Advertisement
ಆದರ್ಶ್ ಶೆಟ್ಟಿ: ತುಂಬಾ ವಿವೇಚನೆಯಿಂದ ಕೂಡಿದ ದೇಶದ ಜನರಿಗಾಗಿ ತೆಗೆದುಕೊಂಡ ಉತ್ತಮವಾದ ನಿರ್ಧಾರ. ಪ್ರಜಾಪ್ರಭುತ್ವ ಎಂದರೆ ಜನರು ಜನರಿಗಾಗಿ ಆಯ್ಕೆ ಮಾಡುವ ಸರ್ಕಾರ .ಅಂತಹ ಸರ್ಕಾರವು ಸಂದಿಗ್ಧ ಪರಿಸ್ಥಿತಿಯಲ್ಲಿ ಜನರ ಒಳಿತಿಗಾಗಿ ಕೈಗೊಳ್ಳಲೇ ಬೇಕಾದಂಥ ನಿರ್ಧಾರ ಇದು ಸರಿಯಾಗಿ ಇದೆ .
Related Articles
Advertisement
ಪ್ರಶಾಂತ ಎಂ ಕುನ್ನೂರ; ಒಂದು ದಿನ ಮನೆಯಲ್ಲಿ ಬಂದಿಯಾಗೋದರಿಂದ ಸೋಂಕು ಹರಡುವಿಕೆಯ ಪ್ರಮಾಣ ಖಂಡಿತ ತಗ್ಗಲಿದೆ.ಜನತಾ ಕರ್ಪೂಗೆ ಪ್ರತಿಯೊಬ್ಬರೂ ಬೆಂಬಲಿಸಬೇಕು.ನಿಮ್ಮ ನಿರ್ಲಕ್ಷದಿಂದ ದೇಶದ ಆರೋಗ್ಯ ಕೆಡಿಸದಿರಿ.ಇಟಲಿಯಿಂದ ಪಾಠ ಕಲಿಯದಿದ್ದರೆ ವಿನಾಶ ತಪ್ಪಿದ್ದಲ್ಲ.
ಗಿರೀಶ್ ಗೌಡ: ಸರಿಯಾಗಿಯೇ ಇದೆ. ಈ ‘ಸೋಷಿಯಲ್ ಡಿಸ್ಟೆನ್ಸಿಂಗ್’ ಮಹತ್ವ ತಿಳಿದಿರುವವರಿಗೆ ಇದೊಂದು ಉತ್ತಮ ನಡೆ ಅನ್ನಿಸುತ್ತದೆ. ಆದರೆ ಯಾವಾಗಲೂ, ಎಲ್ಲದರಲ್ಲೂ ರಾಜಕೀಯ ಬೆರೆಸುವವರಿಗೆ ಅವರ ವೈಯಕ್ತಿಕ ನಡೆ ಮೇಲೆ ಅವಲಂಬಿತ.
ದಾವೂಡ್ ಕೂರ್ಗ್: ಎಲ್ಲ ದೇಶದವರು ಅಲ್ಲಿನ ಜನರಿಗೆ ಉಪಯೋಗ ವಾಗುವಂತಹ ಆರ್ಥಿಕ ಪ್ಯಾಕೇಜ್ ಗಳನ್ನು ಘೋಷಿಸುತ್ತಿವೆ ಉದಾ 1 ತಿಂಗಳ ರೇಷನ್, 2 ತಿಂಗಳ ವಿದ್ಯುತ್ ಬಿಲ್ ಮನ್ನಾ , 3 ತಿಂಗಳ ಬ್ಯಾಂಕ್ ಲೋನ್ ವಸೂಲಾತಿ ಮುಂದೂಡಿಕೆ ಇತ್ಯಾದಿ. ಅದೇ ರೀತಿ ಹೊಸ ತಾತ್ಕಾಲಿಕ ಆಸ್ಪತ್ರೆಗಳ ಹೆಚ್ಚಳ, ಆರೋಗ್ಯ ರಂಗಕ್ಕೆ ಉತ್ತೇಜನ ನೀಡುವ ಆರ್ಥಿಕ ಸಹಾಯ ಇತ್ತ್ಯಾದಿ. ಆದ್ರೆ ತಾವೇನು ಮಾಡಿದ್ದೀರಾ? ಒಂದು ದಿನಕ್ಕೆ ದೇಶ ಬಂದ್. ಏನು ಪ್ರಯೋಜನ ಹೇಳಿ