Advertisement

22 ಕೋಟಿ ರೂ. ಮನೆ ಕಳೆದುಕೊಂಡ ಆಸೀಸ್‌ ದಂಪತಿ

01:05 AM May 05, 2023 | Team Udayavani |

ಕ್ಯಾನ್ಬೆರಾ: ಸ್ವಂತ ಮನೆ ಎಂಬುದು ಎಷ್ಟೋ ಜನರ ಕನಸು.. ಆ ಕನಸನ್ನು ಸಾಕಾರ­ಗೊಳಿ­ಸಲು, ಕಷ್ಟ ಪಟ್ಟು ದುಡಿದು, ಒಂದೊಂದು ರೂಪಾಯಿ ಕೂಡಿಟ್ಟು ಖರೀದಿಸಿದ ಮನೆಯನ್ನು ಏಕಾಏಕಿ ಯಾರೋ ನಿಮ್ಮದಲ್ಲ ಎಂದರೆ ಪರಿಸ್ಥಿತಿ ಹೇಗಿರುತ್ತದೆ ? ಅಂಥದ್ದೇ ಪರಿಸ್ಥಿತಿಯನ್ನು ಆಸ್ಟ್ರೇಲಿಯಾದ ದಂಪತಿ­ಯೊಬ್ಬರು ಎದುರಿಸಿದ್ದು, 22 ಕೋಟಿ ರೂ. ಮೌಲ್ಯದ ಅವರ ಕನಸಿನ ಮನೆಯಿಂದ ಅವರನ್ನೇ ಹೊರಗಾಕಲಾಗಿದೆ.

Advertisement

ಹೌದು, ಮರ್ಮೈಡ್‌ ಬೀಚ್‌ ಎದುರಿ­ಗಿರುವ ಮನೆಯೊಂದನ್ನು ಜೆಸ್‌-ಜಾಕಿ ಎನ್ನುವ ದಂಪತಿ 5 ವರ್ಷದ ಹಿಂದೆ 9.86 ಕೋಟಿ ರೂ. ನೀಡಿ ಹರಾಜಿನಲ್ಲಿ ಖರೀದಿಸಿದ್ದರು. ಕಳೆದ 5 ವರ್ಷಗಳಿಂದ ಅಲ್ಲಿಯೇ ಜೀವನ ನಡೆಸಿದ್ದರು. ಆದರೀಗ ಆ ನಿವಾಸದ ಮೌಲ್ಯ 22 ಕೋಟಿ ರೂ.ಗಳಿಗೆ ಹೆಚ್ಚಿದೆ. ಈ ವೇಳೆ ಹಿಂದ್‌ ಇಸ್ಸಾ ಎಂಬವರು ಈ ನಿವಾಸ ತಮ್ಮದು ಎಂದು ತಮ್ಮ ಪುತ್ರಿಯ ಮೂಲಕ ಹಕ್ಕು ಸಲ್ಲಿಸಿದ್ದಾರೆ.

ಇದರಿಂದ ಆತಂಕಕ್ಕೊಳಗಾದ ದಂಪತಿ ಕಾನೂನಿನ ಮೊರೆ ಹೋದಾಗ, ಇಸ್ಸಾ ಅವರ ಸಹಿಯನ್ನು ನಕಲು ಮಾಡಿ ಯಾರೋ ವಂಚಕರು ದಂಪತಿಗೆ ಮನೆ ಮಾರಾಟ ಮಾಡಿದ್ದಾರೆ, ವಾಸ್ತವದಲ್ಲಿ ಇಂದಿಗೂ ಮನೆಯ ವಾರಸು­ದಾರರು ಇಸ್ಸಾ ಎಂದೇ ನ್ಯಾಯಾಲಯ ತೀರ್ಪು ನೀಡಿದೆ. ಆದಾಗ್ಯೂ ದಂಪತಿಗೆ ಅನ್ಯಾಯ­ವಾಗಿರುವುದನ್ನು ಪರಿಗಣಿಸಿ, ಸ್ಥಳೀಯ ಸರಕಾರಕ್ಕೆ ಪರಿಹಾರ ಒದಗಿಸು­ವುದಂತೆ ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next