Advertisement

2019ರಲ್ಲಿ ಗ್ರಾಹಕರ ಮನಸೂರೆಗೊಂಡ ಟಾಪ್ ಟೆನ್ ಮೊಬೈಲ್ ಇವು….

04:20 PM Dec 28, 2019 | Mithun PG |

ಸ್ಮಾರ್ಟ್ ಫೋನ್ ಎಂದರೇ ಇಂದಿನ ದಿನಗಳಲ್ಲಿ ಮಿನಿ ಕಂಪ್ಯೂಟರ್ ಎಂದರ್ಥ. ಪ್ರತಿವರ್ಷ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಬದಲಾವಣೆಗಳಾಗುತ್ತಿವೆ. ಈ ಬದಲಾವಣೆಗಳು ಹೊಸ ಶಕೆಗೆ ಅಥವಾ ಹೊಸ ಮನ್ವಂತರಕ್ಕೆ ನಾಂದಿಯಾಗುತ್ತಿರುವುದನ್ನು ಗಮನಿಸಿದಾಗ ತಂತ್ರಜ್ಞಾನ ಎಂಬುದು ಮಾನವನ ಜೀವನದ ಒಂದು ಭಾಗವಾಗಿಬಿಟ್ಟಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. 2019 ಕೊನೆಗೊಂಡು 2020ರ ಹೊಸ ವರುಷಕ್ಕೆ ಕಾಲಿಡುವ ಸುಸಂದರ್ಭ ಇದು. ಈ ಸಮಯದಲ್ಲಿ ಸ್ಮಾರ್ಟ್ ಫೋನ್ ಲೋಕದಲ್ಲಿ 2019ನೇ ವರ್ಷದಲ್ಲಿ ಗ್ರಾಹಕರ ಮನಸೂರೆಗೊಂಡ ಟಾಪ್ 10 ಮೊಬೈಲ್ ಗಳ ಕುರಿತ ಮಾಹಿತಿ ಇಲ್ಲಿದೆ.

