Advertisement

ಶಿಕ್ಷಣ ಜ್ಞಾನಾರ್ಜನೆಗೆ ಸೀಮಿತವಾಗದಿರಲಿ

06:00 AM Jun 30, 2018 | Team Udayavani |

ಬೆಳಗಾವಿ: ಮುಂದಿನ 50 ವರ್ಷಗಳಿಗೆ ತಾಂತ್ರಿಕ ಶಿಕ್ಷಣ ಅಗತ್ಯಕ್ಕನುಸಾರವಾಗಿ ಪಠ್ಯಕ್ರಮ ರೂಪಿಸಬೇಕು ಎಂದು
ಪದ್ಮವಿಭೂಷಣ ಪುರಸ್ಕೃತ ಡಾ. ವಿ.ಕೆ. ಆತ್ರೆ ಹೇಳಿದರು.

Advertisement

ಬೆಳಗಾವಿ ವಿಶ್ವವಿದ್ಯಾಲಯದ 20ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣ ಕೇವಲ ಜ್ಞಾನಾರ್ಜನೆಗೆ ಸೀಮಿತವಾಗದೇ ಹೊಸ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಬೇಕು.ಅಂತಹ ಸವಾಲುಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ತೆಗೆದುಕೊಳ್ಳಬೇಕು ಎಂದರು.

ಮುಂದಿನ 30 ವರ್ಷ ಎಂಜಿನಿಯರಿಂಗ್‌ ಕ್ಷೇತ್ರಕ್ಕೆ ಬಹಳ ಸವಾಲಿನ ವರ್ಷಗಳು ಎಂದು ಅಮೆರಿಕ ಹೇಳಿದೆ. ಇದು ನಮಗೂ ಅನ್ವಯವಾಗುತ್ತದೆ. ಸವಾಲಿನ ಜತೆಗೆ ಅವಕಾಶಗಳೂ ಹೆಚ್ಚು ದೊರೆಯುತ್ತವೆ. ಇವುಗಳ ಸಮರ್ಪಕ ಬಳಕೆಗೆ ಇಂತಹ ವಿವಿಗಳು ಕೊಡುಗೆ ನೀಡಬೇಕು. ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಸವಾಲುಗಳು ಇರಲೇಬೇಕು. ಈ ಹಿನ್ನೆಲೆಯಲ್ಲಿ ಎಂಜನಿಯರಿಂಗ್‌ ಶಿಕ್ಷಣವನ್ನು ಪುನವಿಮರ್ಶೆ ಮಾಡುವ ಅಗತ್ಯವಿದೆ.ಅಮೂಲಾಗ್ರ ಬದಲಾವಣೆಯ ಚಿಂತನೆಗೆ ಎಲ್ಲ ವಿಶ್ವವಿದ್ಯಾಲಯಗಳು ಪ್ರಯತ್ನಿಸಬೇಕು ಎಂದು ತಿಳಿಸಿದರು.

441 ಕೋಟಿ ರೂಪಾಯಿ
ಶೀಘ್ರದಲ್ಲೇ ವಿವಿ ಸುಪರ್ದಿಗೆ

ಕೇಂದ್ರ ಆದಾಯ ತೆರಿಗೆ ಇಲಾಖೆಯಲ್ಲಿ ಬಹಳ ವರ್ಷಗಳಿಂದ ಸಿಲುಕಿಕೊಂಡಿರುವ ವಿಶ್ವವಿದ್ಯಾಲಯದ 441 ಕೋಟಿ ರೂ. ಶೀಘ್ರದಲ್ಲೇ ವಿವಿಯ ಸುಪರ್ದಿಗೆ ಮರಳಿ ಬರಲಿದೆ. ಈ ಹಣವನ್ನು ಬ್ಯಾಂಕಿನಲ್ಲಿ ಠೇವಣಿಯಾಗಿ ಇಡದೇ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಬಳಕೆ ಮಾಡಬೇಕು. ವಿದ್ಯಾರ್ಥಿಗಳ ಜ್ಞಾನಾರ್ಜನೆಯೇ ವಿಶ್ವವಿದ್ಯಾಲಯಗಳ ನಿಜವಾದ ಠೇವಣಿ ಎಂದು ರಾಜ್ಯಪಾಲ ವಿ.ಆರ್‌.ವಾಲಾ ಹೇಳಿದರು.

ವಿವಿಧ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲ, ಉಪನ್ಯಾಸಕರ ಹುದ್ದೆಗಳ ಭರ್ತಿ, 7ನೇ ವೇತನ ಆಯೋಗದ ಅನುಷ್ಠಾನ ಸೇರಿ ವಿವಿಧ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಬರುವ ಅಧಿವೇಶನದಲ್ಲಿ ಇದಕ್ಕೆ ಅನುಮೋದನೆ ಪಡೆದು ಜಾರಿಗೊಳಿಸಲು ಪ್ರಯತ್ನಿಸುವೆ.
– ಜಿ.ಟಿ. ದೇವೇಗೌಡ, ಉನ್ನತ ಶಿಕ್ಷಣ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next