Advertisement

ದಿ ಟೌನ್ ‌ಬ್ಯಾಂಕ್‌ಗೆ 22ಲಕ್ಷ ಲಾಭ

06:46 PM Nov 11, 2020 | Suhan S |

ತುರುವೇಕೆರೆ: ಹಿಂದಿನ ದಿ ಟೌನ್‌ ಸಹಕಾರಿ ಸಂಘದ ಆಡಳಿತ ಮಂಡಳಿ ಹಾಗೂ ಬ್ಯಾಂಕ್‌ ಸಿಬ್ಬಂದಿ ಹಣ ದುರು ಪಯೋಗದಿಂದ ಮುಚ್ಚುವ ಹಂತ ತಲುಪಿದ್ದು ದಿ ಟೌನ್‌ ಬ್ಯಾಂಕ್‌ ಈಗ 22 ಲಕ್ಷ ರೂಪಾಯಿಗಳ ಲಾಭಾಂಶದೊಂದಿಗೆ ಸುಸ್ಥಿತಿಯಲ್ಲಿ ನಡೆಯುತ್ತಿದೆ ಎಂದು ಟೌನ್‌ ಬ್ಯಾಂಕ್‌ ಅಧ್ಯಕ್ಷ ಟಿ.ಎನ್‌. ಹೇಳಿದರು.

Advertisement

ಪಟ್ಟಣದ ದಿ ಟೌನ್‌ ಬ್ಯಾಂಕ್‌ ಹಮ್ಮಿ ಕೊಂಡಿದ್ದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಟೌನ್‌ಬ್ಯಾಂಕ್‌ ಪ್ರಾರಂಭ ವಾಗಿ 113 ವರ್ಷಗಳಿಂದ ಕೋಟ್ಯಂತರ ರೂ.ಗಳ ವ್ಯವಹಾರಗಳನ್ನು ನಡೆಸುತ್ತಾ ಬಂದಿದ್ದು ಇಂದಿಗೂ ಜನರ ವಿಶ್ವಾಸವನ್ನುಗಳಿಸಿಕೊಂಡು ಕಳೆದ5ವರ್ಷಗಳಿಂದ ಬ್ಯಾಂಕ್‌ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದರು. 2014ರ ಹಿಂದಿನ ಆಡಳಿತ ಮಂಡಳಿಯು ಸರಿಯಾಗಿ ಸಾಲ ವಸೂಲಾತಿ, ಬ್ಯಾಂಕ್‌ ವ್ಯಾಪ್ತಿಯ ಅಂಗಡಿ ಗಳಿಂದಬಾಡಿಗೆಪಡೆಯದ್ದರಿಂದ ಸಾಲದಸುಳಿಯಲ್ಲಿ ಸಿಲುಕಿ ಬ್ಯಾಂಕ್‌ ಸೂಪರ್‌ ಸೀಡ್‌ ಆಗಿ ಸುಮಾರು2ಕೋಟಿ ರೂ. ಗಳಿಗೂ ಹೆಚ್ಚು ನಷ್ಟವನ್ನು ಅಂದು ಅನುಭವಿಸಿತ್ತು ಎಂದು ತಿಳಿಸಿದರು.

ನಾನು ಅಧ್ಯಕ್ಷನಾದ ಮೇಲೆ 150 ಬ್ಯಾಂಕ್‌ನ ಸಾಲಗಾರರು ಮತ್ತು ಅಂಗಡಿ ಬಾಡಿಗೆದಾರರು ಹಾಗೂ ಸಿಬ್ಬಂದಿ ಮೇಲೆ ಕೇಸ್‌ ಆಗಿ ಅವರಿಂದ ಬರಬೇಕಿದ್ದು1.65ಕೋಟಿ ಹಣ ನೀಡಲು ನೋಟಿಸ್‌ನೀಡಲಾಗಿದ್ದು ಈಗಾಗಲೇ 55 ಲಕ್ಷ ರೂ. ಗಳಹಣ ವಸೂಲಾಗಿದ್ದು, ನೂರಕ್ಕೆ ನೂರು ಭಾಗ ಎಲ್ಲ ಹಣ ವಸೂಲು ಮಾಡಲಾಗುವುದು ಎಂದರು.

ಉಪಾಧ್ಯಕ್ಷ ಶಿವಕುಮಾರ್‌,ನಿರ್ದೇಶಕರಾದಟಿ.ಎನ್‌. ರುದ್ರೇಶ್‌, ನಾಗರಾಜು,,ಚಂದ್ರಶೇಖರ್‌, ಟಿ.ವೈ.ನಾಗರಾಜು, ವ್ಯವಸ್ಥಾಪಕ ಶರತ್‌ ಕುಮಾರ್‌, ಸಿಬ್ಬಂದಿ ಅರಣ್‌ಕುಮಾರ್‌, ಪ್ರೇಮ್‌ಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next