  • ಐಫೋನ್ 11 ಪ್ರೊ ಮ್ಯಾಕ್ಸ್: ಆ್ಯಪಲ್ ನ ಈ ಫೋನ್ 5 ಇಂಚಿನ ಓಲೆಡ್  ಡಿಸ್​​ಪ್ಲೇ ಹೊಂದಿದ್ದು, ಆ್ಯಪಲ್ ಎ13 ಬಯಾನಿಕ್ ಹೆಕ್ಸಾ ಕೋರ್ ಪ್ರೊಸೆಸರ್​​ನಿಂದ ಕಾರ್ಯನಿರ್ವಹಿಸುತ್ತದೆ. ಈ ಫೋನ್ ನಲ್ಲಿ 4GB RAM ಮತ್ತು 64GB ಸ್ಟೋರೇಜ್ ನೀಡಲಾಗಿದೆ.. ಸೆಲ್ಫಿಗಾಗಿ 12 ಮೆಗಾಫಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.  ಮಾತ್ರವಲ್ಲದೆ f/2.2 ಅಪಾರ್ಚರ್ ಹೊಂದಿದೆ. ಇದರಲ್ಲಿ 4k ವಿಡಿಯೋ ಗಳನ್ನು ರೆಕಾರ್ಡ್ ಮಾಡಬಹುದು. ದೀರ್ಘ ಕಾಲದ ಬ್ಯಾಟರಿ ಬಳಕೆಗಾಗಿ 3110mAh ಬ್ಯಾಟರಿಯನ್ನು ಅಳವಡಿಸಲಾಗಿದೆ.
  • ಒನ್ಪ್ಲಸ್ 7ಟಿ ಪ್ರೊ: ಈ ಸ್ಮಾರ್ಟ್​ಫೋನ್​  8/12GB RAM ಆಯ್ಕೆಯಲ್ಲಿ ದೊರಕುತ್ತಿದೆ. 256GB ಸ್ಟೋರೇಜ್ ಅಯ್ಕೆಯಲ್ಲಿ ಸಿಗಲಿದೆ. ಮಾತ್ರವಲ್ಲದೆ 53,999 ರೂ  ಬೆಲೆಯಿದ್ದು, 6.67 ಇಂಚಿನ ಫ್ಲುಯೆಡ್ ಅಮೋಲ್ಡ್ QHD +90 Hz ಡಿಸ್ ಪ್ಲೇ ಹೊಂದಿದೆ. ಕ್ವಾಲ್ ಕಾಮ್ ಸ್ನ್ಯಾಪ್ ಡ್ರ್ಯಾಗನ್ 855+ ಪ್ರೊಸೆಸರ್ ಇದ್ದು, ತ್ರಿವಳಿ ಕ್ಯಾಮೆರಾವನ್ನು ನೀಡಲಾಗಿದೆ. ಸೆಲ್ಫಿಗಾಗಿ 16 ಮೆಗಾಫಿಕ್ಸೆಲ್ ಕ್ಯಾಮೆರಾವಿದ್ದರೆ, 4,085 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ        `
  • ಸ್ಯಾಮ್ಸಂಗ್ ನೋಟ್ 10ಪ್ಲಸ್: ಈ ಸ್ಮಾರ್ಟ್ ಫೋನ್ 2019 ರ ಗ್ಯಾಲಕ್ಸಿ ನೋಟ್ ಸೀರಿಸ್ ನ ಒಂದು ಭಾಗವಾಗಿದೆ. ಈ ಫೋನ್ ನಲ್ಲಿ ಹೊಸ ಮಾದರಿಯ ಆಡಿಯೋ ಜೂಮ್ ಫೀಚರ್ ಬಳಕೆಗೆ ಬಂದಿದೆ.ಇದು ಬಾಹ್ಯ ಮೈಕ್ ಗೆ ಸಂಪರ್ಕ ಕಲ್ಪಿಸುವುದು ಮಾತ್ರವಲ್ಲದೆ UHD ವಿಡಿಯೋ (3840*2160)  ಇದಕ್ಕೆ ಸಪೋರ್ಟ್ ಆಗುವುದು. ಇದರ ಮೂಲ ಬೆಲೆ 79,999 ರೂ ಗಳು. ಈ ಸ್ಮಾರ್ಟ್​ಫೋನ್​ 12GB RAM 256GB ಸ್ಟೋರೇಜ್ ಆಯ್ಕೆಯಲ್ಲಿದೆ. ಮೆಮೊರಿಯನ್ನು 1ಟಿಬಿವರೆಗೂ ವೃದ್ಧಿಸಬಹುದು. ಸ್ಯಾಮ್​ ಸಂಗ್​ ನೋಟ್ 10ಪ್ಲಸ್​​ನಲ್ಲಿ ದೀರ್ಘಕಾಲದ ಬ್ಯಾಟರಿ ಬಾಳಿಕೆಗಾಗಿ 4,300 ಎಮ್ ಎಎಚ್ ಬ್ಯಾಟರಿಯನ್ನು ಅಳವಡಿಸಲಾಗಿದೆ.
  • ರಿಯಲ್ ಮಿ ಎಕ್ಷ್ : ಇದು ಪೋಲಾರ್ ವೈಟ್ ಮತ್ತು ಸ್ಪೇಸ್ ಬ್ಲೂ ಕಲರ್ ನಲ್ಲಿ ಲಭ್ಯವಿದೆ. 2.2 Ghz ಕ್ವಾಲ್ ಕಾಮ್ ಸ್ನ್ಯಾಪ್ ಡ್ರ್ಯಾಗನ್ 710 ಓಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. 3765mAh ಬ್ಯಾಟರಿ ಸಾಮಾರ್ಥ್ಯ ಹೊಂದಿದೆ. 16 ಎಂಪಿ ಪಾಪ್ ಅಪ್ ಸೆಲ್ಫಿ ಕ್ಯಾಮೆರಾ ಹೊಂದಿದ್ದು, 48 ಎಂಪಿ ಪ್ರಾಥಮಿಕ ಕ್ಯಾಮೆರಾ ಒಳಗೊಂಡಿದೆ. 6.53 ಇಂಚಿನ ಡಿಸ್ ಪ್ಲೇ ಮತ್ತು 4 ಜಿಬಿ RAM ಹೊಂದಿದೆ.
  • ಒನ್ ಪ್ಲಸ್ 7 ಪ್ರೊ : ಈ ಕಂಪೆನಿಯ ಅತೀ ದುಬಾರಿ ಫೋನ್, ಮೂರು ಕ್ಯಾಮೆರಾವನ್ನು (48MP+16MP+8MP) ಒಳಗೊಂಡು ಕ್ವಾಲ್ ಕಾಮ್ ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್ ಹೊಂದಿದೆ. QHD+ ಪ್ಲುಯೆಡ್ ಅಮ್ಲೋಡ್ ಸ್ಕ್ರೀನ್ ಅನ್ನು ಒಳಗೊಂಡಿದೆ. 6.67 ಡಿಸ್ ಪ್ಲೇ , 4000mAh ಸಾಮಾರ್ಥ್ಯದ ಬ್ಯಾಟರಿ ಹಾಗೂ 6GB RAM ಆಯ್ಕೆಯಲ್ಲಿ ಸಿಗಲಿದೆ.
Advertisement

