ನವದೆಹಲಿ: ಉತ್ತರ ಪ್ರದೇಶ ಸೇರಿ ಕೆಲವು ಉತ್ತರ ಭಾರತದ ರಾಜ್ಯಗಳ ಜನ ಇಂದು ಸೌರಮಂಡಲದ ಅಪರೂಪದ ದೃಶ್ಯಾವಳಿಗೆ ಸಾಕ್ಷಿಯಾಗಿದ್ದಾರೆ. ಉತ್ತರ ಭಾರತದ ಕೆಲವು ಪ್ರದೇಶಗಳಲ್ಲಿ ಸೂರ್ಯನ ಸುತ್ತಲೂ ಕಾಮನಬಿಲ್ಲಿನಂತೆ ಬೇರೆ ಬೇರೆ ಬಣ್ಣಗಳಿಂದ ಕೂಡಿದ್ದ ರಿಂಗ್ ರೀತಿಯ ಪ್ರಭಾವಲಯ ಮೂಡಿದ್ದು, ಜನರನ್ನು ಅಚ್ಚರಿಗೊಳಿಸಿದೆ.
ಈ ನಿಗೂಢ ಪ್ರಭಾವಲಯ ಉತ್ತರ ಪ್ರದೇಶದಲ್ಲಿ ಕೆಲವು ಗಂಟೆಗಳವರೆಗೂ ಕಾಣಿಸಿಕೊಂಡಿದೆ. ಜನ ಇದರ ಫೋಟೋ, ವೀಡಿಯೋಗಳನ್ನು ಚಿತ್ರೀಕರಿಸಿದ್ದು, ಇವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
“ವಾತಾವರಣದಲ್ಲಿ ಬೆಳಕು, ಮಂಜಿನ ಕಣಗಳು, ಮೋಡ ಹೀಗೆ ಕೆಲವು ಅಂಶಗಳು ಜೊತೆಯಾದಾಗ ಬೆಳಕಿನ ಪ್ರಸರಣ ಉಂಟಾಗುತ್ತದೆ. ಇದನ್ನು ಇಂಗ್ಲಿಷ್‌ನಲ್ಲಿ ʻಹ್ಯಾಲೋʼ ಎಂದು ಕರೆಯಲಾಗುತ್ತದೆ. ಇಂದು ಕಂಡ ಈ ಅಪರೂಪದ ದೃಶ್ಯಾವಳಿಯನ್ನು ʻ22-ಡಿಗ್ರಿ ಹ್ಯಾಲೋʼ ಎಂದೂ ಕರೆಯಲಾಗುತ್ತದೆ” ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:
Sooraj Pancholi ;ನಟಿ ಜಿಯಾ ಖಾನ್ ಪ್ರಕರಣ: ನಟ ಸೂರಜ್ ಪಾಂಚೋಲಿ ಖುಲಾಸೆ: ಸಿಬಿಐ ಕೋರ್ಟ್