Advertisement

2025ಕ್ಕೆ ಬಾಲಿವುಡ್‌ಗೆ ಸೀಕ್ವೆಲ್‌ಗಳೇ ಜೀವಾಳ.. ಇಲ್ಲಿದೆ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿ

05:44 PM Oct 12, 2024 | ಸುಹಾನ್ ಶೇಕ್ |

ಇತ್ತೀಚೆಗಿನ ವರ್ಷಗಳಲ್ಲಿ ಸಿನಿಮಾರಂಗದಲ್ಲಿ ಸೀಕ್ವೆಲ್‌ ಹೆಚ್ಚಾಗಿ ಸದ್ದು ಮಾಡುತ್ತಿದೆ. ಅದರಲ್ಲೂ ಬಾಲಿವುಡ್‌ನಲ್ಲಿ ಬಂದ ಸೀಕ್ವೆಲ್‌ನಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡುವುದರ ಜತೆಗೆ ಬಾಲಿವುಡ್‌ಗೆ ಮರುಜೀವ ತಂದುಕೊಟ್ಟಿದೆ ಎಂದರೆ ತಪ್ಪಾಗುವುದಿಲ್ಲ.

Advertisement

2025ರಲ್ಲಿ ಬರಲಿರುವ ಬಾಲಿವುಡ್‌ ಸಿನಿಮಾಗಳ ಲಿಸ್ಟ್‌ ಈಗಾಗಲೇ ಹೊರಬಿದ್ದಿದೆ. ಇದರಲ್ಲಿ ಬಹುನಿರೀಕ್ಷಿತ ಸಿನಿಮಾಗಳೆಲ್ಲಾ ಸೀಕ್ವೆಲ್‌ ಆಗಿರುವುದು ವಿಶೇಷ.

ʼಓ ಮೈ ಗಾಡ್‌ -2ʼ, ʼಗದರ್‌ -2ʼ,  ʼಸ್ತ್ರೀ-2‌ʼ, ʼಭೂಲ್ ಭೂಲೈಯಾ -2ʼ ಹೀಗೆ ಇತ್ತೀಚೆಗೆ ಬಂದ ಸೀಕ್ವೆಲ್‌ ಗಳು ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಹಿಟ್‌ ಆಗಿದೆ.

2025ರಲ್ಲಿ ಬರಲಿರುವ ಬಾಲಿವುಡ್ ಸೀಕ್ವೆಲ್‌ಗಳು ಮತ್ತು ಫ್ರಾಂಚೈಸ್ ಚಿತ್ರಗಳ ಪಟ್ಟಿ ಇಲ್ಲಿದೆ..

ರೈಡ್‌ -2 (Raid 2): 2018ರಲ್ಲಿ ಬಂದ ಅಜಯ್ ದೇವಗನ್‌ ಅಭಿನಯದ (Ajay Devgn)  ʼರೈಡ್‌ʼ ಸಿನಿಮಾ ಬಾಲಿವುಡ್ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿತ್ತು. 80ರ ದಶಕದಲ್ಲಾದ ಆದಾಯ ತೆರಿಗೆ ದಾಳಿಗಳ ಸುತ್ತ ʼರೈಡ್‌ʼ ಸಿನಿಮಾ ಸಾಗುತ್ತದೆ. ರಾಜ್ ಕುಮಾರ್ ಗುಪ್ತಾ ನಿರ್ದೇಶನದ ಈ ಸಿನಿಮಾದ ಸೀಕ್ವೆಲ್‌ ಮೇಲೆ ದೊಡ್ಡ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

Advertisement

ʼರೈಡ್ -2ʼ ನಲ್ಲಿ ಸೌರಭ್‌ ಶುಕ್ಲನಾಗಿ ಅಜಯ್‌ ದೇವಗನ್‌ ಕಾಣಿಸಿಕೊಳ್ಳಲಿದ್ದಾರೆ. ರಿತೇಶ್ ದೇಶಮುಖ್ (Riteish Deshmukh) ನೆಗೆಟಿವ್‌ ರೋಲ್‌ ನಲ್ಲಿ ಕಾಣಿಸಿಕೊಳ್ಳಲಿದ್ದು, 2025ಕ್ಕೆ ಸಿನಿಮಾ ತೆರೆ ಕಾಣಲಿದೆ.

