Advertisement

22 ಮಂದಿಯ ಭವಿಷ್ಯ ಬರೆಯಲಿದ್ದಾರೆ 4,40,730 ಮತದಾರರು

02:21 AM Apr 18, 2019 | sudhir |

ಮಡಿಕೇರಿ :ಕೊಡಗು- ಮೈಸೂರು ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆ-2019 ರ ಸಂಬಂಧವಾಗಿ ಏಪ್ರಿಲ್‌, 18 ರಂದು ನಡೆಯಲಿರುವ ಮುಕ್ತ ಹಾಗೂ ನ್ಯಾಯಸಮ್ಮತ ಮತದಾನಕ್ಕಾಗಿ ಜಿಲ್ಲಾಡಳಿತವು ಸಜ್ಜುಗೊಂಡಿದೆ ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ತಿಳಿಸಿದ್ದಾರೆ.

Advertisement

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 269 ಮತಗಟ್ಟೆಗಳು ಅದರಲ್ಲಿ 109,294 ಪುರುಷ ಮತದಾರರು, 1,11,853 ಮಹಿಳಾ ಮತದಾರರು, 10 ಇತರ ಮತದಾರರು ಒಟ್ಟು 2,21,157 ಮತದಾರರಿದ್ದಾರೆ.

ಹಾಗೆಯೇ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 274 ಮತಗಟ್ಟೆಗಳಿದ್ದು, ಅದರಲ್ಲಿ 1,09,573 ಪುರುಷ ಮತದಾರರು, 1,09,985 ಮಹಿಳಾ ಮತದಾರರು, 15 ಇತರ ಮತದಾರರು ಒಟ್ಟು 2,19,573 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಅವರು ವಿವರಿಸಿದರು.

ಜಿಲ್ಲೆಯಲ್ಲಿ ಒಟ್ಟು 543 ಮತಗಟ್ಟೆಗಳಿದ್ದು, 2,18,867 ಪುರುಷ ಮತದಾರರು, 2,21,838 ಮಹಿಳಾ ಮತದಾರರು, 25 ಇತರೆ ಒಟ್ಟು 4,40,730 ಮತದಾರರಿದ್ದಾರೆ ಎಂದು ಅನೀಸ್‌ ಕಣ್ಮಣಿ ಜಾಯ್‌ ಅವರು ವಿವರಿಸಿದರು.

ಮತದಾನ ಸಿಬಂದಿ
ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 543 ಮತಗಟ್ಟೆಗಳಿಗೆ ಒಟ್ಟು 571 ಮತಗಟ್ಟೆ ಅಧ್ಯûಾಧಿಕಾರಿಗಳು, 571 ಸಹಾಯಕ ಮತಗಟ್ಟೆ ಅಧ್ಯûಾಧಿಕಾರಿ ಹಾಗೂ 1142 ಮತದಾನಾಧಿಕಾರಿಗಳನ್ನು ನೇಮಕ ಮಾಡಲಾಗಿರುತ್ತದೆ. (ಮೀಸಲು ಸೇರಿ) ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ಎರಡು ಹಂತದಲ್ಲಿ ತರಬೇತಿಯನ್ನು ನೀಡಲಾಗಿದೆ ಎಂದರು. ಪ್ರತಿ ಮತಗಟ್ಟೆಗೆ ಒಬ್ಬರು ಮತಗಟ್ಟೆ ಅಧ್ಯûಾಧಿಕಾರಿ, ಒಬ್ಬರು ಸಹಾಯಕ ಅಧ್ಯûಾಧಿಕಾರಿ ಮತ್ತು ಇಬ್ಬರು ಮತದಾನಾಧಿಕಾರಿಗಳನ್ನು ನೇಮಿಸಲಾಗಿದೆ. ಇವರೊಂದಿಗೆ ಸ್ಥಳೀಯವಾಗಿ ಒಬ್ಬರು ಗ್ರೂಪ್‌ ಡಿ ಮತ್ತು ಮತದಾರರನ್ನು ಗುರುತಿಸಲು ಪ್ರತಿ ಮತಗಟ್ಟೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

Advertisement

ಪ್ರಜಾಪ್ರಾತಿನಿಧ್ಯ ಅಧಿನಿಯಮ 1951 ರ ಸೆಕ್ಷನ್‌ 128 ಮತ್ತು ಚುನಾವಣೆ ನಡೆಸುವ ನಿಯಮ 39 ರಂತೆ ಮೊಬೈಲ್‌ ಮತ್ತು ಕೆಮರಾಗಳಲಿ ಛಾಯಾಚಿತ್ರಗಳನ್ನು ತೆಗೆಯುವುದು ಮತದಾನದ ರಹಸ್ಯ ಉಲ್ಲಂ ಸಿದಂತಾಗುತ್ತದೆ ಎಂದರು.

ಇಂದು ಮತದಾನ
ಮತದಾನವು ಎ. 18 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಉಪಯೋಗಿಸಲಾಗು ತ್ತಿರುವ ವಾಹನಗಳು: ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳ ಮತದಾನಾಧಿ ಕಾರಿಗಳು ಮತಗಟ್ಟೆಗೆ ತಲುಪಲು ಒಟ್ಟು 90 ಕೆಎಸ್‌ಆರ್‌ಟಿಸಿ ಬಸ್ಸುಗಳು, 87 ಜೀಪ್‌ಗ್ಳು ಹಾಗೂ 51 ಮಿನಿ ಬಸ್‌ ಮತ್ತು 13 ಮ್ಯಾಕ್ಸಿಕ್ಯಾಬ್‌ ಉಪಯೋಗಿಸಲಾಗುತ್ತಿದೆ. ವಿಶೇಷಚೇತನ ಮತದಾರರನ್ನು ಅವರ ಮನೆಯಿಂದ ಮತಗಟ್ಟೆಗೆ ಕರೆದು ಕೊಂಡು ಹೋಗಲು ಮತ್ತು ಅವರು ಮತದಾನ ಮಾಡಿದ ನಂತರ ವಾಪಸ್ಸು ಮನೆಗೆ ಬಿಡುವ ಕಾರ್ಯಕ್ಕೆ ಒಟ್ಟು 176 ವಾಹನಗಳನ್ನು ಉಪಯೋಗಿ ಸಲಾಗುತ್ತಿದೆ ಎಂದು ಅನೀಸ್‌ ಕಣ್ಮಣಿ ಜಾಯ್‌ ಅವರು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next