Advertisement
ನಾಲ್ಕು ಬಾರಿ ವಿಧಾನಸಭೆ ಸದಸ್ಯರಾಗಿ, ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ 36 ವರ್ಷಗಳ ಸುದೀರ್ಘ ಶಾಸಕತ್ವ ಅವಧಿ ಹೊಂದಿದ್ದ ಕೆ. ಪ್ರತಾಪಚಂದ್ರ ಶೆಟ್ಟಿ ಅವರ ಶಾಸಕತ್ವ ಜ. 5ರಂದು ಕೊನೆ ಯಾಯಿತು. ಸದ್ಯ ಚುನಾವಣ ರಾಜಕೀಯದಿಂದ ದೂರವುಳಿದಿದ್ದಾರೆ.
Related Articles
Advertisement
ಭಾರತೀಯ ನೌಕಾಪಡೆಯಲ್ಲಿ ದಿಲ್ಲಿಯಲ್ಲಿ ಡೆಪ್ಯುಟಿ ಕಮಾಂಡೆಂಟ್ ಆಗಿ ರುವ, ಕುಂದಾಪುರದ ಎಚ್.ಟಿ. ಮಂಜುನಾಥ್ ಅವರು ಜ.26ರಂದು ದಿಲ್ಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾರತೀಯ ನೌಕಾಪಡೆಯ ಕವಾಯತಿನ ನೇತೃತ್ವ ವಹಿಸಿದ್ದರು.
ಕಂದಾಯ ಸಚಿವರ ಗ್ರಾಮ ವಾಸ್ತವ್ಯ :
“ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಯೋಜನೆಯಡಿ ಕಂದಾಯ ಸಚಿವ ಆರ್. ಅಶೋಕ್ ಅವರು ಫೆ.19ರಂದು ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಹಾಗೂ ಆರೂರು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ನಡೆಸಿದರು. ಸರಕಾರದ ವಿವಿಧ ಫಲಾನುಭವಿಗಳಿಗೆ ಸವಲತ್ತು ವಿತರಿಸಿದರು.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ :
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೇ 14ರಂದು ಉಡುಪಿಗೆ ಭೇಟಿ ನೀಡಿದ್ದರು. ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರುಶನ ಪಡೆದು, ಪರ್ಯಾಯ ಕೃಷ್ಣಾಪುರದ ಮಠದ ಶ್ರೀಗಳಿಂದ ಮಂತ್ರಾ ಕ್ಷತೆ ಪಡೆದರು. ಟ್ಯಾಪ್ಮಿ ಘಟಿಕೋತ್ಸವದಲ್ಲಿ ಭಾಗವಹಿಸಿದ್ದರು.
ಶ್ರೀಕೃಷ್ಣಾಷ್ಟಮಿ, ವಿಟ್ಲಪಿಂಡಿ ಸಂಭ್ರಮ :
ಉಡುಪಿ ಶ್ರೀಕೃಷ್ಣಮಠದಲ್ಲಿ ಆ. 18ರಂದು ಶ್ರೀ ಕೃಷ್ಣಾಷ್ಠಮಿ ಹಿನ್ನೆಲೆಯಲ್ಲಿ ಪರ್ಯಾಯ ಶ್ರೀಗಳಿಂದ ವಿಶೇಷ ಪೂಜೆ, ಅರ್ಘ್ಯ ಪ್ರದಾನ ನೆರವೇರಿದುವು. ಆ. 19ರಂದು ಸಡಗರ, ಸಂಭ್ರಮಗಳಿಂದ ವಿಟ್ಲಪಿಂಡಿಯನ್ನು ಆಚರಿಸ ಲಾಯಿತು. ಕೊರೊನಾ ಹಿನ್ನೆಲೆಯಲ್ಲಿ 2 ವರ್ಷಗಳ ಕಾಲ ಸಾಂಪ್ರದಾಯಿಕ ವಾಗಿ ಸರಳವಾಗಿ ಈ ಹಬ್ಬಗಳನ್ನು ಆಚರಿಸಲಾಗಿದ್ದರೆ ಈ ಬಾರಿ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ಸಚಿವ ಡಾ|ಅಶ್ವತ್ಥನಾರಾಯಣ ಭೇಟಿ :
ಉನ್ನತ ಶಿಕ್ಷಣ ಸಚಿವ ಡಾ|ಅಶ್ವತ್ಥನಾರಾಯಣ ಅವರು ನ. 26ರಂದು ಉಡುಪಿ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಣಿಪಾಲದ “ಉದಯವಾಣಿ’ ಕಚೇರಿಗೆ ಭೇಟಿ ನೀಡಿ ಆಧುನಿಕ ಮಣಿಪಾಲದ ನಿರ್ಮಾತೃ ಟಿ.ಉಪೇಂದ್ರ ಪೈಯವರ ಜನ್ಮ ದಿನದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ್ದರು.
