Advertisement

2021: ಅತೀ ಉಷ್ಣದ ವರ್ಷ

11:20 PM Jan 20, 2022 | Team Udayavani |

ಮೆಲ್ಬರ್ನ್: ಭೂಮಿಯ ತಾಪಮಾನವನ್ನು ದಾಖಲಿಸುವ  ತಂತ್ರಜ್ಞಾನ ಜಾರಿಗೊಂಡಾಗಿ ನಿಂದ ಇಲ್ಲಿಯವರೆಗಿನ ಅಂಕಿ-ಅಂಶಗಳ ಪ್ರಕಾರ, 2021ರಲ್ಲಿ ಭೂಮಿಯ ತಾಪಮಾನ ತೀವ್ರವಾಗಿ ಹೆಚ್ಚಾಗಿತ್ತೆಂದು ವರ್ಲ್ಡ್ ಮೆಟೆರೋಲಾಜಿಕಲ್‌ ಆರ್ಗನೈಸೇಶನ್‌ (ಡಬ್ಲ್ಯುಎಂಒ) ಹೇಳಿದೆ.

Advertisement

2021ರಲ್ಲಿ ಭೂ ತಾಪಮಾನ, ಕೈಗಾರಿಕಾ ಪೂರ್ವ ವಿಶ್ವದಲ್ಲಿದ್ದ ತಾಪಮಾನಕ್ಕಿಂತ 1.11 ಡಿಗ್ರಿ ಸೆಲ್ಸಿಯಸ್‌ ಹೆಚ್ಚು ಉಷ್ಣಾಂಶವನ್ನು ದಾಖಲಿಸಿತ್ತೆಂದು ಡಬ್ಲ್ಯುಎಂಒ ಹೇಳಿದೆ.

ಭೂಮಿಯ ಉಷ್ಣಾಂಶ ದಾಖಲಿಸುವ ವ್ಯವಸ್ಥೆ ಬಂದಾಗಿನಿಂದ ಇಲ್ಲಿಯವರೆಗೆ ಒಟ್ಟು ಎಂಟು ಬಾರಿ ಭೂಮಿಯಲ್ಲಿ ಹೆಚ್ಚು ಉಷ್ಣಾಂಶ ದಾಖಲಾಗಿದೆ. 2021ರಲ್ಲಿ ಮತ್ತಷ್ಟು ಹೆಚ್ಚಿನ ಉಷ್ಣಾಂಶ ದಾಖಲಾಗಿತ್ತೆಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಅಸಲಿಗೆ, 2021ರ ಆರಂಭದಲ್ಲಿ ಹಾಗೂ ಅಂತ್ಯವು, ಲಾ ನಿನಾ (ಆಗಾಗ ಸಂಭವಿಸುವ ತಂಪು ಹವಾಮಾನ ವೈಪರೀತ್ಯ) ಮಾರುತಗಳ ಸುಳಿಗೆ ಸಿಲುಕಿತ್ತು. ಆದರೆ ಇದರ ಪ್ರಭಾವ ಆಸ್ಟ್ರೇಲಿಯಾ ಹಾಗೂ ಕೆಲವು ದೇಶಗಳಿಗೆ ಮಾತ್ರ ಸೀಮಿತವಾಗಿತ್ತು. ಉಳಿದ ರಾಷ್ಟ್ರಗಳಲ್ಲಿ ತಾಪಮಾನ ಏರಿಕೆಯಾಗಿತ್ತೆಂದು ತಜ್ಞರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next