Advertisement
ಜಾನುವಾರು ಗಣತಿಯಲ್ಲಿ ಪ್ರಮುಖವಾಗಿ ವಿವಿಧ ತಳಿಯ ಸಾಕು ಪ್ರಾಣಿಗಳಾದ ದನ, ಎಮ್ಮೆ, ಕುರಿ, ಮೇಕೆ, ಹಂದಿ, ಕುದುರೆ,ಕತ್ತೆ, ಒಂಟೆ, ನಾಯಿ, ಮೊಲ, ಆನೆ, ಕುಕ್ಕುಟಗಳಾದ ಕೋಳಿ,ಬಾತುಕೋಳಿ, ಎಮು, ಟರ್ಕಿ, ಕೋಳಿ, ಕೃಷಿಗಾಗಿ ಉಪಯೋಗಿಸಲ್ಪಡುವ ಉಪಕರಣಗಳ ಬಗ್ಗೆ ಹಾಗೂ ಮೀನುಗಾರಿಕೆಗೆ ಸಂಬಂಧಪಟ್ಟ ಚಟುವಟಿಕೆಗಳ ಮಾಹಿತಿಯನ್ನು ಸಂಗ್ರಹಿಸಲಾಗುವುದು. ಅ.1ರಿಂದ ಪ್ರಾರಂಭವಾಗುವ ಜಾನುವಾರು ಗಣತಿ ಕಾರ್ಯಕ್ಕೆ ಪಶುಸಂಗೋಪನೆ, ಮೀನುಗಾರಿಕೆ ಹಾಗೂ ಇತರ ಇಲಾಖೆಗಳಿಂದ ಅಧಿಕಾರಿ,ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.