 

  • ಸ್ಯಾಮ್ ಸಂಗ್ ಗ್ಯಾಲಕ್ಷಿ S10+: ಈ ಸ್ಮಾರ್ಟ್ ಫೋನಿನ ಗುಣಮಟ್ಟ, ಕಾರ್ಯಕ್ಷಮತೆ, ವಿನ್ಯಾಸ ಬಹಳ ಅದ್ಭುತವಾಗಿದೆ. ನೈಟ್ ಮೋಡ್ ಫೀಚರ್ ಅನ್ನು ಒಳಗೊಂಡಿದೆ. ​ ಎಕ್ಸಿನೋಸ್ 9 ಒಕ್ಟಾಕೋರ್ 9820 ಪ್ರೊಸೆಸರ್ ಅಳವಡಿಸಲಾಗಿದ್ದು, 8GB RAM 128GB ಸ್ಟೋರೇಜ್ ಆಯ್ಕೆಯಲ್ಲಿದೆ. ಮೆಮೊರಿಯನ್ನು 512 ಜಿಬಿವರೆಗೂ ವೃದ್ಧಿಸಬಹುದು. 4100 mAh  ಬ್ಯಾಟರಿ ಸಾಮಾರ್ಥ್ಯವಿದೆ.
  • ಐಫೋನ್ ಎಕ್ಸ್ ಎಸ್ ಮ್ಯಾಕ್ಸ್: ಐಫೋನ್ ಸಿರೀಸ್ ನಲ್ಲಿ ಅತೀ ಹೆಚ್ಚು ಗುಣಮಟ್ಟವನ್ನು ಹೊಂದಿರುವ ಪೋನ್ ಇದಾಗಿದೆ. ಇದು ಐಫೋನ್ ಎಕ್ಸ್ ನ ಅಪ್ ಗ್ರೇಡ್ ವರ್ಷನ್. ಕ್ಯಾಮಾರವು ಸ್ಮಾರ್ಟ್ HDR ಫೀಚರ್ ಅನ್ನು ಹೊಂದಿದ್ದು, ಚಿತ್ರವನ್ನು ಅತ್ಯಾಕರ್ಷಕವಾಗಿಸುತ್ತದೆ. ಇದರ ಆರಂಭಿಕ ಬೆಲೆ 1.09.900 ರೂ. ಆ್ಯಪಲ್ A12 ಬಯೋನಿಕ್ ಪ್ರೊಸೆಸರ್​​ನಿಂದ ಕಾರ್ಯನಿರ್ವಹಿಸುತ್ತದೆ. 3174 ಬ್ಯಾಟರಿ ಸಾಮರ್ಥ್ಯವಿದೆ. 64 ಜಿಬಿ ಸ್ಟೋರೇಜ್ ಲಭ್ಯವಿದ್ದು, 6,5 ಇಂಚಿನ ಡಿಸ ಪ್ಲೇ ಹೊಂದಿದೆ. ಇದರ ಕ್ಯಾಮಾರ ಕ್ರಮವಾಗಿ 12ಎಂಪಿ + 12 ಎಂಪಿ ಸಾಮಾರ್ಥ್ಯ ಹೊಂದಿದ್ದು 4ಜಿಬಿ RAM ಒಳಗೊಂಡಿದೆ.
  • ಗೂಗಲ್ ಫಿಕ್ಸೆಲ್ 3ಎಕ್ಸ್ ಎಲ್ : ಆ್ಯಂಡ್ರಾಯ್ಡ್ ಫೋನ್ ಗಳಲ್ಲಿ ಉತ್ತಮ ಕ್ಯಾಮೆರಾ ಸಾಮರ್ಥ್ಯವನ್ನು ಪಡೆಯಬೇಕಾದರೆ ಈ ಫೋನನ್ನು ಖರೀದಿಸಬಹುದು. ಭಾರತದಲ್ಲಿ ಇದರ ಬೆಲೆ 83,000 ರೂಗಳು. ಕೇವಲ ಒಂದು ಕ್ಯಾಮೆರವನ್ನು ಒಳಗೊಂಡಿದ್ದರೂ ಇದರ ಗುಣಮಟ್ಟ ಮಾತ್ರ ಅತ್ಯುತ್ತಮ ವಾಗಿದೆ. ಇದರಲ್ಲಿ ಕಂಡುಬರುವ ಆಟೋಫೋಕಸ್ ಉಳಿದ ಸ್ಮಾರ್ಟ್ ಫೋನ್ ಗಳಿಗಿಂತಲೂ ಭಿನ್ನವಾಗಿದೆ. ಇದು ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ಹೊಂದಿದ್ದು, 64 ಜಿಬಿ ಸ್ಟೋರೆಜ್ ಇರಲಿದೆ. ಬ್ಯಾಟರಿ ಸಾಮರ್ಥ್ಯ 3430mAh  ಇದ್ದು, 6.3 ಇಂಚಿನ ಡಿಸ್ ಪ್ಲೇ ಇದೆ. ಕ್ಯಾಮೆರಾ 12.2 ಎಂಪಿ ಇದ್ದು 4 ಜಿಬಿ RAM ಇರಲಿದೆ.
