Advertisement

ಮತ ತರುವ ಯೋಜನೆಯ ಗಾಳ?

12:30 AM Feb 01, 2019 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಪ್ರಸ್ತುತ ಎನ್‌ಡಿಎ ಸರಕಾರದ ಕೊನೆಯ ಮತ್ತು ಮಧ್ಯಾಂತರ ಬಜೆಟ್‌ ಅನ್ನು ಹಂಗಾಮಿ ವಿತ್ತ ಸಚಿವ ಪಿಯೂಷ್‌ ಗೋಯಲ್‌ ಶುಕ್ರವಾರ ಮಂಡಿಸ ಲಿದ್ದಾರೆ. ಕೆಲವು ದಿನಗಳಿಂದ ರೈತರಿಗಾಗಿ, ಮಧ್ಯಮ ವರ್ಗದವರಿಗಾಗಿ, ಬಡವರಿಗೆ ಭಾರೀ ಘೋಷಣೆ ಮಾಡಬಹುದು ಎಂಬ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಜೆಟ್‌ ಪ್ರಾಮುಖ್ಯ ಪಡೆದಿದೆ. ಅಷ್ಟೇ ಅಲ್ಲ, ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆ ಕೂಡ ಎದುರಾಗಲಿದ್ದು ಬಜೆಟ್‌ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

Advertisement

ಷೇರುಪೇಟೆ ಜಿಗಿತ
ಹಂಗಾಮಿ ವಿತ್ತ ಸಚಿವರು ಶುಕ್ರವಾರ ಮಧ್ಯಾಂತರ ಬಜೆಟ್‌ ಮಂಡಿಸಲಿರುವಂತೆಯೇ ಗುರುವಾರ ಬಾಂಬೆ ಷೇರುಪೇಟೆ ಸೂಚ್ಯಂಕ 665 ಅಂಕಗಳಷ್ಟು ಏರಿಕೆಯಾಗಿದೆ. ಬಿಎಸ್‌ಇ ಸೆನ್ಸೆಕ್ಸ್‌ ವಹಿವಾಟು ಮುಕ್ತಾಯದ ವೇಳೆ 36,256.69ರಲ್ಲಿ ಕೊನೆಗೊಂಡಿತು. ನಿಫ್ಟಿ ಸೂಚ್ಯಂಕ 179.15ರಷ್ಟು ಏರಿಕೆಯಾಗಿ 10,830.95ರಲ್ಲಿ ಅಂತ್ಯವಾಗಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್‌ ತಮ್ಮ ಭಾಷಣದಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರಕ್ಕೆ ಆದ್ಯತೆ, ಮಧ್ಯಮ ಮತ್ತು ಬಡವರ್ಗದವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ  ಮಧ್ಯಾಂತರ ಬಜೆಟ್‌ನಲ್ಲಿ ಆ ರೀತಿಯ ಕಾರ್ಯಕ್ರಮಗಳು ಘೋಷಣೆಯಾಗಬಹುದು ಎಂಬ ನಿರೀಕ್ಷೆಯಿಂದ ಸೂಚ್ಯಂಕ ಏರಿಕೆಯಾಗಿದೆ. ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ ಸದೃಢವಾಗಿರುವುದು ಕೂಡ ಸೆನ್ಸೆಕ್ಸ್‌ ಏರಿಕೆಗೆ ಕಾರಣ ಎನ್ನಲಾಗಿದೆ.

1 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ
ಜ.31ರ ವರೆಗೆ ಜಿಎಸ್‌ಟಿ ಸಂಗ್ರಹ ದಾಖಲೆಯ 1 ಲಕ್ಷ ಕೋಟಿ ರೂ. ಆಗಿದೆ. ಎರಡು ತಿಂಗಳ ಅವಧಿಯ ಬಳಿಕ ಗುರುವಾರ ಈ ಗುರಿ ಸಾಧಿಸಲಾಗಿದೆ ಎಂದು ಕೇಂದ್ರ ವಿತ್ತ ಸಚಿವಾಲಯ ತಿಳಿಸಿದೆ. 2018ರ ಡಿಸೆಂಬರ್‌ನಲ್ಲಿ 94,725 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು.

ಆದಾಯ ತೆರಿಗೆ ಬದಲಾವಣೆ
ಆದಾಯ ತೆರಿಗೆ ಮಿತಿ 5 ಲಕ್ಷ ರೂ.ಗಳಿಗೆ ಪರಿಷ್ಕರಣೆ ನಿರೀಕ್ಷೆ.
60 ವರ್ಷಕ್ಕಿಂತ ಮೇಲ್ಪಟ್ಟವರಿಗೆ 3 ಲಕ್ಷ ರೂ.ಗಳಿಂದ 3.5 ಲಕ್ಷ.ರೂಗಳಿಗೆ ಏರಿಕೆ.
80ಸಿ ವ್ಯಾಪ್ತಿಯಲ್ಲಿನ ಮಿತಿಯನ್ನು 1.5 ಲಕ್ಷ ರೂ.ಗಳಿಂದ 2.5 ಲಕ್ಷ ರೂ.ಗಳಿಗೆ ಏರಿಕೆ ಸಾಧ್ಯತೆ.
ಮಹಿಳಾ ತೆರಿಗೆ ಪಾವತಿದಾರರಿಗೆ 3.25 ಲಕ್ಷ ರೂ.ವರೆಗೆ ತೆರಿಗೆ ರಿಯಾಯಿತಿ ಸಾಧ್ಯತೆ.
40 ಸಾವಿರ ರೂ. ವರೆಗೆ ವೈದ್ಯಕೀಯ ವೆಚ್ಚ ಮತ್ತು ಪ್ರಯಾಣ ಭತ್ಯೆಯನ್ನು ಹಿಂಪಡೆಯುವ (ರಿ ಎಂಬರ್ಸ್‌ ಮೆಂಟ್‌) ಸೌಲಭ್ಯ ಮತ್ತೆ ಜಾರಿ.

