ಯಾದಗಿರಿ: ಜಿಲ್ಲೆಯಲ್ಲಿ ಇಂದು 22 ಜನರಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ.
ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 809ಕ್ಕೆ ಏರಿಕೆಯಾದಂತಾಗಿದೆ.
ಯಾದಗಿರಿ ತಾಲೂಕಿನ ಯರಗೋಳ ತಾಂಡಾದ 4 ವರ್ಷದ ಬಾಲಕಿ (ಪಿ-6944) ಸೇರಿದಂತೆ ಅದೇ ತಾಂಡಾದ 28 ವರ್ಷದ ಮಹಿಳೆ (ಪಿ-6941), 10 ವರ್ಷದ ಬಾಲಕಿ (ಪಿ-6942), 6 ವರ್ಷದ ಬಾಲಕಿ (ಪಿ-6943), 26 ವರ್ಷದ ಮಹಿಳೆ (ಪಿ-6945)ಹಾಗೂ 6 ವರ್ಷದ ಬಾಲಕಿ (ಪಿ-6946) ಸೇರಿದಂತೆ ಒಟ್ಟು 22 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.
ಗುರುಮಠಕಲ್ ತಾಲೂಕಿನ ಕೊಂಕಲ್ ಗ್ರಾಮದ 32 ವರ್ಷದ ಪುರುಷ (ಪಿ-6934) ಅದೇ ಗ್ರಾಮದ 24 ವರ್ಷದ ಮಹಿಳೆ (ಪಿ-6935), ಗಾಜರಕೋಟನ 50 ವರ್ಷದ ಪುರುಷ (ಪಿ-6938), ಯಾದಗಿರಿ ನಗರದ 41 ವರ್ಷದ ಪುರುಷ (ಪಿ-6936), ಶಹಾಪುರ ತಾಲೂಕಿನ ಉಕ್ಕಿನಾಳ ಗ್ರಾಮದ 33 ವರ್ಷದ ಮಹಿಳೆ (ಪಿ-6937), ವಡಗೇರಾದ 21 ವರ್ಷದ ಪುರುಷ (ಪಿ-6939), ಯಾದಗಿರಿ ತಾಲೂಕಿನ ಮೈಲಾಪುರ ಅಗಸಿಯ 62 ವರ್ಷದ ಪುರುಷ (ಪಿ-6940), ಅಲ್ಲಿಪುರ ತಾಂಡಾದ 8 ವರ್ಷದ ಬಾಲಕಿ (ಪಿ-6947), ಮೈಲಾಪುರ ಅಗಸಿಯ 29 ವರ್ಷದ ಪುರುಷ (ಪಿ-6948), ಮೈಲಾಪುರ ಅಗಸಿಯ 25 ವರ್ಷದ ಮಹಿಳೆ (ಪಿ-6949), ಮೈಲಾಪುರ ಅಗಸಿಯ 21 ವರ್ಷದ ಮಹಿಳೆ (ಪಿ-6950), ಕರಣಗಿ ಗ್ರಾಮದ 17 ವರ್ಷದ ಯುವತಿ (ಪಿ-6951), ಶಹಾಪುರ ತಾಲೂಕಿನ ನಾಯ್ಕಲ್ ಗ್ರಾಮದ 18 ವರ್ಷದ ಯುವತಿ (ಪಿ-6952), ಸುರಪುರ ತಾಲ್ಲೂಕಿನ ಕೆಂಭಾವಿಯ 22 ವರ್ಷದ ಮಹಿಳೆ (ಪಿ-6953) ಮತ್ತು ಸುರಪುರ ತಾಲೂಕಿನ ಮಲ್ಲಾ ಬಿ. ಗ್ರಾಮದ 28 ವರ್ಷದ ಪುರುಷ (ಪಿ-6654), ಮಲ್ಲಾ ಬಿ. ಗ್ರಾಮದ 26 ವರ್ಷದ ಮಹಿಳೆ (ಪಿ-6955) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ಇಂದು ಪತ್ತೆಯಾದ ಒಟ್ಟು 22 ಜನ ಸೋಂಕಿತರಲ್ಲಿ 15 ಮಹಿಳೆಯರು, 7 ಜನ ಪುರುಷರಿದ್ದಾರೆ. ಸೋಂಕಿತರೆಲ್ಲರೂ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರದ ಮುಂಬೈಯಿಂದ ಯಾದಗಿರಿ ಜಿಲ್ಲೆಗೆ ಹಿಂದಿರುಗಿದವರಾಗಿದ್ದಾರೆ.
528 ವರದಿ ಬಾಕಿ: ಕೋವಿಡ್ 19 ವೈರಸ್ ಪರೀಕ್ಷೆಗಾಗಿ ಜಿಲ್ಲೆಯಿಂದ ಕಳುಹಿಸಿದ ಮಾದರಿಗಳಲ್ಲಿ ಭಾನುವಾರದ 611 ನೆಗೆಟಿವ್ ವರದಿ ಸೇರಿ ಈವರೆಗೆ 19098 ಜನರ ವರದಿ ನೆಗೆಟಿವ್ ಬಂದಿವೆ. ಹೊಸದಾಗಿ ಕಳುಹಿಸಲಾದ 85 ಮಾದರಿಗಳು ಸೇರಿದಂತೆ 528 ಮಾದರಿಗಳ ವರದಿ ಬರಬೇಕಿದೆ.
ಜಿಲ್ಲೆಯಲ್ಲಿ ಇಂದು ಕೋವಿಡ್ 19 ಸೋಂಕು ಖಚಿತಪಟ್ಟ 36 ಸೋಂಕಿತರು ಗುಣಮುಖರಾಗಿದ್ದು, ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 1278 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 2675 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ.
ಜಿಲ್ಲೆಯಲ್ಲಿ 44 ಕಂಟೇನ್ಮೆಂಟ್ ಝೋನ್‌ಗಳನ್ನು ರಚಿಸಲಾಗಿದೆ. ಹೊಸ ಜಿಲ್ಲಾಸ್ಪತ್ರೆಯಲ್ಲಿ 181 ಜನ, ಶಹಾಪೂರ ಕೋವಿಡ್ ಕೇರ್ ಸೆಂಟರ್‌ನಲ್ಲಿ 89 ಜನರನ್ನು, ಸುರಪುರ ಕೋವಿಡ್ ಕೇರ್ ಸೆಂಟರ್‌ನಲ್ಲಿ 38 ಮತ್ತು ಬಂದಳ್ಳಿ ಏಕಲವ್ಯ ಕೋವಿಡ್ ಕೇರ್ ಸೆಂಟರ್‌ನಲ್ಲಿ 155 ಜನರನ್ನು ನಿಗಾದಲ್ಲಿ ಇರಿಸಲಾಗಿದೆ.
ಜಿಲ್ಲೆಯ 24 ಸಾಂಸ್ಥಿಕ ಕ್ವಾರಂಟೈನ್ ಸೆಂಟರ್‌ಗಳಲ್ಲಿ ಒಟ್ಟು 1499 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯಲ್ಲಿ ಖಚಿತಪಟ್ಟ ಒಟ್ಟು 809 ಪ್ರಕರಣಗಳ ಪೈಕಿ 329 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಬ್ಬರು ಮೃತಪಟ್ಟಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ತಿಳಿಸಿದ್ದಾರೆ.