ಯಲಬುರ್ಗಾ: ಪಟ್ಟಣದಲ್ಲಿ ಒಂದೂವರೆ ವರ್ಷದೊಳಗೆ 220 ಕೆವಿ ವಿದ್ಯುತ್ ಸ್ಟೇಷನ್ ನಿರ್ಮಾಣವಾಗಲಿದ್ದು, ವಿದ್ಯುತ್ ಸ್ಟೇಷನ್ ನಿಂದ ಜಾರಿಯಾಗಲಿರುವ ನೀರಾವರಿ ಯೋಜನೆಗೆ ರೈತರಿಗೆ ಅನುಕೂಲವಾಗಲಿದೆ ಎಂದು ಶಾಸಕ ಹಾಲಪ್ಪ ಆಚಾರ ಹೇಳಿದರು.
ತಾಲೂಕಿನ ಬೇವೂರು ಗ್ರಾಮದಲ್ಲಿ ಗುರುವಾರ ನೂತನ 110 ಕೆವಿ ಸ್ಟೇಷನ್ ಲೋರ್ಕಾಪಣೆಗೊಳಿಸಿ ಅವರುಮಾತನಾಡಿದರು. ಈಗಾಗಲೇ 12 ಎಕರೆ ಜಮೀನು ಖರೀದಿ ಮಾಡಲಾಗಿದೆ. ಟೆಂಡರ್ ಪ್ರಕ್ರಿಯೆ ಹಂತದಲಿದ್ದು ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು 220 ಕೆವಿ ಸ್ಟೇಷನ್ ನಿರ್ಮಾಣವಾಗಲಿದೆ. ಇದು ಜಿಲ್ಲೆಯಲ್ಲೇ ದೊಡ್ಡದಾದ ವಿದ್ಯುತ್ ಪ್ರಸರಣ ಘಟಕವಾಗಿದೆ. ಈಗಾಗಲೇ ತಾಲೂಕಿನ ಗಾಣಧಾಳ, ಬೇವೂರು, ವಜ್ರಬಂಡಿ, ಹಿರೇವಂಕಲಕುಂಟಾ, ಬಂಡಿ, ಹಿರೇಮ್ಯಾಗೇರಿ ಗ್ರಾಮಗಳಲ್ಲಿದ್ದ 30 ಕೆವಿ ಸ್ಟೇಷನ್‌ಗಳನ್ನು 110 ಕೆವಿ ಸ್ಟೇಷನ್‌ಗಳನ್ನಾಗಿ ಪರಿವರ್ತಿಸಿ ಮೇಲ್ದರ್ಜೆಗೇರಿಸಲಾಗಿದೆ. ಇದರಿಂದ ರೈತರಿಗೆ, ಗ್ರಾಹಕರಿಗೆ ಯಾವುದೇ ವಿದ್ಯುತ್ ಸಮಸ್ಯೆಯಾಗುವುದಿಲ್ಲ ಎಂದರು.
ಕೊಪ್ಪಳ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಿ ತಾಲೂಕಿಗೆ ನೀರು ತಂದೆ ತರುತ್ತೇನೆ ಎಂಬ ಆತ್ಮವಿಶ್ವಾಸವಿದೆ. ಕೋವಿಡ್, ಅತಿವೃಷ್ಟಿಯಿಂದ ಸರಕಾರದಲ್ಲಿಹಣದ ಸಮಸ್ಯೆ ಇದ್ದು, ಸ್ವಲ್ಪ ಅಭಿವೃದ್ಧಿ ಕಾಮಗಾರಿಗಳಿಗೆ ವಿಳಂಬವಾಗಿದೆ ಎಂದರು.
ಒಟ್ಟಾರೆಯಾಗಿ ರೈತರ ಶ್ರೇಯೋಭಿವೃದ್ಧಿಗಾಗಿ ಹಗಲಿರುಳುಶ್ರಮಿಸುತ್ತಿದ್ದೇನೆ. ಮಾತು ಕಡಿಮೆ ಕೆಲಸ ಜಾಸ್ತಿ ಮಾಡುತ್ತೇನೆ. ವಿನಾಕಾರಣ ಮಾತನಾಡುವುದಿಲ್ಲ. ತಾಲೂಕಿನ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಶೂನ್ಯವಾಗಿದೆ ಎಂದರು. ಮುನಿರಬಾದ್ ಜೆಸ್ಕಾಂ ಅಧಿಧೀಕ್ಷಕ ಪ್ರಹ್ಲಾದ ಮಾತನಾಡಿ, ಶಾಸಕ ಹಾಲಪ್ಪ ಆಚಾರ ಅವರು ರೈತರ ಅಭಿವೃದ್ಧಿಗಾಗಿ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ತಾಲೂಕಿನ ರೈತರಿಗೆ ಗುಣಮಟ್ಟದ ಹಾಗೂನಿರಂತರ ವಿದ್ಯುತ್ ಪೂರೈಸುವಂತೆ ನಮಗೆ ಸೂಚಿಸಿದ್ದಾರೆ ಎಂದರು.
ಜಿಪಂ ಸದಸ್ಯೆ ಪ್ರೇಮಾ ಕುಡಗುಂಟಿ, ತಾಪಂ ಸದಸ್ಯ ಶಂಕರಗೌಡ ಟಣಕನಕಲ್, ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ವೀರಣ್ಣ ಹುಬ್ಬಳ್ಳಿ, ಸಿದ್ದು ಮಣ್ಣಿನವರ, ಕಳಕಪ್ಪ ತಳವಾರ, ಬಾಪುಗೌಡ ಪಾಟೀಲ, ಅಯ್ಯನಗೌಡ ಕೆಂಚಮ್ಮನವರ, ಶಿವಪ್ಪವಾದಿ, ಮಂಜುನಾಥ ಗಟ್ಟೆಪ್ಪನವರ, ಇಒ ಜಯರಾಮ್, ಗುತ್ತಿಗೆದಾರ ಅದ್ವೀಕ, ಜೆಸ್ಕಾಂನ ಎಂ.ಎಸ್. ಪತ್ತಾರ, ಫಣಿರಾಜ್, ಆದೇಶ ಹುಬ್ಬಳ್ಳಿ, ಸಿಪಿಐ ಎಂ. ನಾಗರಡ್ಡಿ, ಶರಣು, ಮಂಜುನಾಥ, ಮುಖಂಡರು ಹಾಗೂ ಇತರರು ಇದ್ದರು.
ಬೇವೂರು ಹೋಬಳಿ ಕೇಂದ್ರಕ್ಕೆ ಪ್ರಯತ್ನ : ತಾಲೂಕಿನಲ್ಲೇ ಅತೀ ದೊಡ್ಡದಾದ ಗ್ರಾಮ ಬೇವೂರನ್ನು ಹೋಬಳಿ ಕೇಂದ್ರವನ್ನಾಗಿ ಘೋಷಿಸುವಂತೆ ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇನೆ. ಮುಖ್ಯಮಂತ್ರಿಗಳು ಸ್ಪಂದಿಸಿ ಕಂದಾಯ ಇಲಾಖೆಗೆ ಸೂಚಿಸಿದ್ದಾರೆ. ಬೇವೂರು ನನ್ನ ನೆಚ್ಚಿನ ಗ್ರಾಮ ಬೇವೂರು ಗ್ರಾಮಕ್ಕೆ ಸಿಸಿ ರಸ್ತೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಿದ್ದೇನೆ
– ಹಾಲಪ್ಪ ಆಚಾರ, ಶಾಸಕ