Advertisement

ನಾಪತ್ತೆಯಾಗಿರುವ ಮಿಗ್‌ 21 ಪೈಲಟ್‌ನ ಸುರಕ್ಷೆ: 21 ಪಕ್ಷಗಳ ಕಳವಳ

01:25 PM Feb 27, 2019 | udayavani editorial |

ಹೊಸದಿಲ್ಲಿ : ಇಂದಿಲ್ಲಿ ಸಭೆ ಸೇರಿದ ದೇಶದ ಕನಿಷ್ಠ 21 ರಾಜಕೀಯ ಪಕ್ಷಗಳು ಪಾಕ್‌ ಉಗ್ರರ ವಿರುದ್ಧದ ಭಾರತೀಯ ವಾಯು ಪಡೆ ಕಾರ್ಯಾಚರಣೆಯಲ್ಲಿ ನಾಪತ್ತೆಯಾಗಿರುವ ಮಿಗ್‌ 21 ಪೈಲಟ್‌ ನ ಸುರಕ್ಷೆ ಬಗ್ಗೆ ಕಳವಳ ವ್ಯಕ್ತಪಡಿಸಿದವು. 

Advertisement

ಈ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯದಲ್ಲಿ ಆಳುವ ಬಿಜೆಪಿ, ಭಾರತ-ಪಾಕ್‌ ಗಡಿಯಲ್ಲಿನ ತಾಜಾ ವಿದ್ಯಮಾನಗಳನ್ನು ತಿಳಿಸುವ ಸರ್ವ ಪಕ್ಷ ಸಭೆಯನ್ನು ಏಕೆ ಕರೆದಿಲ್ಲ ಎಂದು ಪ್ರಶ್ನಿಸಿದವು. 

ಫೆ.14ರ ಪುಲ್ವಾಮಾ ಉಗ್ರ ದಾಳಿಯಲ್ಲಿ ಹುತಾತ್ಮರಾಗಿರುವ 40 ಭಾರತೀಯ ಯೋಧರ ಗುಣಗಾನ ಗೈದು ಶ್ರದ್ಧಾಂಜಲಿ ಅರ್ಪಿಸಿರುವ ಸಭೆ, ಆಳುವ ಬಿಜೆಪಿ, ಉಗ್ರ ನಿಗ್ರಹ ಕಾರ್ಯಾಚರಣೆಯನ್ನು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದನ್ನು ಕಟುವಾಗಿ ಖಂಡಿಸಿದವು. 

Advertisement

Udayavani is now on Telegram. Click here to join our channel and stay updated with the latest news.

Next