Advertisement

Jammu- Kashmir: ಮಾದಕವಸ್ತು ಕಳ್ಳಸಾಗಣೆ; 217 ಮಂದಿ ಸೆರೆ

12:06 AM Jun 02, 2023 | Team Udayavani |

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮಾದಕವಸ್ತು ಕಳ್ಳಸಾಗಣೆ ತಡೆಗಟ್ಟುವ ಬಗ್ಗೆ ತೀವ್ರ ನಿಗಾ ವಹಿಸಲಾಗಿದ್ದು, 2023ರ ಈ ಮೊದಲಾರ್ಧ ವರ್ಷದಲ್ಲಿ ಕಣಿವೆಯಲ್ಲಿ 7 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ಜತೆಗೆ 217 ಮಂದಿ ಮಾದಕವಸ್ತು ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ಮಾಹಿತಿ ನೀಡಿದ್ದಾರೆ. ಎನ್‌ಡಿಪಿಎಸ್‌ ಕಾಯ್ದೆ ಅನ್ವಯ ಬಾರಾಮುಲ್ಲಾ ಪೊಲೀಸರು 144 ಪ್ರಕರಣಗಳನ್ನು ಮೊದಲ 5 ತಿಂಗಳಲ್ಲಿ ದಾಖಲಿಸಿ, 217 ಮಂದಿಯನ್ನು ಬಂಧಿಸಿದ್ದಾರೆ. ಈ ಪೈಕಿ 23 ಮಂದಿ ಸ್ವತಃ ಮಾದಕ ವ್ಯಸನಿಗಳಾಗಿದ್ದು, ಅವರ ವಿರುದ್ಧ ಪಿಎಸ್‌ಎ, ಪಿಐಟಿಎನ್‌ಡಿಪಿಎಸ್‌ ಕಾಯ್ದೆಗಳ ಅನ್ವಯ ಪ್ರಕರಣ ದಾಖ ಲಿಸಲಾಗಿದೆ.

ಅಲ್ಲದೇ ಕಾಳಸಂತೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ವಸ್ತುಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಈ ಪೈಕಿ 3.41 ಕೋಟಿ ಮೌಲ್ಯದ 2.625 ಕೆಜಿ ಬ್ರೌನ್‌ ಶುಗರ್‌, 3.14 ಕೋಟಿ ಮೌಲ್ಯದ 2,419 ಕೆಜಿ ಹೆರಾಯಿನ್‌ ಹಾಗೂ ಕ್ಯಾನೆಬಿಸ್‌, ಪ್ಪಾಪಿ ಸ್ಟ್ರಾಗಳೂ ಸೇರಿವೆ. ಜತೆಗೆ 43.90 ಲಕ್ಷ ನಗದು ಹಾಗೂ 15 ವಾಹನಗಳನ್ನು ಜಪ್ತಿಗೊಳಿಸಲಾಗಿದೆ. ಈ ವರೆಗೆ ವಶಕ್ಕೆ ಪಡೆದ ಎಲ್ಲದರ ಒಟ್ಟು ಮೌಲ್ಯ 7,69,91,000 ಕೋಟಿ ರೂ.ಗಳೆಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next