Advertisement
ಜಿಲ್ಲೆಯಲ್ಲಿ ಒಟ್ಟು 2,018 ಅಂಗನವಾಡಿ ಕೇಂದ್ರಗಳಲ್ಲಿದ್ದು 82 ಮೇಲ್ವಿಚಾರಕರಿದ್ದಾರೆ. ಈಗಾಗಲೆ ಅವಶ್ಯವಿರುವಷ್ಟು ಮೊಬೈಲ್‌ಗಳನ್ನು ಸಿಡಿಪಿಒ ಕಚೇರಿಗೆ ವರ್ಗಾಯಿಸಿ ಒಂದು ತಿಂಗಳು ಕಳೆದಿದೆ. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ಅಂಗನವಾಡಿ ವ್ಯಾಪ್ತಿಯಲ್ಲಿ ಲಭ್ಯವಿರುವ ನೆಟ್‌ವರ್ಕ್ ಆಧರಿಸಿ ಬೇರೆ ಬೇರೆ ಕಂಪೆನಿ ಸಿಮ್‌ಗಳ ಮಾಹಿತಿ ಪಡೆಯಲಾಗಿತ್ತು. ಈ ನೆಲೆಯಲ್ಲಿ ಒಟ್ಟು ಹೆಚ್ಚುವರಿ ಸಿಮ್ ಸೇರಿ 2,186 ಸಿಮ್ ಕಾರ್ಡ್ ಜಿಲ್ಲಾ ಕಚೇರಿಗೆ ಪೂರೈಕೆಯಾಗಿದೆ.
Related Articles
Advertisement
ಅಂಗನವಾಡಿ ಕಾರ್ಯಕರ್ತೆಯರ ಜತೆಗೆ ಇಲಾಖೆಯ ಮೇಲ್ವಿಚಾರಕರಿಗೂ ಸ್ಮಾರ್ಟ್‌ಫೋನ್ ವಿತರಣೆಯಾಗಲಿದೆ. ಮಕ್ಕಳ ವಿವರ, ಅವರ ತೂಕ, ಎತ್ತರ, ನೀಡಿದ ಆಹಾರದ ವಿವರಗಳನ್ನು ದಾಖಲಾತಿ ಮಾಡಬೇಕಾಗಿದೆ. ಜತೆಗೆ ಕೇಂದ್ರದ ವ್ಯಾಪ್ತಿಯಲ್ಲಿರುವ ಗರ್ಭಿಣಿಯರು, ಬಾಣಂತಿಯರ ವಿವರಗಳನ್ನು ದಾಖಲಾತಿ ಮಾಡುವ ಸಲುವಾಗಿ ಮೂರು ಆ್ಯಪ್‌ಗಳನ್ನು ಮೊಬೈಲ್‌ಗೆ ಅಳವಡಿಸಿ ಕೇಂದ್ರದ ಕಾರ್ಯಕರ್ತೆಯರಿಗೆ ನೀಡಲಾಗುತ್ತದೆ. ಪ್ರಸ್ತುತ ಕೋವಿಡ್ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳು ತೆರೆಯದಿದ್ದುದರಿಂದ ಪ್ರಕ್ರಿಯೆಗಳು ಮತ್ತಷ್ಟು ವಿಳಂಬವಾಗುತ್ತಿವೆ.
ಸಲಕರಣೆ ಸಹಿತ ವಿತರಣೆ : ಈಗಾಗಲೇ ದ.ಕ. ಜಿಲ್ಲಾ ವ್ಯಾಪ್ತಿಯ ಮಂಗಳೂರು ನಗರ, ಮಂಗಳೂರು ಗ್ರಾಮಾಂತರ, ಬಂಟ್ವಾಳ, ವಿಟ್ಲ, ಬೆಳ್ತಂಗಡಿ, ಪುತ್ತೂರು, ಸುಳ್ಯ ವ್ಯಾಪ್ತಿಯ 7 ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಕಚೇರಿಗಳಿಗೆ ಮೊಬೈಲ್ ವಿತರಣೆಯಾಗಿದೆ. ಮೊಬೈಲ್ ಜತೆಗೆ ಪವರ್ ಬ್ಯಾಂಕ್, ಇಯರ್ ಫೋನ್, ಚಾರ್ಜರ್, ಮೆಮರಿಕಾರ್ಡ್, ಸ್ಕ್ರೀನ್ ಗಾರ್ಡ್ ನೀಡಲಾಗಿದೆ. ಇದರೊಂದಿಗೆಪ್ರತಿ ಅಂಗನವಾಡಿಗೆ ಮಕ್ಕಳ ತೂಕ ಮತ್ತು ಎತ್ತರ ಪರಿಶೀಲಿಸಲು ಡಿಜಿಟಲ್ ಮಾಪನ ಯಂತ್ರವನ್ನು ಪೂರೈಸಲಾಗಿದೆ.
ಸ್ಮಾರ್ಟ್ ಫೋನ್ ವಿತರಣೆ : ಪೋಷಣ್ ಅಭಿಯಾನದಡಿ ಸ್ಮಾರ್ಟ್ ಫೋನ್ ಈಗಾಗಲೆ ವಿತರಿಸಲಾಗಿದೆ. ಸಿಮ್ ಕಾರ್ಡ್ ಕೈಸೇರಿದ್ದು, ಸ್ನೇಹ ತಂತ್ರಾಂಶವನ್ನು ಮೊಬೈಲ್‌ಗಳಿಗೆ ಅಳವಡಿಸಿ ಅದರ ಸಂಪೂರ್ಣ ತರಬೇತಿ ನೀಡಲಾಗುತ್ತದೆ. –ಶ್ಯಾಮಲಾ, ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ
– ಚೈತ್ರೇಶ್ ಇಳಂತಿಲ