  • ಒನ್ ಪ್ಲಸ್ 6ಟಿ: ಈ ಸ್ಮಾರ್ಟ್ ಫೋನಿನ ಆರಂಭಿಕ ಬೆಲೆ 37.999 ರೂ. ಫ್ಲ್ಯಾಗ್ ಶಿಫ್ ಕ್ವಾಲ್ ಕ್ವಾಮ್ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ಹೊಂದಿದ್ದು , ಸ್ಮಾರ್ಟ್ ಬೂಸ್ಟ್ ಫೀಚರ್ ಒಳಗೊಂಡಿರುವುದು ವಿಶೇಷ. ಇದರಲ್ಲಿರುವ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ರೀಡರ್ ಅತ್ಯಾಕರ್ಷಕವಾಗಿ ಕಾರ್ಯನಿರ್ವಹಿಸಲಿದ್ದು ಆ ಕಾರಣದಿಂದಲೇ ಟಾಪ್ 10 ರಲ್ಲಿ ಸ್ಥಾನವನ್ನು ಪಡೆದಿದೆ. ಇದರ ಸ್ಟೋರೇಜ್ ಸಾಮಾರ್ಥ್ಯ 128ಜಿಬಿ ಇರಲಿದ್ದು , 16ಎಂಪಿ+20ಎಂಪಿ ಕ್ಯಾಮೆರಾವನ್ನು ಒಳಗೊಂಡಿದೆ. 6.41 ಇಂಚು ಇದರ ಡಿಸ್ ಪ್ಲೇ ಸಾಮಾರ್ಥ್ಯವಾಗಿದ್ದು 6ಜಿಬಿ RAM ಆಯ್ಕೆಯಲ್ಲಿ ಲಭ್ಯವಾಗಲಿದೆ.
  • ಹುವಾಯ್ ಪಿ30 ಪ್ರೊ: 2019ರ ಬೆಸ್ಟ್ ಸ್ಮಾರ್ಟ್​ಫೋನ್​ಗಳ ಪಟ್ಟಿಯಲ್ಲಿ ನಂ.2 ಸ್ಥಾನದಲ್ಲಿ ‘ಹುವಾಯ್ ಪಿ30 ಪ್ರೊ ಸ್ಮಾರ್ಟ್​ಫೋನ್​​ ಕಾಣಿಸಿಕೊಂಡಿದೆ. ಇದು1 ಇಂಚಿನ ಒಎಲ್ಇಡಿ ಡಿಸ್​​ಪ್ಲೇ ಹೊಂದಿದ್ದು, ಹಿಸಿಲಿಕಾನ್ ಕಿರಿನ್ 980 ಪ್ರೊಸೆಸರ್​​ನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹುವಾಯ್ ಪಿ30 ಪ್ರೊ ಸ್ಮಾರ್ಟ್​ಫೋನ್​ 8GB RAM ಜೊತೆಗೆ 256GB ಸ್ಟೊರೇಜ್ ಆಯ್ಕೆಯಲ್ಲಿ ಸಿಗಲಿದೆ. ಈ ಸ್ಮಾರ್ಟ್​ಫೋನ್​ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. 40 ಮೆಗಾಫಿಕ್ಸೆಲ್+20 ಮೆಗಾಫಿಕ್ಸೆಲ್+ 8ಮೆಗಾಫಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. ಸೆಲ್ಫಿಗಾಗಿ 32 ಮೆಗಾಫಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇನ್ನು ಸ್ಮಾರ್ಟ್​ಫೋನ್​ 4200 ಎಮ್ಎಎಚ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಮಾತ್ರವಲ್ಲದೆ ಫಿಂಗರ್ ಪ್ರಿಂಟ್ ಸೆನ್ಸಾರ್ ಫೀಚರ್ ನೀಡಲಾಗಿದೆ

