ವರ್ಷ ಮುಗಿಯುತ್ತಾ ಬರುತ್ತಿದೆ. ಎರಡು ವಾರ ಹೋದರೆ2021 ಒಂದು ನೆನಪಾಗಿಯಷ್ಟೇ ಉಳಿಯಲಿದೆ.ಕನ್ನಡ ಚಿತ್ರರಂಗದ ವಿಷಯದಲ್ಲಿ2021 ತುಂಬಾ ದುಃಖ ಕೊಟ್ಟ ವಿಚಾರ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಪುನೀತ್ ರಾಜ್‌ಕುಮಾರ್, ಸಂಚಾರಿ ವಿಜಯ್ ಸೇರಿದಂತೆಕನ್ನಡದ ಅನೇಕ ನಟರನ್ನು ಈ ವರ್ಷ ಕಳೆದುಕೊಂಡಿದ್ದೇವೆ.
ಹಾಗಾಗಿ,ಕನ್ನಡ ಚಿತ್ರರಂಗಕ್ಕೆ ಆಘಾತ ನೀಡಿದ ವರ್ಷ 2021. ಆ ನೋವಿನಲ್ಲೇ ಚಿತ್ರರಂಗ ಇದೆ. ಇನ್ನು, ಸಿನಿಮಾ ಬಿಡುಗಡೆಯ ವಿಚಾರಕ್ಕೆ ಬರುವುದಾದರೆ, ಈ ವರ್ಷ ಕನ್ನಡ ಚಿತ್ರರಂಗದಲ್ಲಿ 100ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿವೆ. ಈ ವಾರ ತೆರೆಕಾಣುತ್ತಿರುವ “ಆನ’ ಹಾಗೂ ಮುಂದಿನ ಎರಡು ವಾರಗಳಲ್ಲಿ ತೆರೆಕಾಣುತ್ತಿರುವ ಸಿನಿಮಾಗಳನ್ನು ಗಮನದಲ್ಲಿಟ್ಟು ಹೇಳುವುದಾ ದರೆ2021ರಲ್ಲಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆ100 ದಾಟುತ್ತದೆ.
ಇದರಲ್ಲಿ ಓಟಿಟಿಯಲ್ಲಿ ಬಿಡುಗಡೆಯಾದ ಚಿತ್ರಗಳು ಕೂಡಾ ಸೇರಿವೆ. ಇನ್ನು, ಬಿಡುಗಡೆಯಾಗಿರುವ ಮೂರು ತುಳು ಚಿತ್ರಗಳುಕೂಡಾ ಇದರಲ್ಲಿ ಸೇರುತ್ತವೆ. ಳೆದ ವರ್ಷದಿಂದಕನ್ನಡ ಚಿತ್ರರಂಗಕೂಡಾ ಕೊರೊನಾ ಸಂಕಷ್ಟಕ್ಕೆ ಒಳಗಾಗಿರುವುದರಿಂದ ಸಿನಿಮಾ ಬಿಡುಗಡೆಯ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಆದರೆ,ಕಳೆದ ವರ್ಷಕ್ಕೆ ಅಂದರೆ2020ಕ್ಕೆ ಹೋಲಿಸಿದರೆ ಈ ವರ್ಷ ಬಿಡುಗಡೆಯಲ್ಲಿ ಏರಿಕೆಯಾ ಗಿದೆ.
ಇದನ್ನೂ ಓದಿ: ಟಿವಿಎಸ್‌ಮೋಟರ್- ಬಿಎಂಡಬ್ಲ್ಯೂ ಮೊಟೊರಾಡ್ ಒಪ್ಪಂದ ವಿಸ್ತರಣೆ
2020ರಲ್ಲಿಕೊರೊನಾ ಆರ್ಭಟ ಜೋರಾಗಿ, ಲಾಕ್‌ಡೌನ್ ಪರಿಣಾಮದಿಂದ80 ಪ್ಲಸ್ ಚಿತ್ರಗಳಷ್ಟೇ ಬಿಡುಗಡೆಯಾಗಿದ್ದವು. ಆದರೆ, ಈ ವರ್ಷ 20ಪ್ಲಸ್ ಚಿತ್ರಗಳು ಹೆಚ್ಚು ಬಿಡುಗಡೆಯಾಗಿ, ನೂರರ ಗಡಿದಾಟಿದಂತಾಗಿದೆ.ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಿನಿಮಾ ಬಿಡುಗಡೆಯಾದ ವರ್ಷವೆಂದರೆ ಅದು2018. ಆ ವರ್ಷ ಬರೋಬ್ಬರಿ 235ಕ್ಕೂ ಹೆಚ್ಚು ಚಿತ್ರ ಗಳು ಬಿಡುಗಡೆಯಾಗಿದ್ದವು. ಆ ನಂತರ2019ರಲ್ಲಿ220 ಪ್ಲಸ್ ಚಿತ್ರಗಳು ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದವು.
