Advertisement

ಜಿಲ್ಲೆಯಲ್ಲಿ 233 ಬಾಲಾಪರಾಧ ಪ್ರಕರಣಗಳು ಪತ್ತೆ: ಸತ್ಯನಾರಾಯಣಾಚಾರ್‌

10:10 PM Jun 12, 2019 | Sriram |

ಮಹಾನಗರ: ದ.ಕ.ಜಿಲ್ಲೆಯಲ್ಲಿ ಈ ವ ರೆಗೆ 233 ಬಾಲಾಪರಾಧ ಪ್ರಕರಣಗಳು ಪತ್ತೆಯಾ ಗಿದ್ದರೂ ಅವುಗಳಲ್ಲಿ 150 ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಧೀಶ ಸತ್ಯನಾರಾ ಯಣಾಚಾರ್‌ ತಿಳಿಸಿದ್ದಾರೆ.

Advertisement

ನಗರದ ಪುರಭವನದಲ್ಲಿ ಬುಧವಾರ ಆಯೋ ಜಿಸಲಾದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ ಪ್ರಯುಕ್ತ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಗು ಬಾಲಕಾರ್ಮಿಕನಾಗುವಲ್ಲಿ ಸಾಕಷ್ಟು ಕಾರಣಗಳಿರುತ್ತವೆ. ಇದು ಯಾರ ತಪ್ಪು ಎಂದು ವಿಶ್ಲೇಷಿಸುವುದುಕಷ್ಟಕರ. ಹೆತ್ತವರು ಮಕ್ಕಳನ್ನು ಶಾಲೆ ಯಿಂದ ಬಿಡಿಸಿ ಕೆಲಸಕ್ಕೆ ಕಳುಹಿಸುವುದರ ಹಿಂದೆ ಸಾಕಷ್ಟು ಕಾರಣವಿರುತ್ತವೆ. ಈ ಬಗ್ಗೆ ನಾವು ಗಂಭೀರವಾಗಿ ಚಿಂತನೆ ನಡೆಸುವುದರ ಜತೆಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ನಮ್ಮಲ್ಲಿ ಸಾಕಷ್ಟು ಕಾನೂನುಗಳಿದ್ದರೂ ಅನುಷ್ಠಾನದ ವೇಳೆ ಸಾಕಷ್ಟು ಅಡ್ಡಿ ಆತಂಕಗಳು ಎದುರಾಗುತ್ತವೆ. “ನಮ್ಮವರು’ ಎಂಬ ಪರಿಭಾಷೆಯಿಂದಾಗಿ ಅನು ಷ್ಠಾನದ ವೇಳೆ ಕಾನೂನಿನ ಕುಣಿಕೆಯಿಂದ ತಪ್ಪಿಸಲು ಪ್ರಯತ್ನಿಸಲಾಗುತ್ತದೆ. ಇದರಿಂದಾಗಿ ಹಲವು ಪ್ರಕರ ಣಗಳು ಬೆಳಕಿಗೆ ಬರುವುದೇ ಇಲ್ಲ. ಬಂದರೂ ನ್ಯಾಯ ಸಿಗದಂತಾಗುತ್ತದೆ ಎಂದರು.

ವಿದ್ಯಾಭ್ಯಾಸ ನೀಡಿ
ಪ್ರಜ್ಞಾ ಕೌನ್ಸಿಲಿಂಗ್‌ ಸೆಂಟರ್‌ನ ಮುಖ್ಯಸ್ಥೆ ಡಾ| ಹಿಲ್ಡಾ ರಾಯಪ್ಪನ್‌ ಮಾತನಾಡಿ, ಬಾಲ ಕಾರ್ಮಿಕರಾಗಿ ಪತ್ತೆಯಾಗುವ ಮಕ್ಕಳಿಗೆ ಪಾಲನ ಕೇಂದ್ರವಾಗಿ ಪ್ರಜ್ಞಾ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ಸಂಸ್ಥೆಯಿಂದ 22 ಮಕ್ಕಳಿಗೆ ಉನ್ನತ ಮಟ್ಟದ ವಿದ್ಯಾಭ್ಯಾಸ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿಸಲಾಗಿದೆ ಎಂದರು.

Advertisement

ಭಿಕ್ಷಾಟನೆಯಿಂದ ರಕ್ಷಿಸಲಾದ ಬಾಲಕಿಯೊಬ್ಬಳಿಗೆ ಪ್ರಜ್ಞಾ ರಕ್ಷಣೆ ನೀಡಿ ಸಲಹಿದ ಪರಿಣಾಮವಾಗಿ ಇಂದು ಆಕೆ ಫ್ಯಾಶನ್‌ ಡಿಸೈನಿಂಗ್‌ ಕೋರ್ಸ್‌ ಮುಗಿಸಿ, ತಿಂಗಳಿಗೆ 50,000 ರೂ. ಸಂಪಾದಿಸುವ ಸ್ವಾವಲಂಬಿ ಯುವತಿಯಾಗಿ ರೂಪುಗೊಂಡು ತನ್ನಂತಹ ಇತರ ಬಾಲಕಾರ್ಮಿಕ ಮಕ್ಕಳಿಗೆ ಆದರ್ಶಪ್ರಾಯಳಾಗಿದ್ದಾಳೆ ಎಂದು ಅವರು ಸಂತಸ ಹಂಚಿಕೊಂಡರು.

ಚಿಣ್ಣರ ತಂಗುಧಾಮ, ಇಂಚರ ಫೌಂಡೇಶನ್‌ ಮೊದಲಾದ ಸಂಸ್ಥೆಗಳ ಮಕ್ಕಳಿಗೆ ಶಾಲಾ ಬ್ಯಾಗ್‌ ವಿತರಿಸಲಾಯಿತು. ವಕೀಲರ ಸಂಘದ ಅಧ್ಯಕ್ಷ ಎಂ.ಆರ್‌. ಬಲ್ಲಾಳ್‌, ಮನಪಾ ಆಯುಕ್ತ ಬಿ.ಎಚ್‌. ನಾರಣಪ್ಪ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಜಿ. ಗಂಗಾಧರ್‌ ಉಪಸ್ಥಿತರಿದ್ದರು.

ಮಕ್ಕಳ ಭಿಕ್ಷಾಟನೆ ಹೆಚ್ಚಳ
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೆನ್ನಿ ಡಿ’ಸೋಜಾ ಮಾತನಾಡಿ, ನಗರದಲ್ಲಿ ಭಿಕ್ಷಾಟನೆಯಲ್ಲಿ ಮಕ್ಕಳು ತೊಡಗಿ ಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ.ಇತರ ಜಿಲ್ಲೆಗಳಿಗೆ ಹೋಲಿಸಿದರೆ ದ.ಕ. ಜಿಲ್ಲೆ ಬಾಲ ಕಾರ್ಮಿಕ ಮುಕ್ತ ಎಂದು ಹೇಳಬಹುದಾದರೂ ಘೋಷಣೆ ಮಾಡಲು ಸಾಧ್ಯವಿಲ್ಲ. 18 ವರ್ಷ ದವರೆಗಿನವರೂ ಮಕ್ಕಳೆಂದು ಪರಿಗಣಿಸ ಲಾಗಿರುವ ಹಿನ್ನೆಲೆಯಲ್ಲಿ 14ರಿಂದ 18 ವರ್ಷದವರೂ ಅಪಾಯಕಾರಿ ಉದ್ದಿಮೆ ಗಳಿಂದ ಹೊರಬಂದಿರುವುದನ್ನು ಖಾತರಿಪಡಿ ಸುವುದು ಅತ್ಯಗತ್ಯವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next