ಜಾಲಿ ಎಲ್‌ಎಲ್‌ಬಿ-3 (Jolly LLB 3): ಬಾಲಿವುಡ್‌ನಲ್ಲಿ ಕೋರ್ಟ್‌ ರೂಮ್‌ ಡ್ರಾಮ ಸಿನಿಮಾಗಳು ಬಂದಿವೆ. ಅದರಲ್ಲಿ ಯಶಸ್ಸು ಕಂಡ ಸಿನಿಮಾದಲ್ಲಿ ʼಜಾಲಿ ಎಲ್‌ ಎಲ್‌ ಬಿʼ  ಸಿನಿಮಾ ಕೂಡ ಒಂದು. ಅಕ್ಷಯ್ ಕುಮಾರ್(Akshay Kumar), ಅರ್ಷದ್ ವಾರ್ಸಿ(Arshad Warsi) ವಕೀಲರಾಗಿ ಕಾಣಿಸಿಕೊಂಡ ಈ ಸಿನಿಮಾ ಸಖತ್‌ ಸದ್ದು ಮಾಡಿದೆ. ಭಾರತದ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಚಿತ್ರ ಬೆಳಕು ಚೆಲ್ಲುತ್ತದೆ.

ಇದರ ಮೂರನೇ ಭಾಗದ ಬಗ್ಗೆಯೂ ನಿರೀಕ್ಷೆ ಹೆಚ್ಚಿದೆ. ಮೂರನೇ ಭಾಗದಲ್ಲಿ ಅಕ್ಷಯ್‌, ಅರ್ಷದ್‌ ಇಬ್ಬರು ಕಾಣಿಸಿಕೊಳ್ಳಲಿದ್ದಾರೆ.

ಹೌಸ್‌ ಫುಲ್‌ -5 (Housefull 5): ಬಾಲಿವುಡ್‌ನ ಮೋಸ್ಟ್‌ ಸಕ್ಸಸ್‌ ಫ್ರಾಂಚೈಸ್ ಗಳಲ್ಲಿ ʼಹೌಸ್‌ ಫುಲ್‌ʼ ಕೂಡ ಒಂದು. ಹೌಸ್‌ ಫುಲ್‌ ಸಿನಿಮಾ ಹಿಟ್‌ ಆಗಲು ಮುಖ್ಯ ಕಾರಣ ಎಂದರೆ ಸಿನಿಮಾದಲ್ಲಿನ ಹಾಸ್ಯ ಎಂದರೆ ತಪ್ಪಾಗದು. ಮೊದಲ ಭಾಗದಿಂದ 4ನೇ ಭಾಗದವರೆಗೂ ʼಹೌಸ್‌ ಫುಲ್‌ʼ ಫ್ರಾಂಚೈಸ್ ಮೇಲಿನ ನಿರೀಕ್ಷೆ ಹೆಚ್ಚಾಗುತ್ತಾ ಹೋಗಿದೆ.

ಹೌಸ್‌ ಫುಲ್‌ -5 ನಲ್ಲಿ ತಾರಾಗಣ ಹೆಚ್ಚಿರಲಿದೆ. ಮೋಜು – ಮಸ್ತಿ ಹಾಗೂ ಕಾಮಿಡಿ ಎಲ್ಲವೂ  ಐದು ಪಟ್ಟು ಹೆಚ್ಚಿರಲಿದ್ದು 2025ಕ್ಕೆ ಸಿನಿಮಾ ತೆರೆ ಕಾಣಲಿದೆ.

ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್, ರಿತೇಶ್ ದೇಶ್ ಮುಖ್, ಡಿನೋ ಮೋರಿಯಾ, ಜಾಕ್ವೆಲಿನ್ ಫರ್ನಾಂಡಿಸ್, ಫರ್ದೀನ್ ಖಾನ್, ಬೊಮನ್ ಇರಾನಿ ಮತ್ತು ಚುಂಕಿ ಪಾಂಡೆ ಸಿನಿಮಾದಲ್ಲಿ ಇರಲಿದ್ದಾರೆ.

ವಾರ್‌ -2 (War-2): 2019ರಲ್ಲಿ ಬಂದ ʼವಾರ್ʼ ಬಾಲಿವುಡ್‌ನ ದೊಡ್ಡ ಆ್ಯಕ್ಷನ್ ಸಿನಿಮಾಗಳಲ್ಲಿ ಒಂದು. ಸ್ಟಂಟ್ಸ್‌, ವಿಷುವಲ್ಸ್‌ ಸೇರಿದಂತೆ ಸಿನಿಮಾದ ಕಥೆಯೂ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಹೃತಿಕ್‌ ರೋಷನ್‌ (Hrithik Roshan) , ಟೈಗರ್‌ ಶ್ರಾಫ್ (Tiger Shroff) ತಮ್ಮ ಅಭಿನಯದಿಂದ ಬಾಕ್ಸ್‌ ಆಫೀಸ್‌ ನಲ್ಲಿ ಭರ್ಜರಿ ಗಳಿಕೆ ಕಂಡಿದ್ದರು.

‘ವಾರ್-2‌ʼ ಸಿನಿಮಾ ಸೆಟ್ಟೇರಿದ ದಿನದಿಂದ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದಕ್ಕೆ ಪ್ರಮುಖ ಕಾರಣವೆಂದರೆ ಈ ಬಾರಿ ಸಿನಿಮಾದಲ್ಲಿ ನೆಗೆಟಿವ್‌ ರೋಲ್‌ ನಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಜೂ.ಎನ್‌ ಟಿಆರ್‌ (Jr.NTR) ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು.

