Advertisement

2023ನೇ ಸಾಲಿನ ಸಾರ್ವತ್ರಿಕ ರಜೆಗಳು

08:07 PM Nov 21, 2022 | Team Udayavani |

ಬೆಂಗಳೂರು: 2023ನೇ ಸಾಲಿನ ಸಾರ್ವತ್ರಿಕ ರಜೆಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಘೋಷಿಸಿದ್ದು, ಎರಡನೇ ಮತ್ತು ನಾಲ್ಕನೇ ಶನಿವಾರ, ಭಾನುವಾರ ದಿನದ ರಜೆಗಳನ್ನು ಹೊರತುಪಡಿಸಿ 20 ಸಾರ್ವತ್ರಿಕ ರಜೆಗಳು ಹಾಗೂ 17 ಪರಿಮಿತ (ಸಾಂದರ್ಭಿಕ) ರಜೆಗಳನ್ನು ಪ್ರಕಟಿಸಲಾಗಿದೆ.

Advertisement

ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ (ಜ.15), ಬಸವ ಜಯಂತಿ/ಅಕ್ಷಯ ತೃತೀಯ (ಏಪ್ರಿಲ್‌ 23) ನರಕ ಚತುರ್ದಶಿ (ನ.12) ಹಾಗೂ ಎರಡನೇ ಶನಿವಾರ ಬರುವ ಮಹಾಲಯ ಅಮಾವಾಸ್ಯೆ (ಅ.14), ನಾಲ್ಕನೇ ಶನಿವಾರ ಬರುವ ರಂಜಾನ್‌ ಹಬ್ಬ (ಏ.22), ಮಹರ್ಷಿ ವಾಲ್ಮೀಕಿ ಜಯಂತಿ (ಅ.28) ಇವುಗಳನ್ನು ಸಾರ್ವತ್ರಿಕ ರಜಾ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.

ಅದೇ ರೀತಿ ನೂತನ ವರ್ಷಾರಂಭ (ಜ.1), ದೇವರ ದಾಸಿಮಯ್ಯ ಜಯಂತಿ (ಮಾ.26), ವಿಶ್ವಕರ್ಮ ಜಯಂತಿ (ಸೆ.17). ಕ್ರಿಸ್‌ಮಸ್‌ (ಡಿ.24) ಭಾನುವಾರದಂದು ಹಾಗೂ ಹೋಲಿ ಸ್ಯಾಟರ್‌ ಡೇ (ಏ.8) ಎರಡನೇ ಶನಿವಾರ ಬರುವುದರಿಂದ ಸಾಂದರ್ಭಿಕ ರಜೆ ಪಟ್ಟಿಯಲ್ಲಿ ಪ್ರಕಟಿಸಿಲ್ಲ.

ಅಲ್ಲದೆ, ಸೌರಮಾನ ಯುಗಾದಿ (ಏ.14) ಶುಕ್ರವಾರ, ಡಾ.ಬಿ.ಆರ್‌. ಅಂಬೇಡ್ಕರ್‌ ಜಯಂತಿ, ಸ್ವರ್ಣಗೌರಿ ವ್ರತ (ಸೆ.18), ಸೋಮವಾರ, ವರಸಿದ್ಧಿ ವಿನಾಯಕ ವ್ರತ ಹಾಗೂ ಅನಂತಪದ್ಮನಾಭ ವ್ರತ (ಸೆ.28) ಗುರುವಾರ, ಈದ್‌ ಮಿಲಾದ್‌ ನಿಮಿತ್ತ ಘೋಷಿಸಿರುವ ಸಾರ್ವತ್ರಿಕ ರಜಾ ದಿನಗಳಂದು ಬರುವುದರಿಂದ ರಜೆ ಪಟ್ಟಿಯಲ್ಲಿ ನಮೂದಿಸಿಲ್ಲ.

ರಜೆ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸ್ಲಿಮರ ಹಬ್ಬಗಳು ನಿಗದಿತ ದಿನಾಂಕದಂದು ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸ್ಲಿಮರು ನಿಗದಿತ ರಜೆಗೆ ಬದಲಾಗಿ ಹಬ್ಬದ ದಿನ ರಜೆ ಮಂಜೂರು ಮಾಡಬಹುದು.

Advertisement

ಏಪ್ರಿಲ್‌ 1 ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳ ವಾರ್ಷಿಕ ಮುಕ್ತಾಯದ ದಿನ ಆಗಿರುವುದರಿಂದ ಆ ದಿನ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಿಗೆ ಮಾತ್ರ ರಜೆ ಇರುತ್ತದೆ.

ಸೆಪ್ಟೆಂಬರ್‌ 3 (ಭಾನುವಾರ) ಕೈಲ್‌ ಮೂಹೂರ್ತ, ಅ.18 (ಬುಧವಾರ) ತುಲಾ ಸಂಕ್ರಮಣ ಹಾಗೂ ನ.28 (ಮಂಗಳವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆ ಘೋಷಿಸಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧಿಸೂಚನೆ ತಿಳಿಸಿದೆ.