ಕಲೆ, ಸಾಂಸ್ಕೃತಿಕ ಸಮ್ಮಿಲನದ ಕಾರ್ಕಳ ಉತ್ಸವ :
ಈ ವರ್ಷದ ಮಾರ್ಚ್ ತಿಂಗಳಲ್ಲಿ 10 ದಿನಗಳ ಕಾಲ ನಡೆದ ಕಲೆ, ಸಾಂಸ್ಕೃತಿಕ ಸಮ್ಮಿಲನದ ಕಾರ್ಕಳ ಉತ್ಸವದಲ್ಲಿ ನಾಡಿನ ವಿವಿಧ ಕಡೆಗಳ ಕಲೆಗಳ ಪ್ರದರ್ಶನ, ಕಲಾ ತಂಡಗಳ ಮೆರವಣಿಗೆಗಳು ನಡೆದಿದ್ದವು. ಹೆಲಿಕಾಪ್ಟರ್ ವಿಹಾರ, ಹಲವು ಪ್ರದ ರ್ಶನಗಳು, ಸಾಂಸ್ಕೃತಿಕ ಪ್ರದ ರ್ಶನಗಳು ನಡೆದಿದ್ದವು. ಅದ್ದೂರಿಯಾಗಿ ನಡೆದ ಈ ಉತ್ಸವದಲ್ಲಿ ಪ್ರತಿದಿನ ಲಕ್ಷಕ್ಕೂ ಅಧಿಕ ಮಂದಿ ಸೇರು ತ್ತಿದ್ದರು. ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹೊÉàಟ್ ಸಹಿತ ಅನೇಕ ಮಂದಿ ಗಣ್ಯರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಕಾಮನ್‌ವೆಲ್ತ್ ಗೇಮ್ಸ್: ಗುರುರಾಜ್‌ಗೆ ಕಂಚು:
ಚಿತ್ತೂರಿನ ಗುರುರಾಜ್ ಪೂಜಾರಿ ಅವರು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಜುಲೈ 30ರಂದು ಕಂಚಿನ ಪದಕ ಪಡೆದಿದ್ದರು. 2018ರ ಗೋಲ್ಡ್ ಕೋಸ್ಟ್ ಗೇಮ್ಸ್‌ನಲ್ಲಿ ಅವರು 56 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಈ ಬಾರಿ ಅವರು ತಮ್ಮ ಸ್ಪರ್ಧೆಯನ್ನು 61 ಕೆ.ಜಿ. ವಿಭಾಗಕ್ಕೆ ಪರಿವರ್ತಿಸಿಕೊಂಡರು. ಇತಿಹಾಸ ದಲ್ಲಿಯೇ ಈ ವಿಭಾಗ ದಲ್ಲಿ ಭಾರತಕ್ಕೆ ಒಲಿದ ಮೊದಲ ಗೇಮ್ಸ್ ಪದಕ ಇದಾಗಿತ್ತು.