ಬಹು ನಿರೀಕ್ಷಿತ ʼವಾರ್‌ -2ʼ 2025ಕ್ಕೆ ತೆರೆ ಕಾಣಲಿದೆ.

ವೆಲ್‌ ಕಂ ಟು ದಿ ಜಂಗಲ್‌ (Welcome to the Jungle) : ಬಾಲಿವುಡ್‌ನ ಮತ್ತೊಂದು ಸಕ್ಸಸ್‌ ಫುಲ್‌ ಫ್ರಾಂಚೈಸ್ ಎಂದರೆ ಅದು ʼವೆಲ್‌ ಕಂʼ ಫ್ರಾಂಚೈಸ್. ಮಲ್ಟಿಸ್ಟಾರ್ಸ್‌ ಹಾಗೂ ಕಾಮಿಡಿ ಕಥಾಹಂದರದಿಂದ ಗೆದ್ದಿರುವ ʼವೆಲ್‌ ಕಂʼ ಸಿನಿಮಾದ ಮೂರನೇ ಭಾಗವಾಗಿ ʼವೆಲ್‌ ಕಂ ಟು ದಿ ಜಂಗಲ್‌ʼ ಸಿನಿಮಾ ಬರಲಿದೆ.

ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ (Suniel Shetty), ಪರೇಶ್ ರಾವಲ್ (Paresh Rawal) ಮುಂತಾದ ಸ್ಟಾರ್ಸ್‌ ಗಳು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸನ್‌ ಆಫ್‌ ಸರ್ದಾರ್‌ -2 (Son of Sardaar 2) : ಅಜಯ್ ದೇವಗನ್, ಸಂಜಯ್ ದತ್ (Sanjay Dutt) ಮತ್ತು ಸೋನಾಕ್ಷಿ ಸಿನ್ಹಾ (Sonakshi Sinha) ಪ್ರಧಾನ ಭೂಮಿಕೆಯಲ್ಲಿ ಬಂದಿದ್ದ ʼಸನ್‌ ಆಫ್‌ ಸರ್ದಾರ್‌ʼ ಕಾಮಿಡಿ ಹಾಗೂ ಹೈವೊಲ್ಟೇಜ್‌ ಆ್ಯಕ್ಷನ್ ನಿಂದ ಸದ್ದು ಮಾಡಿದೆ. ಇದೇ ಕಾರಣದಿಂದ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ಉತ್ತಮ ಗಳಿಕೆಯನ್ನು ಕಂಡಿತು.

ʼಸನ್‌ ಆಫ್‌ ಸರ್ದಾರ್-2‌ʼ ಅಜಯ್‌ ದೇವಗನ್‌ ಮತ್ತೆ ಸಂಜಯ್‌ ದತ್‌ ಅವರೊಂದಿಗೆ ಕಾಣಿಸಿಕೊಳ್ಳಲಿದ್ದು, ಈ ಬಾರಿ ಮೃಣಾಲ್‌ ಠಾಕೂರ್ (Mrunal Thakur)‌ ಪಾತ್ರವರ್ಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2025ಕ್ಕೆ ಈ ಸಿನಿಮಾ ತೆರೆಕಾಣಲಿದೆ.

ದೇ ದೇ ಪ್ಯಾರ್ ದೇ 2 (De De Pyaar De 2): ತನ್ನ ವಿಭಿನ್ನ ಕಥೆ ಹಾಗೂ ಹಾಸ್ಯದಿಂದ ಬಾಕ್ಸ್‌ ಆಫೀಸ್‌ ನಲ್ಲಿ ಗೆದ್ದಿದ್ದ ʼದೇ ದೇ ಪ್ಯಾರ್ ದೇʼ ಸಿನಿಮಾದಲ್ಲಿ ಅಜಯ್ ದೇವಗನ್, ರಾಕುಲ್ ಪ್ರೀತ್ ಸಿಂಗ್ (Rakul Preet Singh) ಮತ್ತು ತಬು (Tabu) ನಟಿಸಿದ್ದರು.

ಪ್ರೀತಿ ಹಾಗೂ ಸಂಬಂಧಗಳ ಸುತ್ತ ಸಾಗಿದ ಈ ಸಿನಿಮಾದ ಎರಡನೇ ಭಾಗ ಅನೌನ್ಸ್‌ ಆಗಿದ್ದು, ಸೀಕ್ವೆಲ್‌ ನಲ್ಲಿ ರಾಕುಲ್‌ ಪ್ರೀತ್‌ ತಂದೆಯಾಗಿ ಆರ್.‌ ಮಾಧವನ್‌ (R. Madhavan) ಕಾಣಿಸಿಕೊಳ್ಳಲಿದ್ದು, ಕಾರ್ತಿಕ್‌ ಆರ್ಯನ್‌ (Kartik Aaryan) ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next