ವೆನಿಸ್: ಕ್ಯಾಂಪ್‌ಗ್ರೌಂಡ್‌ಗೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು ಉತ್ತರ ಇಟಲಿಯ ವೆನಿಸ್ ಬಳಿಯ ಮೇಲ್ಸೇತುವೆಯಿಂದ ಉರುಳಿಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 21 ಪ್ರವಾಸಿಗರು ಮೃತಪಟ್ಟಿದ್ದಾರೆ.
ಸೇತುವೆ ಮೇಲಿಂದ ಮೂವತ್ತು ಅಡಿ ಆಳಕ್ಕೆ ಬೀಳುವ ವೇಳೆ ವಿದ್ಯುತ್ ತಂತಿಗಳ ಮೇಲೆ ಬಿದ್ದ ಬಸ್ಸಿಗೆ ಬೆಂಕಿ ಹತ್ತಿಕೊಂಡು ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಸ್ ಅವಘಡಕ್ಕೆ ಸಂಬಂಧಿಸಿ ”ವೆನಿಸ್‌ನ ಮೇಯರ್ ಲುಯಿಗಿ ಬ್ರುಗ್ನಾರೊ ಟ್ವಿಟರ್ ಎಕ್ಸ್‌ನಲ್ಲಿ ಇದೊಂದು ಭೀಕರ ಅವಘಡ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.
ಇಲ್ಲಿಯವರೆಗೆ ಗುರುತಿಸಲಾದ ಮೃತದೇಹಗಳನ್ನು ಉಕ್ರೇನಿಯನ್ ಪ್ರವಾಸಿಗರು ಎಂದು ಸ್ಥಳೀಯ ಅಗ್ನಿಶಾಮಕ ದಳದ ಮುಖ್ಯಸ್ಥರು ತಿಳಿಸಿದ್ದಾರೆ. ಪ್ರಯಾಣಿಕರಲ್ಲಿ ಜರ್ಮನ್ನರು ಮತ್ತು ಉಕ್ರೇನಿಯನ್ನರು ಸೇರಿದ್ದಾರೆ ಎಂದು ಇಟಾಲಿಯನ್ ಸುದ್ದಿ ಸಂಸ್ಥೆ ಹೇಳಿದೆ.
ಇದನ್ನೂ ಓದಿ: Liquor Policy Case: ಬೆಳ್ಳಂಬೆಳಗ್ಗೆ ಆಪ್ ಸಂಸದ ಸಂಜಯ್ ಸಿಂಗ್ ನಿವಾಸದ ಮೇಲೆ ಇಡಿ ದಾಳಿ