ಬಿಡುಗಡೆಯಲ್ಲಿ ಇಳಿಕೆ- ಹೆಚ್ಚಿದ ಗಳಿಕೆ: ಮೊದಲೇ ಹೇಳಿದಂತೆ ಸಿನಿಮಾ ಬಿಡುಗಡೆಯಲ್ಲಿ ಈ ವರ್ಷ ಇಳಿಕೆಯಾದರೂ ಗಳಿಕೆಯಲ್ಲಿ ಮಾತ್ರಕನ್ನಡ ಚಿತ್ರರಂಗ ದೊಡ್ಡ ಮಟ್ಟದಲ್ಲಿಸದ್ದು ಮಾಡಿದೆ. ಅದರಲ್ಲೂ ಸ್ಟಾರ್ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡಿ, ಕನ್ನಡ ಚಿತ್ರರಂಗ ಪರಭಾಷೆಗಿಂತಕಡಿಮೆ ಇಲ್ಲ ಎಂಬುದನ್ನು ತೋರಿಸಿಕೊಟ್ಟಿವೆ. “ಪೊಗರು’, “ರಾಬರ್ಟ್’, “ಯುವರತ್ನ’, “ಸಲಗ’, “ಕೋಟಿಗೊ ಬ್ಬ-3′, “ಭಜರಂಗಿ-2′, “ಮದಗಜ’, “ಸಖತ್’ ಚಿತ್ರಗಳುಕಲೆಕ್ಷನ್ ವಿಷಯದಲ್ಲಿ ಚಿತ್ರರಂಗಕ್ಕೆ ಹುಮ್ಮಸ್ಸು ನೀಡಿವೆ.
ಇನ್ನು, ರಮೇಶ್ ಅರವಿಂದ್ ನಟನೆಯ “100′, “ಹೀರೋ’, “ಗರುಡ ಗಮನ ವೃಷಭ ವಾಹನ’ ಸೇರಿದಂತೆ ಅನೇಕ ಸಿನಿಮಾಗಳು ನಿರ್ಮಾಪಕರ ಜೇಬು ತುಂಬಿಸಿ, ಗೆಲುವಿನ ನಗೆ ಬೀರಿವೆ. ಸ್ಟಾರ್ ದರ್ಶನ ಈ ವರ್ಷದ ಮತ್ತೂಂದು ವಿಶೇಷವೆಂದರೆ ಬಹುತೇಕ ಎಲ್ಲಾ ಸ್ಟಾರ್‌ಗಳ ಸಿನಿಮಾಗಳು ಈ ವರ್ಷ ತೆರೆಕಂಡಿವೆ. ಈ ಮೂಲಕ ಸ್ಟಾರ್ ದರ್ಶನವಾಗಿದೆ. ಶಿವರಾಜ್‌ಕು ಮಾರ್, ಪುನೀತ್ ರಾಜ್‌ಕುಮಾರ್, ದರ್ಶನ್, ಸುದೀಪ್, ವಿಜಯ್, ಗಣೇಶ್, ಮುರಳಿ, ಧ್ರುವ … ಹೀಗೆ ಬಹುತೇಕ ಎಲ್ಲಾ ಸ್ಟಾರ್ ನಟರ ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ಜೊತೆಗೆ ಅಜೇಯ್, ಪ್ರಜ್ವಲ್, ಯೋಗಿ ಚಿತ್ರಗಳು ಈ ವರ್ಷ ದರ್ಶನ ನೀಡಿವೆ.