ಯೋಗಾಸನ ಸ್ಪರ್ಧೆ: ಧನ್ವಿ ಆಯ್ಕೆ :
ಒಂದನೇ ನ್ಯಾಶನಲ್ ಒಲಿಂಪಿಕ್ಸ್ ಗೇಮ್ಸ್ ಇಂಡಿಯಾ 2021 ಯೋಗಾಸನ ಸ್ಪರ್ಧೆಯಲ್ಲಿ ಮರವಂತೆಯ ಧನ್ವಿ ಅವರು 9ನೇ ರ್‍ಯಾಂಕ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಪೋರ್ಟ್ ಬ್ಲೇರ್‌ನಲ್ಲಿ ನಡೆದ 2021-22ನೇ ಸಾಲಿನ ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ, ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಆಗಿದ್ದರು.
ರಂಗೋಲಿಯಲ್ಲಿ 76 ನಿಮಿಷಗಳಲ್ಲಿ 76 ರಾಷ್ಟ್ರಧ್ವಜ :
ತಮಿಳುನಾಡಿನ ಜಾಕಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಯವರು ಆಯೋಜಿಸಿದ ಸ್ವಾತಂತ್ರÂದ ಅಮೃತ ಮಹೋತ್ಸವ ಅಂಗವಾಗಿ 76 ನಿಮಿಷಗಳಲ್ಲಿ ಭಾರತದ 76 ರಾಷ್ಟ್ರ ಧ್ವಜಗಳನ್ನು ರಂಗೋಲಿಯಲ್ಲಿ ಬಿಡಿಸುವ ಮೂಲಕ ಡಾ| ಭಾರತಿ ಮರವಂತೆ ವಿಶ್ವ ದಾಖಲೆ ನಿರ್ಮಿಸಿದ್ದರು.
ಭಾರತ ತಂಡಕ್ಕೆ ಗೋಳಿಹೊಳೆಯ ಪೃಥ್ವಿರಾಜ್ ಶೆಟ್ಟಿ :
ಅಂತಾರಾಷ್ಟ್ರೀಯ ಕಿವುಡರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಮಾರ್ಚ್ 15ರಂದು ಪ್ರಕಟಿಸಲಾದ ಭಾರತದ ಅಂತಿಮ 15 ಮಂದಿಯ ತಂಡದಲ್ಲಿ ಕುಂದಾಪುರ ಮೂಲದ ಪೃಥ್ವಿರಾಜ್ ಶೆಟ್ಟಿ ಹುಂಚನಿ ಸ್ಥಾನ ಪಡೆದಿದ್ದರು. ವೇಗದ ಬೌಲರ್ ಮಾತ್ರವಲ್ಲದೆ, ಕೆಳ ಕ್ರಮಾಂಕದ ಬ್ಯಾಟರ್ ಆಗಿದ್ದಾರೆ.
ಶರತ್ ಶೇರುಗಾರ್‌ಗೆ ಚಿನ್ನದ ಪದಕ :
ಪಂಜಾಬಿನ ಮೊಹಾಲಿಯ ಚಂಡೀಗಢ ವಿವಿಯಲ್ಲಿ ನಡೆದ ಅಖೀಲ ಭಾರತ ಮಟ್ಟದ ವಿಶ್ವವಿದ್ಯಾನಿಲಯಗಳ 65 ಕೆ.ಜಿ. ವಿಭಾಗದ ರಾಷ್ಟ್ರೀಯ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಶರತ್ ಶೇರುಗಾರ್ ಮಾ. 11ರಂದು ಚಿನ್ನದ ಪದಕ ಗೆದ್ದಿದ್ದರು.
