Advertisement

2256 ಜನರ ವರದಿ ನೆಗೆಟಿವ್‌

05:42 AM May 21, 2020 | Team Udayavani |

ಯಾದಗಿರಿ: ಕೋವಿಡ್‌-19 ಪರೀಕ್ಷೆಗಾಗಿ ಜಿಲ್ಲೆಯಿಂದ ಕಳುಹಿಸಿದ್ದ ಮಾದರಿಗಳಲ್ಲಿ ಬುಧವಾರ 140 ಮಾದರಿಗಳ ವರದಿ ನೆಗೆಟಿವ್‌ ಬಂದಿದ್ದು, ಮೇ 20ರ ವರೆಗೆ ಒಟ್ಟು 2,256 ಮಾದರಿಗಳ ವರದಿ ನೆಗೆಟಿವ್‌ ಬಂದಂತಾಗಿದೆ. 469 ಹೊಸ ಮಾದರಿಗಳು ಸೇರಿದಂತೆ 1,857 ಮಾದರಿಗಳ ವರದಿ ಬರಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್‌ ರಜಪೂತ್‌ ತಿಳಿಸಿದ್ದಾರೆ.

Advertisement

ಬುಧವಾರ ಕೋವಿಡ್ ಸೋಂಕು ದೃಢಪಟ್ಟ 55 ವರ್ಷದ ಮಹಿಳೆ (ಪಿ-1448) ಸೇರಿದಂತೆ ಈವರೆಗೆ ಕೋವಿಡ್‌-19 ಖಚಿತಪಟ್ಟ ಪಿ-867, ಪಿ-868, ಪಿ-1139, ಪಿ-1140, ಪಿ-1141, ಪಿ-1187, ಪಿ-1188, ಪಿ-1189, ಪಿ-1190, ಪಿ-1191, ಪಿ-1192, ಪಿ-1256 ಒಟ್ಟು 13 ವ್ಯಕ್ತಿಗಳ ಆರೋಗ್ಯ ಸ್ಥಿರವಾಗಿದೆ.ಹೊಸ ಜಿಲ್ಲಾಸ್ಪತ್ರೆ ಐಸೋಲೇಷನ್‌ ವಾರ್ಡ್‌ನಲ್ಲಿ 17 ಜನರನ್ನು ಪತ್ಯೇಕವಾಗಿರಿಸಲಾಗಿದೆ. ಶಹಾಪುರ ಎಸ್‌ಐಸಿನಲ್ಲಿ 30 ಜನ ಮತ್ತು ಸುರಪುರ ಸೂಪರ್‌ ಕ್ವಾರಂಟೈನ್‌ ಸೆಂಟರ್‌ನಲ್ಲಿ 53 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ.

ಪ್ರಾಥಮಿಕ ಸಂಪರ್ಕದಲ್ಲಿದ್ದ 149 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 590 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯ ಒಟ್ಟು 189 ಇನ್‌ಸ್ಟಿಟ್ಯೂಶನಲ್‌ ಕ್ವಾರಂಟೈನ್‌ ಸೆಂಟರ್‌ಗಳಲ್ಲಿ ಮೇ 20ರ ವರೆಗೆ ಒಟ್ಟು 12854 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next