ಜತೆಗೆ ಬ್ಯಾಂಕ್‌ನೂ° ವ್ಯವಸ್ಥಿತವಾಗಿ ಮುನ್ನಡೆಸುತ್ತಿರುವ ಅಭಿಮಾನ ನಮಗಿದೆ. ಆರ್ಥಿಕ ವ್ಯವಸ್ಥೆಯ ಸೇವೆಯಲ್ಲಿ  ಸದ್ಯ ಅತ್ಯುತ್ತಮ ಸೇವೆಯೊಂದಿಗೆ ಗುರುತಿಸಿಕೊಂಡಿರುವ ಬ್ಯಾಂಕ್‌ ಬೃಹತ್‌ ಬ್ಯಾಂಕ್‌ನಷ್ಟೇ ಸಮರ್ಥ ಸೇವಾ ಪ್ರಶಂಸೆಗೆ ಪಾತ್ರವಾಗಿರುವುದು  ಬ್ಯಾಂಕ್‌ನ ಸೇವಾ ವೈಶಿಷ್ಟéವನ್ನು ಪ್ರದರ್ಶಿಸುತ್ತಿದೆ. ಸಂಸ್ಥೆಯು ಕೇವಲ ಆರ್ಥಿಕ ಕ್ಷೇತ್ರದಲ್ಲಿ ಮಾತ್ರವಲ್ಲ, ಸಾಮಾಜಿಕ, ಶೈಕ್ಷಣಿಕ ರಂಗದಲ್ಲೂ ಮಹತ್ತರ ಸಾಧನೆಯನ್ನು ಮಾಡುತ್ತಿದೆ. ಪ್ರತೀ ವರ್ಷ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ 
ಶೈಕ್ಷಣಿಕವಾಗಿ ನೆರವಾಗುತ್ತಿದೆ.                                                                                      – ಆಲ್ಬರ್ಟ್‌ ಡಿ’ಸೋಜಾ, ಕಾರ್ಯಾಧ್ಯಕ್ಷ, ಮೋಡೆಲ್‌ ಬ್ಯಾಂಕ್‌

  ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next