Advertisement
ಈ ಹಿನ್ನೆಲೆಯಲ್ಲಿ ಅವುಗಳು ಬಾಡಿಗೆ ಆಧಾರಿತವಾಗಿ ಅಥವಾ ಸ್ವಯಂ ಸೇವಾ ಸಂಸ್ಥೆ-ದಾನಿಗಳ ಕಟ್ಟಡದಲ್ಲಿಯೇ ಅಂಗನ ವಾಡಿ ಕೇಂದ್ರವನ್ನು ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.
Related Articles
Advertisement
ಬೆಳ್ತಂಗಡಿ ವ್ಯಾಪ್ತಿಯ 324 ಅಂಗನವಾಡಿ ಕೇಂದ್ರಗಳ ಪೈಕಿ 317, ಪುತ್ತೂರಲ್ಲಿ 370ರ ಪೈಕಿ 368 ಸ್ವಂತ ಕಟ್ಟಡ, ವಿಟ್ಲದಲ್ಲಿ 229ರ ಪೈಕಿ 225 ಹಾಗೂ ಬಂಟ್ವಾಳದಲ್ಲಿ 341ರ ಪೈಕಿ 321 ಕೇಂದ್ರಗಳು ಸ್ವಂತ ಕಟ್ಟಡ ಹೊಂದಿವೆ. ವಿಶೇಷ ವೆಂದರೆ ಸುಳ್ಯದಲ್ಲಿರುವ ಎಲ್ಲ 165 ಅಂಗನವಾಡಿ ಕೇಂದ್ರಗಳು ಸಂತ ಕಟ್ಟಡ ಹೊಂದಿವೆ.
20 ಕಟ್ಟಡಕ್ಕೆ ಸ್ವಂತ ನಿವೇಶನ :
ಸ್ವಂತ ಕಟ್ಟಡ ಇಲ್ಲದ ಅಂಗನವಾಡಿ ಕೇಂದ್ರಗಳ ಪೈಕಿ 20 ಕಟ್ಟಡಗಳಿಗೆ ನಿವೇಶನ ಲಭ್ಯವಿವೆ. ಮಂಗಳೂರು ಗ್ರಾಮಾಂ ತರದಲ್ಲಿರುವ ಕೊಂಡಾಣ, ಗುಂಡೀರು, ಚೆಂಬುಗುಡ್ಡೆ, ಜ್ಯೋತಿನಗರ, ಮಂಗಳೂರು ನಗರದಲ್ಲಿ ಬೀಡು, ಶಿವನಗರ, ಕಾಟಿಪಳ್ಳ 3ನೇ ವಿಭಾಗ, ಜೋಡುಕಟ್ಟೆ ಮರೋಳಿ, ದಯಾಂಬು ಬೋರುಗುಡ್ಡೆ ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಲಭ್ಯವಿವೆ. ಬೆಳ್ತಂಗಡಿಯ ಕೆಲ್ಲಗುತ್ತು, ಸುದೇಮುಗೇರು, ಬಂಟ್ವಾಳದ ಅಡ್ಕ, ಸಜೀಪಮೂಡದ ಕೊಲ್ಯ, ಸಜೀಪಮುನ್ನೂರಿನ ಮರ್ತಾಜೆ, ಪುತ್ತೂರಿನ ವಾಳ್ಯ, ಪಂಜಿಗುಡ್ಡೆ, ವಿಟ್ಲದ ಮಾಣಿಯ ಹಳೀರ, ಕರೋಪಾಡಿಯ ಪದ್ಯಾಣ, ವಿಟ್ಲ ಪಟ್ನೂರಿನ ಬೆದ್ರಕಾಡು, ಕರೋಪಾಡಿಯ ಪಳ್ಳದ ಕೋಡಿ ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಲಭ್ಯವಿವೆ.
ಸೂರು ಇಲ್ಲದ ಅಂಗನವಾಡಿ ಕೇಂದ್ರಗಳ ಸಂಖ್ಯೆ :
ತಾಲೂಕು ಸಂಖ್ಯೆ
ಮಂಗಳೂರು ನಗರ 126
ಮಂಗಳೂರು ಗ್ರಾಮಾಂತರ 61
ಬಂಟ್ವಾಳ 20
ಬೆಳ್ತಂಗಡಿ 7
ವಿಟ್ಲ 4
ಪ್ರಸ್ತುತ 1,884 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡದಲ್ಲಿ ನಡೆಯುತ್ತಿದ್ದು, ಉಳಿದಂತೆ 24 ಹೊಸ ಕಟ್ಟಡಗಳ ಕಾಮಗಾರಿ ಸದ್ಯ ಪ್ರಗತಿಯಲ್ಲಿವೆ. ಆದರೂ ಎಲ್ಲ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಯಾವುದೇ ಸಮಸ್ಯೆ ಆಗದಂತೆ ಕುಡಿಯುವ ನೀರು, ಶೌಚಾಲಯ ಸಹಿತ ಮೂಲ ಸೌಕರ್ಯವನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡ ಲಾಗಿದೆ. ನರೇಗಾ ಹಾಗೂ ಇತರ ಯೋಜನೆಯಡಿ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಾಣದ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತಿದೆ. –ಪಾಪಾ ಬೋವಿ, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ-ದ.ಕ.