ನವದೆಹಲಿ: ಜಗತ್ತಿನ ಹಳೆಯ ಹಾಗೂ ಜಾಗತಿಕ ಬ್ರ್ಯಾಂಡ್ ಕಂಪನಿ ರಾಯಲ್ ಎನ್ ಫೀಲ್ಡ್ ಇದೀಗ 2023ರ ಇಂಟರ್ ಸೆಪ್ಟರ್ 650 ಹಾಗೂ ಕಾಂಟಿನೆಂಟಲ್ ಜಿಟಿ 650 ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.
ಇದನ್ನೂ ಓದಿ:ನಡು ರಸ್ತೆಯಲ್ಲೇ ಪ್ರಾಧ್ಯಾಪಕಿ ಮೇಲೆ ಹಲ್ಲೆ ನಡೆಸಿ ಎಳೆದೊಯ್ದು ದರೋಡೆ: ವಿಡಿಯೋ ವೈರಲ್
ರಾಯಲ್ ಎನ್ ಫೀಲ್ಡ್ 2023ರ ಇಂಟರ್ ಸೆಪ್ಟರ್ 650 ಎಕ್ಸ್ ಶೋರೂಂ ಬೆಲೆ 3.03 ಲಕ್ಷ ರೂಪಾಯಿ ಮತ್ತು 20234 ಕಾಂಟಿನೆಂಟಲ್ ಜಿಟಿ 650 ಬೆಲೆ 3.19 ಲಕ್ಷ ರೂಪಾಯಿ ಎಂದು ಪ್ರಕಟನೆಯಲ್ಲಿ ತಿಳಿಸಿದೆ.
ಭಾರತದ ಎಲ್ಲಾ ರಾಯಲ್ ಎನ್ ಫೀಲ್ಡ್ ಶೋ ರೂಂಗಳಲ್ಲಿ ರಾಯಲ್ ಎನ್ ಫೀಲ್ಡ್ ನ 2023ರ ಮಾಡೆಲ್ಸ್ ನ ಇಂಟರ್ ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬುಕ್ಕಿಂಗ್ ಆರಂಭಗೊಂಡಿರುವುದಾಗಿ ಹೇಳಿದೆ.
2023 ರಾಯಲ್ ಎನ್ ಫೀಲ್ಡ್ ಇಂಟರ್ ಸೆಪ್ಟರ್ 650 ನಾಲ್ಕು ನೂತನ ಬಣ್ಣಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಇದು ಬ್ಲ್ಯಾಕ್ ರೇ ಮತ್ತು ಬಾರ್ಸಿಲೋನಾ ಬ್ಲೂ ಬಣ್ಣಗಳನ್ನು ಒಳಗೊಂಡಿದೆ. ಅಷ್ಟೇ ನೂತನ ಕಸ್ಟಮ್ ಡ್ಯೂಯಲ್ ಕಲರ್ ವೇ ಬ್ಲ್ಯಾಕ್ ಪರ್ಲ್ ಮತ್ತು ಕ್ಯಾಲಿ ಗ್ರೀನ್ ಬಣ್ಣಗಳಲ್ಲಿಯೂ ಇಂಟರ್ ಸೆಪ್ಟರ್ 650 ಲಭ್ಯವಿದೆ. ಇದರೊಂದಿಗೆ ಎನ್ ಫೀಲ್ಡ್ ಸರಣಿಯಲ್ಲಿ ಮಾರ್ಕ್ 2, ಸನ್ ಸೆಟ್ ಸ್ಟ್ರಿಪ್ ಮತ್ತು ಕ್ಯಾನ್ಯೊನ್ ರೆಡ್ ಬಣ್ಣಗಳ ಸರಣಿ ಎಂದಿನಂತೆ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ತಿಳಿಸಿದೆ.
ಅದೇ ರೀತಿ 2023 ರಾಯಲ್ ಎನ್ ಫೀಲ್ಡ್ ಜಿಟಿ 650 ಕೂಡಾ ಎರಡು ನೂತನ ಬಣ್ಣಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಸ್ಲಿಪ್ ಸ್ಟ್ರೀಮ್ ಬ್ಲ್ಯೂ ಮತ್ತು ಅಪೆಕ್ಸ್ ಗ್ರೇ ಬಣ್ಣಗಳಲ್ಲಿ ರಾಯಲ್ ಎನ್ ಫೀಲ್ಡ್ 650 ಲಭ್ಯವಿದೆ.
ರಾಯಲ್ ಎನ್ ಫೀಲ್ಡ್ ನ 650 ಶ್ರೇಣಿಯಲ್ಲಿ ಹೊಸ ಸ್ವಿಚ್ ಗಿಯರ್, ಯುಎಸ್ ಬಿ ಚಾರ್ಜಿಂಗ್ ಪೋರ್ಟ್ ಮತ್ತು ನೂತನ ಎಲ್ ಇಡಿ ಹೆಡ್ ಲ್ಯಾಂಪ್ ಅನ್ನು ಒಳಗೊಂಡಿದೆ. ಬ್ಲ್ಯಾಕ್ಡ್ ಔಟ್ ಶ್ರೇಣಿಯಲ್ಲಿನ ಇಂಟರ್ ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ ಎಂಜಿನ್ ಮತ್ತು ಎಕ್ಸ್ ಹೌಸ್ಟ್ ಭಾಗಗಳು ಕೂಡಾ ಕಪ್ಪು ಬಣ್ಣದ್ದಾಗಿದೆ. ಇಂಟರ್ ಸೆಪ್ಟರ್ ಮತ್ತು ಕಾಂಟಿನೆಂಟಲ್ ಟ್ಯೂಬ್ ಲೆಸ್ ಟಯರ್ ಗಳನ್ನು ಹೊಂದಿರುವುದಾಗಿ ಪ್ರಕಟನೆ ತಿಳಿಸಿದೆ.