Advertisement

ಜಲ ಜೀವನ್‌ ಯೋಜನೆಯಡಿ 22.4 ಕೋಟಿ ರೂ. ಬಿಡುಗಡೆ

04:58 PM Nov 26, 2020 | Suhan S |

ಬೀದರ: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ಜಾರಿಗೆ ತಂದಿರುವ ಜಲ ಜೀವನ್‌ ಮಿಷನ್‌ ಯೋಜನೆಯಡಿ ಔರಾದ ತಾಲೂಕಿಗೆ 22.4 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್‌ ತಿಳಿಸಿದ್ದಾರೆ.

Advertisement

ತಾಲೂಕಿನ ಚಾಂದೋರಿ, ಹಾಲಳ್ಳಿ, ಚಿಕ್ಲಿ(ಜೆ), ನಾಗನಪಳ್ಳಿ, ಬಾಬ್ಳಿ, ಧೂಪತಮಹಾಗಾಂವ್‌,ಮಣಿಗೆಂಪುರ, ರಂಡ್ಯಾಳ, ಬಾವಲಗಾಂವ್‌, ಹೊಕ್ರಾಣಾ, ಹೊಳಸಮುದ್ರ, ಜಮಗಿ, ಕಮಲನಗರ, ಲಾಧಾ, ಮದನೂರ್‌, ಮುರ್ಕಿ, ನಾಗಮಾರಪಳ್ಳಿ, ಶೆಂಬೆಳ್ಳಿ, ಸೋನಾಳ, ಜೀರ್ಗಾ(ಜೆ), ಹೊರಂಡಿ, ಕಾಳಗಾಪುರ, ಇಟಗ್ಯಾಳ, ಸುಂದಾಳ, ಯನಗುಂದಾ, ಮುಧೋಳ(ಕೆ), ಸೋರಳ್ಳಿ, ಸೋರಳ್ಳಿ ತಾಂಡಾ, ಮಾಳೆಗಾಂವ್‌, ಲಷ್ಕರ್‌ ತಾಂಡಾ, ಮಹಾದೇವ ತಂಡಾ, ಮಾರುತಿ ತಾಂಡಾ, ಹಿಪ್ಪಳಗಾಂವ್‌, ಖಂಡಿಕೇರಿ, ಬೆಳಕುಣಿ ಗ್ರಾಮಗಳು ಈ ಯೋಜನೆಗೆ ಆಯ್ಕೆಯಾಗಿವೆ.

ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸಲು ಜಲ ಜೀವನ ಮಿಷನ್‌ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಔರಾದ ತಾಲೂಕಿಗೆ ಸಂಬಂಧಿಸಿದಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಕ್ರಿಯಾ ಯೋಜನೆ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಹಂತ-ಹಂತವಾಗಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು. ಲಭ್ಯವಿರುವ ನೀರಿನ ಸಂಪನ್ಮೂಲಗಳನ್ನು ಬಳಸಿಕೊಂಡು ಆಯ್ಕೆಯಾಗಿರುವ ಗ್ರಾಮಗಳ ಪ್ರತಿ ಮನೆಗೆ ನೀರಿನ ಸಂಪರ್ಕ ಕಲ್ಪಿಸಲಾಗುವುದು ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next