ಈ ಟಾಪ್ 10 ಸ್ಮಾರ್ಟ್ ಫೋನ್ ಗಳ ಜೊತೆಗೆ ಒಪ್ಪೊ ರೆನೋ 10ಎಕ್ಸ್ ಜೂಮ್ ಕೂಡ  ಅತ್ಯುತ್ತಮ ಗುಣಮಟ್ಟವನ್ನು ಹೊಂದಿದ್ದು ಇದರ ಫೀಚರ್ ಗಳು ಇಂತಿವೆ.

  • ಒಪ್ಪೊ ರೆನೋ 10ಎಕ್ಸ್ ಜೂಮ್ : ಚೀನಾ ಮೂಲದ ಒಪ್ಪೋ ರೆನೋ 10ಎಕ್ಸ್ ಜೂಮ್ ಸ್ಮಾರ್ಟ್​ಫೋನ್​6 ಇಂಚಿನ ಡಿಸ್​​ಪ್ಲೇ ಹೊಂದಿದೆ. ಸ್ನಾಪ್ ಡ್ರ್ಯಾಗನ್ 855 ಪ್ರೊಸೆಸರ್​​ನಿಂದ ಕಾರ್ಯ ನಿರ್ವಹಿಸುತ್ತಿದ್ದು, ಆ್ಯಂಡ್ರಾಯ್ಡ್9 ಬೆಂಬಲ ಪಡೆದಿದೆ. ಒಪ್ಪೊ ರೆನೋ 10ಎಕ್ಸ್ ಜೂಮ್ ಸ್ಮಾರ್ಟ್​ಫೋನ್​ ತ್ರಿವಳಿ ಕ್ಯಾಮೆರಾವನ್ನು ಹೊಂದಿದೆ. ಹಿಂಭಾಗದಲ್ಲಿ 48 ಮೆಗಾಫಿಕ್ಸೆಲ್+13 ಮೆಗಾಫಿಕ್ಸೆಲ್+8ಮೆಗಾಫಿಕ್ಸಲ್ ಕ್ಯಾಮರಾ ನೀಡಲಾಗಿದೆ. ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. ಗ್ರಾಹಕರಿಗಾಗಿ ಈ ಸ್ಮಾರ್ಟ್​ಫೋನ್​ 6/8ಜಿಬಿ RAM ಆಯ್ಕೆಯಲ್ಲಿ ಮತ್ತು 128/256ಜಿಬಿ ಸ್ಟೊರೇಜ್ ಆಯ್ಕೆಯಲ್ಲಿ ಸಿಗಲಿದೆ.
Advertisement

Udayavani is now on Telegram. Click here to join our channel and stay updated with the latest news.

Next