Advertisement

ಆರ್ಟಿಕಲ್‌ 370 ರದ್ದತಿ ನಂತರ ಪಾಕ್ ನಿಂದ 222 ಬಾರಿ ಕದನ ವಿರಾಮ ಉಲ್ಲಂಘನೆ

09:43 AM Aug 31, 2019 | keerthan |

ಶ್ರೀನಗರ: ಕೇಂದ್ರ ಸರಕಾರ ಜಮ್ಮು ಕಾಶ್ಮೀರದ ವಿಶೇಷ ಪ್ರಾತಿನಿಧ್ಯದ ಆರ್ಟಿಕಲ್‌ 377 ಮತ್ತು 35 ಎ ರದ್ದುಗೊಳಿಸಿದ ನಂತರ ವಿಚಲಿತವಾಗಿರುವ ಪಾಕಿಸ್ಥಾನ ಗಡಿ ಭಾಗದಲ್ಲಿ 222 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂದು ವರದಿಯಾಗಿದೆ.

Advertisement

ಕೇಂದ್ರ ಸರಕಾರದ ವರದಿಯಂತೆ ಗಡಿ ನಿಯಂತ್ರಣ ರೇಖೆ ಸೇರಿದಂತೆ ಜಮ್ಮು ಕಾಶ್ಮೀರದಲ್ಲಿ ಪಾಕಿಸ್ಥಾನ ಈ ವರ್ಷ ಇದುವರೆಗೆ 1900 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಆಗಸ್ಟ್‌ 5ರ ನಂತರ 222 ಸಲ ಪಾಕಿಸ್ಥಾನ ಈ ರೀತಿ ಉದ್ಧಟತನ ಮೆರೆದಿದೆ ಎಂದು ತಿಳಿದುಬಂದಿದೆ.

ದಿನಪ್ರತಿ ಸರಾಸರಿ ಕನಿಷ್ಠ 10 ಬಾರಿಯಾದರೂ ಉಭಯ ದೇಶಗಳಿಂದ ಗುಂಡಿನ ಮುಖಾಮುಖಿ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಾಶ್ಮೀರ ವಿವಾದವನ್ನು ಅಂತಾರಾಷ್ಟ್ರೀಯ ವಿಷಯವನ್ನಾಗಿಸಲು ಪಾಕಿಸ್ಥಾನ ಪ್ರಯತ್ನಿಸುತ್ತಿದ್ದು, ಇದಲ್ಲದೇ ಭಾರತದೊಳಗೆ ಉಗ್ರರು ನುಸುಳಲು ದಾರಿ ಮಾಡಲು ಪಾಕಿಸ್ಥಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next