Advertisement

ಯುನಿವರ್ಸಿಟಿ ಕಟ್ಟಡದಿಂದ ಹಾರಿ 23 ವರ್ಷ ವಿದ್ಯಾರ್ಥಿಯ ಆತ್ಮಹತ್ಯೆ

03:02 PM Jul 25, 2017 | Team Udayavani |

ಫ‌ಗ್ವಾರಾ : ಇಲ್ಲಿಗೆ ಸಮೀಪದ ಖಾಸಗಿ ವಿಶ್ವವಿದ್ಯಾಲಯದ 23ರ ಹರೆಯದ ವಿದ್ಯಾರ್ಥಿಯೋರ್ವ ಕ್ಯಾಂಪಸ್‌ ಕಟ್ಟಡದ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ ರಾಹುಲ್‌  ಉತ್ತರಾಖಂಡದ ಹರಿದ್ವಾರದವನಾಗಿದ್ದು ಅಂತಿಮ ವರ್ಷದ ಬಿ.ಫಾರ್ಮಾ ವಿದ್ಯಾರ್ಥಿಯಾಗಿದ್ದಾನೆ ಎಂದು ಚಹೇರೂ ಪೊಲೀಸ್‌ ಠಾಣೆಯ ಪ್ರಭಾರಾಧಿಕಾರಿ ಬಲ್‌ವೀಂದರ್‌ ಸಿಂಗ್‌ ಹೇಳಿದ್ದಾರೆ. 

ರಾಹುಲ್‌ ಡೆತ್‌ ನೋಟ್‌ ಬರೆದಿಟ್ಟಿದ್ದಾನೆ; ಆದರೆ ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದಿದ್ದಾನೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next