ಮಿಸ್ ಇಂಡಿಯಾಗೆ ಭವ್ಯ ಸ್ವಾಗತ :
ಜು.19 ರಂದು ಮಿಸ್ ಇಂಡಿಯಾ ಆಗಿ ಆಯ್ಕೆಯಾಗಿದ್ದ ಉಡುಪಿಯ ಸಿನಿ ಶೆಟ್ಟಿ ಅವರನ್ನು ಉಡುಪಿಯಲ್ಲಿ ಭವ್ಯ ಮೆರವಣಿಗೆ ಮೂಲಕ ಸ್ವಾಗತ ನೀಡಲಾಗಿತ್ತು. ಬಂಟರ ಸಂಘದಿಂದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣ ದಲ್ಲಿ ಅದ್ದೂರಿ ಕಾರ್ಯಕ್ರಮ ಏರ್ಪಡಿಸಿ ಸಮ್ಮಾನಿಸಲಾಗಿತ್ತು.
ಕಣ್ಮರೆಯಾದ ಮಹಾಚೇತನ :
ಉದಯವಾಣಿಯ ಕಾರಣಪುರುಷ, ಮಹಾ ಚೇತನ, ನಾವೀನ್ಯದ ಹರಿಕಾರ ಟಿ.ಮೋಹನ ದಾಸ ಪೈ(89) ಅವರು ಜು.31ರಂದು ನಿಧನ ಹೊಂದಿದರು. ಅವರ ಪಾರ್ಥಿವ ಶರೀರವನ್ನು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಅನಂತರ ಬೀಡಿನಗುಡ್ಡೆಯ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಿತು.
ರಾಜಕೀಯ ಮುತ್ಸದ್ಧಿ ಎ.ಜಿ. ಕೊಡ್ಗಿ ನಿಧನ :
ಮಾಜಿ ಶಾಸಕ, ಮೂರನೆಯ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ, ಪ್ರಗತಿಪರ ಕೃಷಿಕ, ಭೂಮಸೂದೆ ಹೋರಾಟಗಾರ ಅಮಾಸೆಬೈಲ್ ಗೋಪಾಲಕೃಷ್ಣ ಕೊಡ್ಗಿ (93) ಅವರು ಅಸೌಖ್ಯ ದಿಂದ ಜೂ. 13ರಂದು ನಿಧನ ಹೊಂದಿದ್ದರು.
ಚಿಂತಕ ಜಿ. ರಾಜಶೇಖರ್ ನಿಧನ :
ವಯೋಸಹಜ ಅನಾರೋಗ್ಯದಿಂದ ಚಿಂತಕ, ವಿಮರ್ಶಕ ಹಾಗೂ ಜನಪರ ಹೋರಾಟಗಾರ ಜಿ. ರಾಜಶೇಖರ್ (75) ಜೂ. 21 ರಂದು ನಿಧನ ಹೊಂದಿದ್ದರು.
ರಕ್ಷಣ ಸಚಿವ ರಾಜನಾಥ್ ಸಿಂಗ್ ಭೇಟಿ :
ಮಾಹೆ ವಿ.ವಿ.ಯ 30ನೇ ಘಟಿಕೋತ್ಸವವು ನ.18 ರಿಂದ ಮೂರು ದಿನಗಳ ಕಾಲ ನಡೆ ದಿದ್ದು, ಮೊದಲ ದಿನ ಕೇಂದ್ರದ ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರು ಭಾಗವಹಿಸಿ ಘಟಿ ಕೋತ್ಸವ ಭಾಷಣ ಮಾಡಿದ್ದರು.
ಉಡುಪಿ ಜಿಲ್ಲೆಗೆ ರಜತೋತ್ಸವ ಸಂಭ್ರಮ :
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರ್ಪಟ್ಟು ಉಡುಪಿ ಹೊಸ ಜಿಲ್ಲೆಯಾಗಿ ಆ.25ಕ್ಕೆ 25 ವರ್ಷಗಳು ಪೂರ್ಣಗೊಂಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ರಜತೋತ್ಸವ ಕಾರ್ಯಕ್ರಮವನ್ನು ಅಜ್ಜರಕಾಡು ಜಿಲ್ಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ರಾಜ್ಯಪಾಲ ತಾವರ್‌ಚಂದ್ ಗೆಹೊÉàಟ್ ಆಗಮಿಸಿದ್ದರು.
