Advertisement

23 ವಲಸೆ ಕಾರ್ಮಿಕರು ರಾಜಸ್ಥಾನಕ್ಕೆ ಪ್ರಯಾಣ

09:10 AM May 11, 2020 | Suhan S |

ಹುಬ್ಬಳ್ಳಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಗರದಲ್ಲಿ ಉಳಿದುಕೊಂಡಿದ್ದ ರಾಜಸ್ಥಾನ ಮೂಲದ 23 ವಲಸಿಗರು ರವಿವಾರ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಮೂಲಕ ಇಲ್ಲಿನ ಗೋಕುಲ ರಸ್ತೆಯ ಹೊಸ ಬಸ್‌ ನಿಲ್ದಾಣದಿಂದ ತವರಿನತ್ತ ಪ್ರಯಾಣ ಬೆಳೆಸಿದರು.

Advertisement

ರಾಜಸ್ಥಾನದ ವಿವಿಧ ಜಿಲ್ಲೆಯವರಾಗಿದ್ದು, ಕಾರ್ಯ ನಿಮಿತ್ತ ಹಲವಾರು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದರು. ಇಲ್ಲಿಂದ ತಮ್ಮ ಮೂಲ ಸ್ಥಳಗಳಿಗೆ ತೆರಳಲು ಸೇವಾಸಿಂಧು ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಿ ಇ-ಪಾಸ್‌ ಪಡೆದಿದ್ದರು. ಇಂದು ಜಿಲ್ಲಾಡಳಿತದಿಂದ ಅನುಮತಿ ದೊರೆತ ಹಿನ್ನೆಲೆಯಲ್ಲಿ ವಾಕರಸಾ ಸಂಸ್ಥೆಯ ಕರಾರು ಒಪ್ಪಂದದ ಬಸ್ಸಿನಲ್ಲಿ ತವರು ರಾಜ್ಯಕ್ಕೆ ತೆರಳಿದರು.

ಎಲ್ಲಾ ಪ್ರಯಾಣಿಕರಿಗೆ ಮತ್ತು ಚಾಲಕರಿಗೆ ಮಾಸ್ಕ್, ಕೈ ಗವಸು, ಸ್ಯಾನಿಟೈಸರ್‌ ನೀಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ಮಾರ್ಗ ಮಧ್ಯದ ಅವಶ್ಯಕತೆಗೆ ತಕ್ಕಂತೆ ಶುದ್ಧ ಕುಡಿಯುವ ನೀರು, ಆಹಾರ ಪೊಟ್ಟಣಗಳ ವ್ಯವಸ್ಥೆ ಮಾಡಲಾಗಿದೆ. ಹುಬ್ಬಳ್ಳಿಯಿಂದ ಇದುವರೆಗೆ 6 ಬಸ್ಸುಗಳ ಮೂಲಕ ಒಟ್ಟು 145 ಜನರು ನಗರದಿಂದ ರಾಜಸ್ಥಾನಕ್ಕೆ ತೆರಳಿದಂತಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌.ರಾಮನಗೌಡರ್‌ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಉಳಿದುಕೊಂಡಿದ್ದು, ಹೊರ ರಾಜ್ಯಗಳಿಗೆ ತೆರಳುವ ಪ್ರಯಾಣಿಕರು ಸರ್ಕಾರದ ನಿರ್ದೇಶನಗಳ ಪ್ರಕಾರ ಸೇವಾ ಸಿಂಧು ವೆಬ್‌ಸೈಟ್‌ ಮೂಲಕ ಅಧಿಕೃತ ಇ-ಪಾಸ್‌ ಪಡೆದುಕೊಳ್ಳಬೇಕಾಗಿರುತ್ತದೆ. ಅಗತ್ಯ ದಾಖಲಾತಿಗಳೊಂದಿಗೆ ಪ್ರಯಾಣದವೆಚ್ಚವನ್ನು ಭರಿಸುವ ಆಧಾರದಲ್ಲಿ ವಾಕರಸಾ ಸಂಸ್ಥೆಯ ಕರಾರು ಒಪ್ಪಂದದ ಬಸ್ಸಿನಲ್ಲಿ ಪ್ರಯಾಣಿಸಬಹುದಾಗಿದೆ.

ಪ್ರಯಾಣಿಕರ ಅಗತ್ಯಕ್ಕನುಗುಣವಾಗಿ ವೇಗದೂತ ವಾಯವ್ಯ ಸಾರಿಗೆ, ರಾಜಹಂಸ ಮತ್ತು ಹವಾನಿಯಂತ್ರಣರಹಿತ ಸ್ಲಿಪರ್‌ ಬಸ್ಸುಗಳನ್ನು ನೀಡಲಾಗುತ್ತದೆ. ಹುಬ್ಬಳ್ಳಿ ಹೊಸ ಬಸ್‌ ನಿಲ್ದಾಣದಲ್ಲಿ ವಿಶೇಷ ಕೌಂಟರ್‌ ತೆರೆಯಲಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ: 7760991663, 9448631581, 9686672236 ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

Advertisement

ನಗರದಲ್ಲಿ ನೆಲೆಸಿರುವ ರಾಜಸ್ಥಾನ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದು ತವರಿನತ್ತ ಪ್ರಯಾಣ ಬೆಳಸಿದ ಎಲ್ಲರಿಗೂ ಶುಭ ಕೋರಿ ಬೀಳ್ಕೊಟ್ಟರು. ಘಟಕ ವ್ಯವಸ್ಥಾಪಕ ವೈ.ಎಂ. ಶಿವರೆಡ್ಡಿ, ಸಹಾಯಕ ಸಂಚಾರ ಅಧೀಕ್ಷಕ ನಾಗರಾಜ, ನಿಲ್ದಾಣಾಧಿಕಾರಿಗಳಾದ ಕುರ್ತುಕೋಟಿ, ಕೋಟೂರ ಇನ್ನಿತರರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next