Advertisement

ದರ್ಶನ್‌ ಚಿತ್ರರಂಗ ಎಂಟ್ರಿಗೆ 23 ವರ್ಷ

11:54 AM Aug 12, 2020 | Suhan S |

‌ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಆಗಸ್ಟ್‌ 11ಕ್ಕೆ 23 ವರ್ಷವಾಗಿದೆ. ಹಾಗಂತ ಅವರ “ಮೆಜೆಸ್ಟಿಕ್‌’ ಚಿತ್ರ ಬಿಡುಗಡೆಯಾಗಿ 23 ವರ್ಷವಾಯಿತೇ ಎಂದು ನೀವು ಕೇಳಬಹುದು. ಖಂಡಿತಾ ಅಲ್ಲ, ಬದಲಾಗಿ ದರ್ಶನ್‌ ಮೊದಲ ಬಾರಿಗೆ ತೆರೆಮೇಲೆ ಕಾಣಿಸಿಕೊಂಡು 23 ವರ್ಷವಾಗಿದೆ. ಅದು “ಮಹಾಭಾರತ’ ಸಿನಿಮಾ ಮೂಲಕ.

Advertisement

ಹೌದು, ಎಸ್‌.ನಾರಾಯಣ್‌ ನಿರ್ದೇಶನದ “ಮಹಾಭಾರತ’ ಚಿತ್ರದಲ್ಲಿ ದರ್ಶನ್‌ ಪಾತ್ರ ಮಾಡಿದ್ದು, ಆ ಮೂಲಕ ಅಧಿಕೃತವಾಗಿ ಅವರು ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ಆ ಚಿತ್ರ 1997 ಆಗಸ್ಟ್‌ 11 ರಂದು ಬಿಡುಗಡೆಯಾಗಿತ್ತು. ಈಗ ಚಿತ್ರ ಬಿಡುಗಡೆಯಾಗಿ 23 ವರ್ಷವಾಗಿದೆ. ದರ್ಶನ್‌ ಅಭಿಮಾನಿಗಳು ಇದನ್ನು ಸಂಭ್ರಮಿಸುತ್ತಿದ್ದು, ಕಾಮನ್‌ ಡಿಪಿ ಬಿಡುಗಡೆ ಮಾಡಿದ್ದಾರೆ. “23 ಇಯರ್ ಆಫ್ ಬಾಸಿಸಂ’ ಎಂದು ದರ್ಶನ್‌ ರಾಬರ್ಟ್‌ ಲುಕ್‌ನಲ್ಲಿರುವ ಫೋಟೋ ಹಾಕಿದ್ದಾರೆ. ಇನ್ನು, ದರ್ಶನ್‌ ಅವರ ಚಿತ್ರರಂಗದಲ್ಲಿ 23 ವರ್ಷ ಪೂರೈಸಿದ್ದಕ್ಕೆ ಚಿತ್ರರಂಗದ ಅನೇಕರು ಶುಭಕೋರಿದ್ದಾರೆ.

ನಟರಾದ ನೆನಪಿರಲಿ ಪ್ರೇಮ್‌, ಅಭಿಷೇಕ್‌, ತರುಣ್‌ ಸುಧೀರ್‌, ನಿರ್ಮಾಪಕಿ ಶೈಲಜಾ ನಾಗ್‌ ಸೇರಿದಂತೆ ಅನೇಕರು ಶುಭ ಕೋರಿದ್ದಾರೆ. ನಟ ಅಭಿಷೇಕ್‌ ಅಂಬರೀಶ್‌, “ನಿಮ್ಮನ್ನು ನನ್ನ ಅಣ್ಣನಾಗಿ ಪಡೆದಿರುವುದು ನನ್ನ ಸೌಭಾಗ್ಯ…’ ಎಂದಿದ್ದಾರೆ.

ಸ‌ದ್ಯ ದರ್ಶನ್‌ ಅಭಿನಯದ “ರಾಬರ್ಟ್‌’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಆದರೆ, ಕೋವಿಡ್ ದಿಂದ ಚಿತ್ರರಂಗ ಸ್ತಬ್ಧವಾಗಿದ್ದು, ಚಿತ್ರಮಂದಿರ ತೆರೆಯುತ್ತಿದ್ದಂತೆ ಚಿತ್ರ ಬಿಡುಗಡೆಯಾಗಲಿದೆ. ಇನ್ನು, ರಾಬರ್ಟ್‌ ಚಿತ್ರದ ನಿರ್ಮಾಪಕ, ನಿರ್ದೇಶಕರೇ ದರ್ಶನ್‌ ಅವರಿಗೆ ಹೊಸ ಸಿನಿಮಾವೊಂದನ್ನು ಮಾಡುತ್ತಿದ್ದು ಈಗಾಗಲೇ ಸ್ಕ್ರಿಪ್ಟ್ ಪೂಜೆ ನಡೆದಿದೆ.­

Advertisement

Udayavani is now on Telegram. Click here to join our channel and stay updated with the latest news.

Next