ನೆರೆಪೀಡಿತ ಪ್ರದೇಶಗಳಿಗೆ ಸಿಎಂ ಭೇಟಿ :
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉಡುಪಿ ಜಿಲ್ಲೆಗೆ ಜು.13 ರಂದು ಭೇಟಿ ನೀಡಿದ್ದರು. ಭಾರೀ ಮಳೆಯಿಂದ ಪ್ರವಾಹ ಬಂದು ಬೆಳೆಹಾನಿ ಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ದ್ದರು. ಮರವಂತೆಯ ಕಡಲ ಕಿನಾರೆಯಲ್ಲಿ ಭಾರೀ ಕಡಲ್ಕೊರೆತ ಉಂಟಾಗಿತ್ತು.
ಗೋವಾ ಮುಖ್ಯಮಂತ್ರಿ ಭೇಟಿ:
ಗೋವಾ ಮುಖ್ಯಮಂತ್ರಿ ಡಾ| ಪ್ರಮೋದ್ ಸಾವಂತ್ ಅ. 8ರಂದು ಉಡುಪಿ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಉದಯವಾಣಿ ಕಚೇರಿಗೂ ಭೇಟಿ ನೀಡಿದ್ದರು.
ಉಚ್ಚಿಲ ದಸರಾ ಸಂಪನ್ನ :
ಇದೇ ಮೊದಲ ಬಾರಿಗೆ ಉಚ್ಚಿಲ ಶ್ರೀ ಮಹಾ ಲಕ್ಷ್ಮೀ ದೇವಸ್ಥಾನದಲ್ಲಿ ವೈಭವ ದಸರಾ 9 ದಿನ ಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತ್ತು.
ಡಿಎಆರ್ ಹೆಡ್‌ಕಾನ್‌ಸ್ಟೆಬಲ್ ಸಾವು :
ಆದಿ ಉಡುಪಿ ಶಾಲೆಯಲ್ಲಿ ಎಸೆಸೆಲ್ಸಿ ಉತ್ತರ ಪತ್ರಿಕೆಯ ಮೌಲ್ಯಮಾಪನ ಕೇಂದ್ರದ ಗಾರ್ಡ್ ಕರ್ತವ್ಯದಲ್ಲಿರುವಾಗ ಎ.30ರಂದು ರೈಫಲ್‌ನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ(ಡಿಎಆರ್)ಯ ಹೆಡ್‌ಕಾನ್‌ಸ್ಟೆಬಲ್ ರಾಜೇಶ್ ಕುಂದರ್(44) ಮೃತಪಟ್ಟಿದ್ದರು.
ಸೆಲ್ಫಿ ಗೀಳಿಗೆ 6 ಮಂದಿ ಸಾವು :
ಎ.5ರಿಂದ 18ರ ವರೆಗೆ ಮಲ್ಪೆಯ ಬೀಚ್ ಹಾಗೂ ಸೈಂಟ್ ಮೇರಿಸ್ ದ್ವೀಪದಲ್ಲಿ ನಡೆದ ಪ್ರತ್ಯೇಕ ಘಟನೆ ಗಳಲ್ಲಿ 6 ಮಂದಿ ಪ್ರವಾಸಿಗರು ಸಾವನ್ನ ಪ್ಪಿದ್ದರು. ಇದರ ತರುವಾಯ ಸೈಂಟ್ ಮೇರಿಸ್ ದ್ವೀಪದಲ್ಲಿ ಭದ್ರತೆ ಹೆಚ್ಚಿಸಿರುವ ಜತೆಗೆ ಪ್ರತ್ಯೇಕ ಸೆಲ್ಫಿ ಪಾಯಿಂಟ್ ರಚಿಸಲಾಗಿದೆ.
