Advertisement

2022ರ ಕಾಮನ್‌ವೆಲ್ತ್‌ ಶೂಟಿಂಗ್‌ ಭಾರತದಲ್ಲಿ

11:59 PM Jan 04, 2020 | Team Udayavani |

ಹೊಸದಿಲ್ಲಿ: 2022ರಲ್ಲಿ ಭಾರತದಲ್ಲೇ ಕಾಮನ್‌ವೆಲ್ತ್‌ ಶೂಟಿಂಗ್‌ ಕೂಟ ನಡೆಸಲು ಭಾರತೀಯ ಒಲಿಂಪಿಕ್ಸ್‌ ಸಂಸ್ಥೆಗೆ (ಐಒಎ) ಕೇಂದ್ರ ಸರಕಾರ ಅನುಮತಿ ನೀಡಿದೆ. ಹಾಗೆಯೇ ಬಿಲ್ಗಾರಿಕೆ ಕೂಟ ನಡೆಸಲೂ ಅವಕಾಶ ನೀಡಿದೆ. ಇಲ್ಲಿ ಗೆದ್ದ ಪದಕಗಳು 2022ರ ಕಾಮನ್‌ವೆಲ್ತ್‌ ಗೇಮ್ಸ್‌ ಪದಕಗಳ ಪಟ್ಟಿಗೆ ಸೇರ್ಪಡೆಗೊಳ್ಳುತ್ತವೆ ಎನ್ನುವುದು ಗಮನಾರ್ಹ.

Advertisement

ಕಾಮನ್‌ವೆಲ್ತ್‌ ಶೂಟಿಂಗ್‌ ಕೂಟದ ಖರ್ಚನ್ನು ರಾಷ್ಟ್ರೀಯ ರೈಫ‌ಲ್‌ ಒಕ್ಕೂಟ (ಎನ್‌ಆರ್‌ಎಐ) ಹಾಗೂ ಬಿಲ್ಗಾರಿಕೆ ಕೂಟದ ಖರ್ಚನ್ನು ಕೇಂದ್ರ ಸರಕಾರ ಭರಿಸಲಿದೆ.

2022ರ ಕಾಮನ್‌ವೆಲ್ತ್‌ ಗೇಮ್ಸ್‌ ಬ್ರಿಟನ್‌ನಲ್ಲಿ ನಡೆಯಲಿದೆ. ಅಲ್ಲಿನ ಸ್ಪರ್ಧೆಯಿಂದ ಶೂಟಿಂಗ್‌ ಮತ್ತು ಬಿಲ್ಗಾರಿಕೆಯನ್ನು ಕೈಬಿಡಲಾಗಿತ್ತು. ಇದರ ವಿರುದ್ಧ ಭಾರತ ಒಲಿಂಪಿಕ್ಸ್‌ ಸಂಸ್ಥೆ ಮುಖ್ಯಸ್ಥ ನರೇಂದ್ರ ಬಾತ್ರಾ ಪ್ರತಿಭಟನೆ ನಡೆಸಿದ್ದರು. 2022ರ ಕಾಮನ್‌ವೆಲ್ತ್‌ ಕೂಟವನ್ನೇ ಬಹಿಷ್ಕರಿಸುವ ಮಾತುಗಳನ್ನಾಡಿದ್ದರು. ಆದ್ದರಿಂದಲೇ ಎರಡೂ ತಂಡಗಳ ನಡುವೆ ಸಮನ್ವಯಕ್ಕೆ ಯತ್ನಿಸಲಾಗಿತ್ತು. ಸ್ವತಃ ಕಾಮನ್‌ವೆಲ್ತ್‌ ಸಂಘಟನೆಯ ಮುಖ್ಯಸ್ಥರು ಭಾರತಕ್ಕೆ ಬಂದು ಮಾತುಕತೆ ನಡೆಸಿದ್ದರು. ಇದಕ್ಕೀಗ ಪರಿಹಾರ ಲಭಿಸಿದೆ. ಐಒಎ ಬಹಿಷ್ಕಾರ ನಿರ್ಧಾರ ಕೈಬಿಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next