ರೈತರಿಗೆ
ಪ್ರತಿ ರೈತರ ಖಾತೆಗಳಿಗೆ 4,000 ರೂ.ನಿರೀಕ್ಷೆ
1 ಲಕ್ಷ ರೂ.ವರೆಗೆ ಕೃಷಿ ಪರಿಹಾರ ಪ್ಯಾಕೇಜ್‌
1.8 ಲಕ್ಷ ಕೋಟಿ ರೂ. ಆಹಾರ ಸಬ್ಸಿಡಿ
ಆಹಾರ ಧಾನ್ಯಗಳ ಮೇಲಿನ ವಿಮೆಯ ಮೇಲಿನ ಪ್ರೀಮಿಯಂ ರದ್ದು
ಸರಿಯಾದ ಸಮಯದಲ್ಲಿ ಅಸಲು, ಬಡ್ಡಿ ಪಾವತಿಸಿದ ರೈತರಿಗೆ ಬಡ್ಡಿ ರಹಿತ ಬೆಳೆ ಸಾಲ

Advertisement

ಗೃಹ ನಿರ್ಮಾಣ 
ಗೃಹ ಸಾಲ ಮೇಲಿನ ಡಿಡಕ್ಷನ್‌ ಮಿತಿಯನ್ನು ಹಾಲಿ 2ಲಕ್ಷ ರೂ.ಗಳಿಂದ 3 ಲಕ್ಷ ರೂ.ಗೆ ಏರಿಸುವ ಸಾಧ್ಯತೆ
ಬಾಡಿಗೆ ನೀಡುವ ಆಸ್ತಿಗಳ ಮೇಲೆ ವಿಧಿಸಲಾಗುವ ಸ್ಟಾ éಂಡರ್ಡ್‌ ಡಿಡಕ್ಷನ್‌ ಮಿತಿಯನ್ನು ಶೇ. 30ರಿಂದ ಶೇ. 40ಕ್ಕೆ ಏರಿಸುವ ಸಾಧ್ಯತೆ

ಹಿರಿಯ ನಾಗರಿಕರಿಗೆ
ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಪರಿಷ್ಕರಣೆ ಮಾಡುವ ಸಂಭವ ಉದ್ಯೋಗ ಸೃಷ್ಟಿ
ಉದ್ಯೋಗ ಸೃಷ್ಟಿಗೆ 60 ಸಾವಿರ ಕೋಟಿ ರೂ. ನಿಗದಿ ಸಾಧ್ಯತೆ ನವೋದ್ಯಮ (ಸ್ಟಾರ್ಟಪ್‌)
ಈ ಕ್ಷೇತ್ರದಲ್ಲಿನ ಉದ್ದಿಮೆದಾರರು ಹೂಡಿದ ಬಂಡವಾಳದ ಲಾಭದ ಮೇಲೆ ವಿಧಿಸಲಾಗುತ್ತಿರುವ ತೆರಿಗೆ (ಏಂಜಲ್‌ ಟ್ಯಾಕ್ಸ್‌) ರದ್ದು

ಡಿಜಿಟಲ್‌ ಪಾವತಿ ಕ್ಷೇತ್ರ
ನಗದು ವ್ಯವಹಾರದ ಬದಲು ಇಲೆಕ್ಟ್ರಾನಿಕ್‌ ಮತ್ತು ಡಿಜಿಟಲ್‌ ಮಾಧ್ಯಮ ಮೂಲಕ ಪಾವತಿ ಮಾಡುವುದಕ್ಕೆ ಪ್ರೋತ್ಸಾಹ ನೀಡಲು ಪ್ರೋತ್ಸಾಹಕ ಧನ.

ಆರೋಗ್ಯ ಕ್ಷೇತ್ರ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕ್ಷೇತ್ರಕ್ಕೆ ಶೇ.5 ಹೆಚ್ಚಿನ ಮೊತ್ತ ನಿಗದಿ 
ಆಯುಷ್ಮಾನ್‌ ಭಾರತಕ್ಕೆ ಹೆಚ್ಚಿನ ಅನುದಾನ ನೀಡುವ ಸಂಭವ

Advertisement

Udayavani is now on Telegram. Click here to join our channel and stay updated with the latest news.

Next