ಲಕ್ನೋ:ಉತ್ತರಪ್ರದೇಶದಲ್ಲಿ ಮತ್ತೊಂದು ಕಳ್ಳಭಟ್ಟಿ ಮದ್ಯದ ದುರಂತ ಸಂಭವಿಸಿದ್ದು, ಶುಕ್ರವಾರ(ಮೇ 28)ದಿಂದ ಈವರೆಗೆ 22 ಮಂದಿ ಕಳ್ಳಭಟ್ಟಿ ಮದ್ಯ ಕುಡಿದು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದ್ದಿರುವುದಾಗಿ ಅಲಿಘಡ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಿಬಿ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ:ಅಂಬಿ ನೆನಪಲ್ಲಿ ಚಂದನವನ…ಮರೆಯಾದ ಮಾಣಿಕ್ಯನಿಗೆ ಜನ್ಮದಿನದ ಶುಭಾಶಯ
ಪೊಲೀಸರು ಕಪ್ಪು ಮತ್ತು ಬಿಳಿ ಬಣ್ಣದ ಚೀಲಗಳಲ್ಲಿ ಪೋಸ್ಟ್ ಮಾರ್ಟ್ಂಗಾಗಿ ಶವಗಳನ್ನು ತರುತ್ತಿರುವ ದೃಶ್ಯ ಪ್ರಸಾರವಾಗುತ್ತಿದ್ದು, ಹಲವಾರು ಶವಗಳನ್ನು ಸ್ಟ್ರೆಚರ್ ಮೇಲೆ ತರಲಾಗುತ್ತಿದೆ ಎಂದು ವರದಿ ವಿವರಿಸಿದೆ.
ಸರ್ಕಾರದ ಪರವಾನಿಗೆ ಪಡೆದ ಅಂಗಡಿಗಳಿಂದ ಕಳ್ಳಭಟ್ಟಿ ಮದ್ಯವನ್ನು ಸಂತ್ರಸ್ತರು ಖರೀದಿಸಿದ್ದರು ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಅಬಕಾರಿ ಅಧಿಕಾರಿ ಸೇರಿದಂತೆ ಐದು ಮಂದಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.
ಕಳ್ಳಭಟ್ಟಿ ಮದ್ಯ ಸರಬರಾಜು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಏತನ್ಮಧ್ಯೆ ಸರ್ಕಾರಿ ಪರವಾನಿಗೆ ಹೊಂದಿದ್ದ ಅಂಗಡಿಗಳಿಗೆ ಕಳ್ಳಭಟ್ಟಿ ಸರಬರಾಜು ಮಾಡಿದ್ದ ಇಬ್ಬರು ಪ್ರಮುಖ ಆರೋಪಿಗಳು ನಾಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.