Advertisement
ಮಂಡ್ಯ 66, ಮದ್ದೂರು 19, ಮಳವಳ್ಳಿ 5, ಪಾಂಡವಪುರ 30, ಶ್ರೀರಂಗಪಟ್ಟಣ 15, ಕೆ.ಆರ್.ಪೇಟೆ 40, ನಾಗಮಂಗಲ 26 ಮಂದಿ ಸೇರಿದಂತೆ 202 ಮಂದಿಗೆ ಸೋಂಕು ಆವರಿಸಿದೆ. ಇದರಿಂದ ಜಿಲ್ಲೆಯಲ್ಲಿ 15,499 ಸೋಂಕಿತ ಪ್ರಕರಣಗಳು ದಾಖಲಾಗಿವೆ. ಹೊರ ಜಿಲ್ಲೆಯ ಒಬ್ಬರು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
Related Articles
Advertisement
ಮಂಡ್ಯ 32, ಮದ್ದೂರು 13, ಮಳವಳ್ಳಿ 13, ಪಾಂಡವಪುರ 16, ಶ್ರೀರಂಗಪಟ್ಟಣ 8, ಕೆ.ಆರ್.ಪೇಟೆ 10 ಹಾಗೂ ನಾಗಮಂಗಲ 10 ಮಂದಿ ಸೇರಿದಂತೆ 104 ಜನರು ಕೋವಿಡ್ ನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೂ 13,576 ಮಂದಿ ಚೇತರಿಸಿಕೊಂಡಿದ್ದಾರೆ.
1786 ಸಕ್ರಿಯ ಪ್ರಕರಣ:
ಜಿಲ್ಲೆಯಲ್ಲಿ 1,786 ಸಕ್ರಿಯ ಪ್ರಕರಣಗಳಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ 384, ಖಾಸಗಿ ಆಸ್ಪತ್ರೆಗಳಲ್ಲಿ 116, ಕೋವಿಡ್ ಕೇರ್ ಸೆಂಟರ್‌ನಲ್ಲಿ 330 ಹಾಗೂ ಮನೆಗಳಲ್ಲಿ 956 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಟಿ.ಎನ್.ಧನಂಜಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.