ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಬುಧವಾರ ಒಂದೇ ದಿನ 23 ಕೋವಿಡ್-19 ಸೋಂಕು ಪತ್ತೆಯಾಗಿವೆ. ಇದರಲ್ಲಿ ಜಿಂದಾಲ್ ಸಂಸ್ಥೆಯ ಸೋಂಕಿತರೊಅದಿಗೆ ಸಂಪರ್ಕದಲ್ಲಿದ್ದ 19 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಮತ್ತೊಂದು ಜ್ಯೂಬ್ಲಿಯಂಟ್ ಕಾರ್ಖಾನೆಯಾಗಿ ಜಿಂದಾಲ್ ಮಾರ್ಪಟ್ಟಂತಾಗಿದೆ. 23 ಸೋಂಕಿತರಲ್ಲಿ 19 ಪುರುಷರು, 4 ಮಹಿಳೆಯರಿಗೆ ಸೋಂಕು ಆವರಿಸಿದೆ.
ಜಿಲ್ಲೆಯ ಸಿರಗುಪ್ಪ ಫೀವರ್ ಕ್ಲಿನಿಕ್‌ನ ಒಂದು ಪ್ರಕರಣವಾದರೇ ಇನ್ನೆರಡು ಮಹಾರಾಷ್ಟ್ರದಿಂದ ಬಂದ ಟ್ರಾವೆಲ್ ಹಿಸ್ಟರಿ ಇದೆ. ಇನ್ನೊಬ್ಬರು ಆರೋಗ್ಯ ಸಿಬ್ಬಂದಿಯಾಗಿದ್ದಾರೆ. ಸೊಂಕಿತರನ್ನು ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಕುಲ್ ತಿಳಿಸಿದ್ದಾರೆ.
ಜಿಂದಾಲ್‌ನಲ್ಲಿ ಇನ್ನೂ ಐದು ದಿನಗಳ ಕಾಲ ಕನಿಷ್ಠ ಸಿಬ್ಬಂದಿಗಳೊಅದಿಗೆ ಕೊರೆಕ್ಸ್ ಪ್ಲಾಂಟ್ ನಿರ್ವಹಿಸಲು ಸೂಚಿಸಲಾಗಿದೆ ಮತ್ತು ಜಿಂದಾಲ್‌ನಲ್ಲಿ ಅಗತ್ಯ ಕ್ವಾರಂಟೈನ್ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಿಂದಾಲ್ ಸಂಸ್ಥೆಯ 36 ಸೋಂಕಿತರು ಸೇರಿ ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 94 ಪ್ರಕರಣಗಳು ಪತ್ತೆಯಾಗಿದ್ದು, 49 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದು, ಇನ್ನುಳಿದ 44 ಪ್ರಕರಣಗಳು ಸಕ್ರಿಯವಾಗಿವೆ.