ಸಾರ್ವತ್ರಿಕ ರಜೆಗಳು :

ಜನವರಿ 26-ಗಣರಾಜ್ಯೋತ್ಸವ

ಫೆಬ್ರವರಿ 18-ಮಹಾ ಶಿವರಾತ್ರಿ

ಮಾರ್ಚ್‌ 22- ಯುಗಾದಿ

ಏಪ್ರಿಲ್‌ 1-ಬ್ಯಾಂಕುಗಳ ವಾರ್ಷಿಕ ಲೆಕ್ಕಪತ್ರ ಮುಕ್ತಾಯ ದಿನ

ಏಪ್ರಿಲ್‌ 3-ಮಹಾವೀರ ಜಯಂತಿ

ಏಪ್ರಿಲ್‌ 7- ಗುಡ್‌ ಫ್ರೈಡೆ

ಏಪ್ರಿಲ್‌ 14- ಡಾ. ಬಿ.ಆರ್‌. ಅಂಬೇಡ್ಕರ್‌ ಜಯಂತಿ

ಮೇ 1-ಕಾರ್ಮಿಕರ ದಿನಾಚರಣೆ

ಜೂನ್‌ 29- ಬಕ್ರೀದ್‌

ಜುಲೈ 29- ಮೊಹರಂ ಕಡೇ ದಿನ

ಆಗಸ್ಟ್‌ 15- ಸ್ವಾತಂತ್ರ್ಯ ದಿನಾಚರಣೆ

ಸೆಪ್ಟಂಬರ್‌ 18- ವರಸಿದ್ಧಿ ವಿನಾಯಕ ವ್ರತ

ಸೆಪ್ಟಂಬರ್‌ 28- ಈದ್‌ ಮಿಲಾದ್‌

ಅಕ್ಟೋಬರ್‌ 2-ಗಾಂಧಿ ಜಯಂತಿ

ಅಕ್ಟೋಬರ್‌ 23- ಮಹಾನವಮಿ ಆಯುಧ ಪೂಜೆ

ಅಕ್ಟೋಬರ್‌ 24- ವಿಜಯದಶಮಿ

ನವೆಂಬರ್‌ 1- ಕನ್ನಡ ರಾಜ್ಯೋತ್ಸವ

ನವೆಂಬರ್‌ 14- ಬಲಿಪಾಡ್ಯಮಿ ದೀಪಾವಳಿ

ನವೆಂಬರ್‌ 30-ಕನಕದಾಸ ಜಯಂತಿ

ಡಿಸೆಂಬರ್‌ 25-ಕ್ರಿಸ್‌ಮಸ್‌

ಸಾಂದರ್ಭಿಕ ರಜೆಗಳು:

ಜನವರಿ 30- ಮಧ್ವ ನವಮಿ

ಮಾರ್ಚ್‌ 7-ಷಬ್‌-ಏ-ಬರಾತ್‌

ಮಾರ್ಚ್‌ 8-ಹೋಳಿ ಹಬ್ಬ

ಮಾರ್ಚ್‌ 30-ಶ್ರೀರಾಮ ನವಮಿ

ಏಪ್ರಿಲ್‌ 18- ಷಬ್‌-ಏ-ಖದರ್‌

ಏಪ್ರಿಲ್‌ 21- ಜುಮತ್‌-ಉಲ್‌-ವಿದಾ

ಏಪ್ರಿಲ್‌ 25- ಶಂಕರಾಚಾರ್ಯ ಜಯಂತಿ, ರಾಮಾನುಜಾಚಾರ್ಯ ಜಯಂತಿ

ಮೇ 5- ಬುದ್ಧ ಪೂರ್ಣಿಮೆ

ಆಗಸ್ಟ್‌ 25- ವರಮಹಾಲಕ್ಷ್ಮಿ ವ್ರತ

ಆಗಸ್ಟ್‌ 29- ಋಗ್‌ ಉಪಕರ್ಮ, ತಿರು ಓಣಂ

ಆಗಸ್ಟ್‌ 30- ಯಜುರ್‌ ಉಪಕರ್ಮ

ಆಗಸ್ಟ್‌ 31-ಬ್ರಹ್ಮಶ್ರೀ ನಾರಾಯಣಗುರು ಜಯಂತಿ

ಸೆಪ್ಟಂಬರ್‌ 6- ಶ್ರೀ ಕೃಷ್ಣ ಜನ್ಮಾಷ್ಠಮಿ

ಸೆಪ್ಟಂಬರ್‌ 8- ಕನ್ಯಾ ಮರಿಯಮ್ಮ ಜಯಂತಿ

ಅಕ್ಟೋಬರ್‌ 18- ತುಲಾ ಸಂಕ್ರಮಣ

ನವೆಂಬರ್‌ 27- ಗುರು ನಾನಕ್‌ ಜಯಂತಿ

ನವೆಂಬರ್‌ 28-ಹುತ್ತರಿ ಹಬ್ಬ

Advertisement

Udayavani is now on Telegram. Click here to join our channel and stay updated with the latest news.

Next