Advertisement

ಧಾರವಾಡ: 219 ಹೊಸ ಕೋವಿಡ್ 19 ಪ್ರಕರಣಗಳು: ಒಟ್ಟು 4528 ಜನ ಗುಣಮುಖ

12:29 AM Aug 15, 2020 | Hari Prasad |

ಧಾರವಾಡ : ಜಿಲ್ಲೆಯಲ್ಲಿ ಗುರುವಾರ ಮತ್ತೆ 219 ಜನರಿಗೆ ಕೋವಿಡ್ 19 ಸೋಂಕು ಧೃಡಪಟ್ಟಿದೆ. ಈ ನಡುವೆ 199 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

Advertisement

ಗುರುವಾರ ಮತ್ತೆ 8 ಸೋಂಕಿತರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರ, ನೆಗಡಿ, ಕಫ ಸೇರಿದಂತೆ ಇನ್ನಿತರ ಲಕ್ಷಣ ಹೊಂದಿದ್ದ 42 ವರ್ಷದ ಪುರುಷ, 76 ವರ್ಷದ ಮಹಿಳೆ, 66 ವರ್ಷದ ಪುರುಷ, 64 ವರ್ಷದ ಪುರುಷ, 67 ವರ್ಷದ ಪುರುಷ, 55 ವರ್ಷದ ಮಹಿಳೆ, 70 ವರ್ಷದ ಪುರುಷ, 53 ವರ್ಷದ ಮಹಿಳೆ ಸೇರಿ ಎಂಟು ಜನ ಸೋಂಕಿತರು ಮೃತಪಟ್ಟಿದ್ದಾರೆ. ಈ ಸೋಂಕಿತರ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆ ಮಾಡಲಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 222 ಕ್ಕೆ ಏರಿದೆ.

ಈಗ ಒಟ್ಟು ಪಾಸಿಟಿವ್ ಪ್ರಕರಣ 7144 ಕ್ಕೆ ಏರಿದ್ದು, ಸದ್ಯ 2394 ಸಕ್ರಿಯ ಪ್ರಕರಣಗಳಿವೆ. ಇನ್ನೂ 199 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೂಲಕ ಗುಣಮುಖರಾದವರ ಸಂಖ್ಯೆ 4528ಕ್ಕೆ ಏರಿದ್ದು, 36 ಜನ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಡಿಸಿ ನಿತೇಶ ಪಾಟೀಲ ತಿಳಿಸಿದ್ದಾರೆ.

219 ಪ್ರಕರಣಗಳು ಪತ್ತೆಯಾದ ಸ್ಥಳಗಳು:
ಧಾರವಾಡ ತಾಲೂಕು: ವ್ಯಾಪ್ತಿಯ ಮೇದಾರ ಓಣಿ, ರಾಮನಗರ, ಮಾಳಾಪುರ, ಮುರುಘಾಮಠ, ಗಾಂಧಿನಗರ, ಯಾಲಕ್ಕಿ ಶೆಟ್ಟರ್ ಕಾಲೋನಿಯ ಶಂಕರ ಮಠ, ಪೋತ್ನಿಸ್ ಗಲ್ಲಿ, ವಿದ್ಯಾಗಿರಿ  ಸರಸಗಂಗಾ ಹತ್ತಿರ, ಮಧು ಅರ್ಪಾಟ್‍ಮೆಂಟ್, ಹೆಬ್ಬಳ್ಳಿ ಗ್ರಾಮ, ಹೊಸಯಲ್ಲಾಪುರದ ಚಾವಣಿ ಓಣಿ, ಬಾಗಲಕೊಟ ಪೆಟ್ರೋಲ್ ಬಂಕ್ ಹತ್ತಿರ, ಅಂಬೇಡ್ಕರ್ ಭವನ, ಸತ್ತೂರಿನ ಎಸ್‍ಡಿಎಂ ಆಸ್ಪತ್ರೆ, ಕುಮಾರೇಶ್ವರ ನಗರ, ಗರಗ ಗ್ರಾಮ, ಮಾಳಮಡ್ಡಿ ಗೌಳಿ ಗಲ್ಲಿ, ವಿನಾಯಕ ನಗರ, ಪೊಲೀಸ್ ಹೆಡ್ ಕ್ವಾರ್ಟರ್ಸ್ ಸ್ಕೂಲ್, ಮುಗದ ಗ್ರಾಮ, ಉಪ್ಪಿನ ಬೆಟಗೇರಿ ಮಾರುಕಟ್ಟೆ  ಓಣಿ, ನಿಗದಿ ಗ್ರಾಮ, ಮೆಹಬೂಬ ನಗರ, ಶ್ರೀನಗರ, ಕೊಟೂರ ಗ್ರಾಮ, ಜಯನಗರ, ಶಿವಾನಂದ ನಗರ, ಕೃಷಿ ವಿಶ್ವವಿದ್ಯಾಲಯ ಆವರಣ, ಲಕ್ಷ್ಮೀನಗರ, ಮುಳಮುತ್ತಲ, ದೊಡ್ಡನಾಯಕನಕೊಪ್ಪ, ಚನ್ನಬಸವೇಶ್ವರ ನಗರ, ಹಾವೇರಿಪೇಟೆ,  ಚಾವುಸ್ ಗಲ್ಲಿ, ವಿಜಯ ನಗರ, ಜನ್ನತ್ ನಗರ, ಸನ್ಮತಿ ನಗರ, ಯಾಲಕ್ಕಿ ಶೆಟ್ಟರ ಕಾಲೋನಿ, ಕಾಮನಕಟ್ಟಿ, ಲಕಮಾಪುರ, ಟಿ.ಬಿ.ನಗರ, ನಗರಕರ್ ಕಾಲೋನಿ, ಚರಂತಿಮಠ ಗಾರ್ಡನ್,  ನೆಹರು ನಗರ, ಹೆಬ್ಬಳ್ಳಿ ಹಗಸಿ, ಮದಿಹಾಳ, ಕೆ.ಸಿ ಪಾರ್ಕ್, ಮಂಗಳವಾರ ಪೇಟ, ತೇಜಸ್ವಿ ನಗರ, ತಲೆಮೊರಬ, ರಾಯಾಪುರ ಭಾವಿ ಓಣಿ, ಕುರಬರ ಓಣಿ, ಕನಕ ನಗರ, ಗಾಳಿ ಓಣಿ, ಸಪ್ತಾಪುರ, ಮಲ್ಲಿಕಾರ್ಜುನ ನಗರ, ಕರಡಿಗುಡ್ಡ, ಬನಶ್ರೀ ನಗರ, ಗಿರಿನಗರದಲ್ಲಿ ಸೋಂಕು ಪತ್ತೆಯಾಗಿದೆ.

