ನವ ದೆಹಲಿ: 2021 ಜೀಪ್ ಕಂಪಾಸ್ ಭಾರತದಲ್ಲಿ ಜನವರಿ 27 ರಿಂದ ಮಾರಾಟಕ್ಕೆ ಬರುತ್ತದೆ, ಮತ್ತು ಇದು ಜನಪ್ರಿಯ ಎಸ್ ಯು ವಿ ಗೆ ಮೊದಲ ಮಿಡ್-ಲೈಫ್ ಫೇಸ್ ಲಿಫ್ಟ್ ಆಗಿದೆ. ಜೀಪ್ ಕಂಪಾಸ್ ಪರಿಷ್ಕೃತ ವಿನ್ಯಾಸ, ಅತ್ಯಾಕರ್ಷಕ ಕ್ಯಾಬಿನ್ ಒಳಗೊಂಡಿದೆ.
ಓದಿ : ಟ್ರ್ಯಾಕ್ಟರ್ ರ‍್ಯಾಲಿ ಹಿಂಸಾಚಾರ: 86 ಪೊಲೀಸರಿಗೆ ಗಾಯ, ಹಲವು ವಾಹನ ಧ್ವಂಸ, 15 FIR ದಾಖಲು
ಈಗ, ಜೀಪ್ ಇನ್ನೂ ಭಾರತದಲ್ಲಿ ಪ್ರಿ-ಫೇಸ್ ಲಿಫ್ಟ್ ಕಂಪಾಸ್ ನ್ನು ಮಾರಾಟ ಮಾಡುತ್ತಿದೆ. ಸ್ಪೋರ್ಟ್ ಪ್ಲಸ್, ಲಾಂಗಿಟ್ಯೂಡ್, ಲಾಂಗಿಟ್ಯೂಡ್ ಪ್ಲಸ್, ನೈಟ್ ಈಗಲ್, ಮತ್ತು ಲಿಮಿಟೆಡ್ ಪ್ಲಸ್ ಗಳು ರಾಷ್ಟ್ರ ರಾಜಧಾನಿ ದೆಹಲಿಯ ಮಾರುಟ್ಟೆಯ ಪ್ರಕಾರ 16.49 ಲಕ್ಷದಿಂದ 24.99 ಲಕ್ಷ ರೂಗಳಿಗೆ ಮಾರಾಟವಾಗುತ್ತಿವೆ.
ಅದಾಗ್ಯೂ, ಹಳೆಯ ಜೀಪ್ ಕಂಪಾಸ್ ನ್ನು ಹೊಸದರೊಂದಿಗೆ ಮಾರಾಟ ಮಾಡಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ.
ಓದಿ : ಮಸಾಜ್ ಪಾರ್ಲರ್‌ಗಳಲ್ಲಿ ಅನೈತಿಕ ಚಟುವಟಿಕೆಗಳು
2021 ರ ಜೀಪ್ ಕಂಪಾಸ್ ನಲ್ಲಿ, ಜೀಪ್ ಇಂಡಿಯಾ ಎಸ್ ಯು ವಿಯನ್ನು 5 ಮಾಡೆಲ್ ಗಳಲ್ಲಿ ನೀಡಲಿದೆ. ಸ್ಪೋರ್ಟ್ಸ್, ಲಾಂಗಿಟ್ಯೂಡ್, ಲಿಮಿಟೆಡ್, ಲಿಮಿಟೆಡ್(ಒ) ಹಾಗೂ ಹೊಸದಾಗಿ ಸೇರ್ಪಡೆಯಾದ ಎಸ್ ಟ್ರಿಮ್ ಪರಿಷ್ಕೃತ ಮಾಡೆಲ್ ಗಳ ಜೊತೆಗೆ, ಎಸ್ ಯು ವಿ ನ್ಯೂ, ಪ್ರೀಮಿಯಂ ವೈಶಿಷ್ಟ್ಯಗಳನ್ನು ಸಹ ಹೊಂದಿರಲಿವೆ. 3 ಸ್ಪೋಕ್ ಸ್ಟೀಯರಿಂಗ್ ವೀಲ್, ವೆಂಟಿಲೇಟೆಡ್ ಫ್ರಂಟ್ ಸೀಟ್ , ವೈರ್ ಲೆಸ್ ಸ್ಮಾರ್ಟ್ ಫೋನ್ ಚಾರ್ಜಿಂಗ್, 360 ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ನೊಂದಿಗೆ ಅತ್ಯಾಧುನಿಕ ಸೌಲಭ್ಯಗಳು ಒಳಗೊಂಡಿರಲಿವೆ.
ಇನ್ನು,1.4-ಲೀಟರ್ ಮಲ್ಟಿ ಏರ್ ಪೆಟ್ರೋಲ್ ಎಂಜಿನ್ ಮತ್ತು 2.0-ಲೀಟರ್ ಮಲ್ಟಿ-ಜೆಟ್ ಡೀಸೆಲ್ ಯುನಿಟ್. 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್, ಸ್ಪೀಡ್ ಟಾರ್ಕ್ ಕನ್ವರ್ಟರ್ ಮತ್ತು 7 ಸ್ಪೀಡ್ ಆಟೋಮೆಟಿಕ್ ಡಿಸಿಟಿಗಳನ್ನು ಹೊಂದಿರಲಿವೆ.
ಅತ್ಯಾಧುನಿಕ ಪ್ರೀಮಿಯಂ ಸೌಲಭ್ಯದೊಂದಿಗೆ ಹೊರಬರುತ್ತಿರುವ 2021ರ ಜೀಪ್ ಕಂಪಾಸ್ ದುಬಾರಿಯಾಗಿರುತ್ತದೆ ಎನ್ನುವುದರಲ್ಲಿ ಅನುಮಾನ ಪಡಬೇಕಾಗಿಲ್ಲ. ಕಂಪೆನಿ ಹೇಳುವ ಎಲ್ಲಾ ಸೌಲಭ್ಯಗಳನ್ನು ಗಮನಿಸಿದರೇ, ಮಾರುಕಟ್ಟೆಯ ಅಂದಾಜಿನ ಪ್ರಕಾರ ಸುಮಾರು 17 ಲಕ್ಷದಿಂದ 26 ಲಕ್ಷದ ತನಕ ಇದರ ಬೆಲೆ ಇರಬಹುದು ಎಂದು ಹೇಳಬಹುದಾಗಿದೆ.
ಇದು ಟಾಟಾ ಹ್ಯಾರಿಯರ್, ಎಂ ಜಿ ಹೆಕ್ಟರ್, ಹ್ಯುಂಡೈ ಟಕ್ಸನ್ ಗಳಿಗೆ ಪೈಪೋಟಿ ಕೊಡಲಿದೆ ಎಂದು ಹೇಳಲಾಗುತ್ತಿದೆ.
ಓದಿ : ಕೃಷಿ ಕಾಯಿದೆ; ಕೃಷಿಕನ ಅಭಿಪ್ರಾಯ ಕ್ಕೆ ಕಿವಿಯಾಗೋಣ ಬನ್ನಿ