Advertisement

ಕೋವಿಡ್:ರಾಜ್ಯದಲ್ಲಿಂದು 2879 ಸೋಂಕಿತರು ಗುಣಮುಖ; 2162 ಹೊಸ ಪ್ರಕರಣ ಪತ್ತೆ

07:57 PM Jul 10, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿ ( ದಿನಾಂಕ: 09.07.2021,00:00 ರಿಂದ 23:59 ರವರೆಗೆ)ಯಲ್ಲಿ ಹೊಸದಾಗಿ 2162 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಹಾಗೂ 48 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಜುಲೈ 10) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

Advertisement

ಇನ್ನು ಮೇಲೆ ತಿಳಿಸಿದ ಕಾಲಾವಧಿಯಲ್ಲಿ 2879 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2796377ಕ್ಕೆ ತಲುಪಿದೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-1, ಬಳ್ಳಾರಿ-27, ಬೆಳವಾಗಿ-106, ಬೆಂಗಳೂರು ಗ್ರಾಮಾಂತರ-12, ಬೆಂಗಳೂರು ನಗರ-452, ಬೀದರ್-4, ಚಾಮರಾಜನಗರ-37, ಚಿಕ್ಕಬಳ್ಳಾಪುರ-22, ಚಿಕ್ಕಮಗಳೂರು-109, ಚಿತ್ರದುರ್ಗ-34, ದಕ್ಷಿಣ ಕನ್ನಡ-218, ದಾವಣಗೆರೆ-36, ಧಾರವಾಡ-25, ಗದಗ-9,  ಹಾಸನ-178, ಹಾವೇರಿ-9, ಕಲಬುರಗಿ-9, ಕೊಡಗು-108, ಕೋಲಾರ-73, ಕೊಪ್ಪಳ-10, ಮಂಡ್ಯ-63, ಮೈಸೂರು-211, ರಾಯಚೂರು-2, ರಾಮನಗರ-23, ಶಿವಮೊಗ್ಗ-110, ತುಮಕೂರು-98, ಉಡುಪಿ-113, ಉತ್ತರ ಕನ್ನಡ-56, ವಿಜಯಪುರ-1, ಯಾದಗಿರಿ-6.

Advertisement

Udayavani is now on Telegram. Click here to join our channel and stay updated with the latest news.

Next