Advertisement

ಹುಬ್ಬಳ್ಳಿ ತಾಲೂಕು: ವ್ಯಾಪ್ತಿಯ ಬೆಂಗೇರಿ ಬಾಲಾಜಿ ನಗರ,ಕೇಶ್ವಾಪುರ  ಬೆಂಬಳಗಿ ಲೇಔಟ್, ಹೇಮಂತ ನಗರ ಶೆಟ್ಟರ್ ಲೇಔಟ್, ಗದಗ ರಸ್ತೆಯ ಬೃಂದಾವನ ಕಾಲೋನಿ, ಸಿದ್ದಗಂಗಾ ಕಾಲೋನಿ, ಶ್ರೀನಗರ, ತಾರಿಹಾಳ, ಗೋಕುಲ ರಸ್ತೆ ಕೆಇಎಸ್ ಕಂಪೌಂಡ್, ನೆಹರು ನಗರ, ಅಯೋಧ್ಯಾ ನಗರ, ವಾಲ್ಮೀಕಿ ಕಾಲೋನಿ ಮಾರುತಿ ದೇವಸ್ಥಾನ ಹತ್ತಿರ, ಕುಸುಗಲ್ ರಸ್ತೆ ಪೆಸಿಫಿಕ್ ಪಾರ್ಕ್, ಸುಳ್ಳ ರಸ್ತೆಯ ಬಾಲಾಜಿ ಪಾರ್ಕ್, ಸಿದ್ದರಾಮ ನಗರ, ಗೋಪನಕೊಪ್ಪ, ಭೈರಿದೇವರಕೊಪ್ಪ, ಕಿಮ್ಸ್ ಆಸ್ಪತ್ರೆ, ಹಳೇ ಹುಬ್ಬಳ್ಳಿ ಗಾಂಧಿನಗರ, ನೇಕಾರ ನಗರ, ಹೊಸೂರ ವಿಕಾಸ ನಗರ, ಗೋಲ್ಡನ್ ಟೌನ್, ನವನಗರ ಕ್ಯಾನ್ಸರ್ ಆಸ್ಪತ್ರೆ, ಕರ್ನಾಟಕ ಸರ್ಕಲ್, ಪಂಚಾಕ್ಷರಿ ನಗರ, ಇಂದ್ರಪ್ರಸ್ಥ ನಗರ, ಆನಂದನಗರ, ಶ್ರೀನಿವಾಸ ನಗರ, ನವ ಅಯೋಧ್ಯನಗರ, ಗಾಮನಗಟ್ಟಿಯ ದೇಸಾಯಿ ನಗರ, ರೇಣುಕಾ ನಗರ, ಸಾಯಿ ನಗರ, ಅಶೋಕ ನಗರ, ಮಂಜುನಾಥ ನಗರ, ಹುಬ್ಬಳ್ಳಿ ಟೌನ್, ಕೆರಿ ಓಣಿ, ಬಡಿಗೇರ ಓಣಿ ಹತ್ತಿರ, ಬಾಣತಿಕಟ್ಟಿ, ಮಿಲಥ ನಗರ, ಬಸವೆಶ್ವರ ಸರ್ಕಲ್, ಸಂಗಮ ಕಾಲೋನಿ,  ವಿದ್ಯಾನಗರ ಪ್ರಶಾಂತ ಕಾಲೋನಿ, ಟೆಂಗಿನಕಾಯಿ ಕಾಲೋನಿ, ರಾಜನಗರ, ಸುಳ್ಳ ಗ್ರಾಮ, ಮಹಾಲಕ್ಷ್ಮೀ ಲೇಔಟ್, ದೇಶಪಾಂಡೆ ನಗರ, ಕೆಸಿಸಿ ಬ್ಯಾಂಕರ್ಸ್ ಕಾಲೋನಿ, ಶಕ್ತಿ ಕಾಲೋನಿ, ಲಿಂಗರಾಜ ನಗರ, ಮಂಟೂರ ರಸ್ತೆ ಬ್ಯಾಹಟ್ಟಿ ಪ್ಲಾಟ್, ವಿವೇಕಾನಂದ ನಗರ, ಅಮರಗೊಳ, ಮಹಾವೀರ ಗಲ್ಲಿ, ಕೊಂಡವಾಡ ಓಣಿದಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕಲಘಟಗಿ: ವ್ಯಾಪ್ತಿಯ ಬೆಂಡಿಗೇರಿ ಓಣಿ, ದ್ಯಾಮವ್ವನ ಗುಡಿ ಓಣಿ, ಬಮ್ಮಿಗಟ್ಟಿ, ಗಳಗಿ  ಹುಲಕೊಪ್ಪ, ಹೀರೆಹೊನ್ನಳ್ಳಿ, ಕುಂದಗೋಳ ತಾಲೂಕಿನ  ಗುಡಗೇರಿ ಪೊಲೀಸ್ ಠಾಣೆ, ಶಿರೂರ ಗ್ರಾಮ, ಬೆಟದೂರಿನ ಕೊಪ್ಪದವರ ಓಣಿ, ಸಿದ್ಧಾರೂಢ ನಗರ, ಸಂಶಿ ಗ್ರಾಮ, ಇನಾಮಕೊಪ್ಪ ಮಾದರ ಓಣಿ, ಕುಂದಗೋಳದ ಕಟಕರ್ ಓಣಿ, ಅಂಬೇಡ್ಕರ್  ನಗರ, ಗೌಡರ ಓಣಿ,ಗುಡೇನಕಟ್ಟಿ ಗ್ರಾಮ.ಹಿರೇಹರಕುಣಿ,ಬೆನಕನಹಳ್ಳಿ.ನವಲಗುಂದ ತಾಲೂಕಿನ ನವಲಗುಂದ ಓಣಿ,ಶಲವಡಿ ಗ್ರಾಮ,ಬೆಳವಟಗಿ ಗ್ರಾಮ, ತಿರ್ಲಾಪುರ ಗ್ರಾಮ, ಅಣ್ಣಿಗೇರಿಯ  ಕಬ್ಬೇರ್ ಪೇಟ ,ಹೊಸಪೇಟ ಓಣಿ,ಮಣಕವಾಡ, ಶಿಶ್ವಿನಹಳ್ಳಿ ಗ್ರಾಮಗಳಲ್ಲಿ ಸೋಂಕು ಪತ್ತೆಯಾಗಿದೆ. ಇದರ ಜೊತೆಗೆ

ಹಾಸನ ಜಿಲ್ಲೆಯ ಆಲೂರ, ಹಾವೇರಿ ಜಿಲ್ಲೆಯ ರೈಲ್ವೆ ಕ್ವಾಟರ್ರ್ಸ್, ಎಲ್‍ಐಸಿ ಆಫೀಸ್ ವಿದ್ಯಾನಗರ, ರಾಣೆಬೆನ್ನೂರ, ಹೊಸೂರ, ಮ್ಯಾಗೇರಿ ಓಣಿ,

ಬಾಗಲಕೋಟೆಯ ಜಮಖಂಡಿ ತಾಲೂಕಿನ ರಾಣಿಚನ್ನಮ್ಮ ನಗರ, ಬೆಳಗಾವಿ ಜಿಲ್ಲೆಯ: ಗೋಕಾಕ ವಾಟರ್ ಟ್ಯಾಂಕ್ ಬಳಿಯಿಂದ ಜಿಲ್ಲೆಗೆ ಬಂದವರಲ್ಲಿ ಸೋಂಕು ಧೃಡಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next