Advertisement

Whatsappನಲ್ಲಿ ಪರಿಚಯವಾದ ವ್ಯಕ್ತಿಯನ್ನು ವರಿಸಲು ಭಾರತದಿಂದ ಪಾಕ್‌ಗೆ ತೆರಳಿದ 2 ಮಕ್ಕಳ ತಾಯಿ

11:28 AM Feb 08, 2024 | Team Udayavani |

ಶ್ರೀನಗರ: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯುನ್ನು ಮದುವೆಯಾಗುವ ನಿಟ್ಟಿನಲ್ಲಿ ನಾಲ್ಕು ಮಕ್ಕಳ ತಾಯಿ ಸೀಮಾ ಹೈದರ್‌ ಪಾಕಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿದ್ದಾರೆ. ಫೇಸ್‌ ಬುಕ್‌ ನಲ್ಲಿ ಪರಿಚಯವಾದ ಗೆಳೆಯನಿಗಾಗಿ ರಾಜಸ್ಥಾನದ ಅಂಜು ಪಾಕಿಸ್ತಾನಕ್ಕೆ ತೆರಳಿದ ಘಟನೆ ನಿಮಗೆ ನಿಮಗೆ ನೆನಪಿರಬಹುದು.

Advertisement

ಇದೀಗ ಇಂಥದ್ದೇ ಮತ್ತೊಂದು ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ. ವಾಟ್ಸಾಪ್‌ ನಲ್ಲಿ ಪರಿಚಯವಾದ ವ್ಯಕ್ತಿಯನ್ನು ಮದುವೆಯಾಗುವ ನಿಟ್ಟಿನಲ್ಲಿ ಎರಡು ಮಕ್ಕಳ ತಾಯಿಯೊಬ್ಬಳು ಪಾಕಿಸ್ತಾನಕ್ಕೆ ತೆರಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯ 22 ವರ್ಷದ ಮಹಿಳೆ ಶಬ್ನಮ್ ಬಿ ‌ ಗುಲಾಮ್ ರುಬಾನಿ ಅವರನ್ನು ಮದುವೆಯಾಗಿದ್ದಾರೆ. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಶಬ್ನಮ್ ಅವರ ಪತಿ ಭಾನುವಾರ(ಫೆ.4 ರಂದು) ಪತ್ನಿ ನಾಪತ್ತೆಯಾಗಿರುವ ಪ್ರಕರಣವನ್ನು ದಾಖಲಿಸಿದ್ದಾರೆ. ತನ್ನ ಕಿರಿಯ ಮಗಳೊಂದಿಗೆ ಪತ್ನಿ ಹೋಗಿದ್ದಾಳೆ ಎಂದು ಪತಿ ದೂರಿನಲ್ಲಿ ಹೇಳಿದ್ದಾರೆ.

ಪೊಲೀಸರು ತನಿಖೆ ಆರಂಭಿಸಿದ್ದು, ಪಾಕಿಸ್ತಾನದಲ್ಲಿ ಮಹಿಳೆ ಮೂವರು ಚಿಕ್ಕಪ್ಪಂದಿರು ಹಾಗೂ ಚಿಕ್ಕಮ್ಮ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ. ಮಹಿಳೆ ಪಾಕಿಸ್ತಾನದ ವ್ಯಕ್ತಿಯೊಬ್ಬನ ಜೊತೆ ವಾಟ್ಸಾಪ್‌ ನಲ್ಲಿ ಸಂಪರ್ಕದಲ್ಲಿದ್ದು, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ. ಆತ ಮದುವೆಯಾಗುವ ಭರವಸೆ ನೀಡಿದ್ದು, ಈ ಕಾರಣದಿಂದ ಮಹಿಳೆ ಪಾಕಿಸ್ತಾನಕ್ಕೆ ತೆರಳಿದ್ದಾರೆ ಎಂದು ವರದಿ ತಿಳಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next