Advertisement

2019ರ ವಿಶ್ವಕಪ್‌ ಕ್ರಿಕೆಟ್‌: ಜೂ. 16: ಭಾರತ-ಪಾಕ್‌ ಪಂದ್ಯ

06:00 AM Apr 25, 2018 | Team Udayavani |

ಕೋಲ್ಕತಾ: ಭಾರತವು 2019ರ ವಿಶ್ವಕಪ್‌ನಲ್ಲಿ ಜೂ. 5ರಂದು ದಕ್ಷಿಣ ಆಫ್ರಿಕಾವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನವನ್ನು ಜೂ. 16ರಂದು ಎದುರಿಸಲಿದೆ ಎಂದು ಬಿಸಿಸಿಐಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

Advertisement

2019ರ ವಿಶ್ವಕಪ್‌ ಇಂಗ್ಲೆಂಡಿನಲ್ಲಿ ಮೇ 30ರಿಂದ ಜುಲೈ 14ರ ವರೆಗೆ ನಡೆಯಲಿದ್ದು ಭಾರತವು ಜೂ. 5ರಂದು ಮೊದಲ ಪಂದ್ಯ ಆಡಲಿದೆ. ಲೋಧಾ ಸಮಿತಿಯ ಶಿಫಾರಸ್ಸಿನಂತೆ ಐಪಿಎಲ್‌ ಫೈನಲ್‌ ಮತ್ತು ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡುವ ನಡುವೆ 15 ದಿನಗಳ ಅಂತರ ಇರುವುದನ್ನು ಭಾರತೀಯ ಕ್ರಿಕೆಟ್‌ ಮಂಡಳಿ ನೋಡಿಕೊಳ್ಳಬೇಕಾಗಿದೆ. ಈ ವಿಷಯ ಮಂಗಳವಾರ ನಡೆದ ಐಸಿಸಿ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಚರ್ಚಿಸಲಾಯಿತು.

2019ರ ಐಪಿಎಲ್‌ ಕೂಟ ಮಾರ್ಚ್‌ 29ರಿಂದ ಮೇ 19ರ ವರೆಗೆ ನಡೆಯಲಿದೆ. ಆದರೆ ನಾವು 15 ದಿನಗಳ ಅಂತರವನ್ನು ಇರಿಸಿಕೊಳ್ಳುವ ಅಗತ್ಯವಿದೆ. ಹಾಗಾಗಿ ನಾವು ಜೂ. 5ರಂದು ಮೊದಲ ಪಂದ್ಯ ಆಡಬೇಕಾಗಿದೆ. ಈ ಹಿಂದೆ ಜೂನ್‌ 2ರಂದು ಮೊದಲ ಪಂದ್ಯವೆಂದು ನಿಗದಿಗೊಳಿಸಲಾಗಿತ್ತು. ಆದರೆ ನಮಗೆ ಆ ದಿನ ಪಂದ್ಯ ಆಡಲು ಸಾಧ್ಯವಾಗುತ್ತಿಲ್ಲ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಹೆಸರು ಹೇಳಲು ಇಚ್ಛಿಸದ ಬಿಸಿಸಿಐ ಅಧಿಕಾರಿ ಹೇಳಿದರು.

ದಕ್ಷಿಣ ಆಫ್ರಿಕಾ ನಮ್ಮ ಮೊದಲ ಎದುರಾಳಿ. ಕಾರ್ಯಕಾರಿ ಸಮಿತಿ ನಮ್ಮ ಮಾತಿಗೆ ಒಪ್ಪಿಗೆ ಸೂಚಿಸಿದ್ದು ಐಸಿಸಿ ಮಂಡಳಿಗೆ ತಿಳಿಸಲಾಗುವುದು ಎಂದವರು ಹೇಳಿದರು. ಭಾರತ ಮತ್ತು ಪಾಕಿಸ್ಥಾನ ನಡುವಣ ಪಂದ್ಯ ಜೂ. 16ರಂದು ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next