ಯುವಜೋಡಿ ಆತ್ಮಹತ್ಯೆ :
ಬೆಂಗಳೂರಿನ ಯುವ ಜೋಡಿ ಯೊಂದು ಮನೆಯವರ ವಿರೋಧದ ಕಾರಣದಿಂದ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 22ರಂದು ಬೆಳಗಿನ ಜಾವ 3ಗಂಟೆ ಸುಮಾರಿಗೆ ಹೆಗ್ಗುಂಜೆ ಗ್ರಾಮದ ಕೊತ್ತೂರು ಮಕ್ಕಿಮನೆಯಲ್ಲಿ ನಡೆದಿತ್ತು.
ಮರವಂತೆ ಬೀಚ್‌ಗೆ ಕಾರು ಪಲ್ಟಿ: ಇಬ್ಬರು ಸಾವು :
ಮರವಂತೆ ಬೀಚ್‌ಗೆ ಜು.3 ರ ರಾತ್ರಿ ಹೆದ್ದಾರಿಯಿಂದ ಕಾರು ಪಲ್ಟಿಯಾಗಿ ಉರುಳಿ ಬಿದ್ದು, ಚಾಲಕ ಸಹಿತ ಇಬ್ಬರು ಯುವಕರು ಸಾವನ್ನಪ್ಪಿ, ಇನ್ನಿಬ್ಬರು ಅದೃಷ್ಟವಶಾತ್ ಪಾರಾದ ಘಟನೆ ನಡೆದಿತ್ತು. ಕಾರು ಚಾಲಕ ವಿರಾಜ್ ಆಚಾರ್ಯ (28), ರೋಶನ್ ಆಚಾರ್ (25) ಸಾವನ್ನಪ್ಪಿದ್ದರು.
ವ್ಯಕ್ತಿಯನ್ನು ಕಾರಿನಲ್ಲಿ ಸುಟ್ಟು ಕೊಲೆ :
ಬೈಂದೂರಿನ ಒತ್ತಿನೆಣೆ ಸಮೀಪದ ಹೇನ್‌ಬೇರು ನಿರ್ಜನ ಪ್ರದೇಶದಲ್ಲಿ ಕಾರ್ಕಳ ಮೂಲದ ಅಮಾಯಕ ವ್ಯಕ್ತಿ ಯೊಬ್ಬರನ್ನು ಕಾರಿನೊಳಗೆ ಜೀವಂತ ಸುಟ್ಟು ಹಾಕಿದ ಘಟನೆ ಜು. 12ರಂದು ಬೆಳಕಿಗೆ ಬಂದಿತ್ತು. ಸದಾನಂದ ಶೇರಿಗಾರ್ (52) ಹಾಗೂ ಶಿಲ್ಪಾ (30)ಎಂಬವರು ಕಾರ್ಕಳದ ಆನಂದ ದೇವಾಡಿಗ (60)ರಿಗೆ ಮದ್ಯ ಕುಡಿಸಿ, ನಿದ್ದೆ ಮಾತ್ರೆ ಕೊಟ್ಟು ಪ್ರಜ್ಞೆ ತಪ್ಪಿಸಿ, ಕಾರ್ಕಳದಿಂದ ಕಾರಿನಲ್ಲಿ ಕರೆದುಕೊಂಡು ಬಂದು, ಜೀವಂತವಾಗಿ ಕಾರು ಸಹಿತ ಸುಟ್ಟಿದ್ದರು. ಇವರಿಗೆ ಪರಾರಿ ಯಾಗಲು ಸತೀಶ್ ದೇವಾಡಿಗ (50) ಹಾಗೂ ನಿತಿನ್ ದೇವಾಡಿಗ (40) ಸಹಕರಿಸಿದ್ದರು. ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರು ಸಹ ಈಗ ಜೈಲುಪಾಲಾಗಿದ್ದಾರೆೆ.