Advertisement

2019ರ ಲೋಕಸಭಾ ಚುನಾವಣೆ: ಮಾರ್ಚ್‌ ಮೊದಲ ವಾರ ವೇಳಾ ಪಟ್ಟಿ ಪ್ರಕಟ

01:11 PM Jan 28, 2019 | udayavani editorial |

ಹೊಸದಿಲ್ಲಿ  : 2019ರ ಲೋಕಸಭಾ ಚುನಾವಣೆಯ ವೇಳಾ ಪಟ್ಟಿ ಬಹುತೇಕ ಮಾರ್ಚ್‌ ಮೊದಲ ವಾರ ಪ್ರಕಟವಾಗಲಿದೆ. ಚುನಾವಣೆ ಎಪ್ರಿಲ್‌ – ಮೇ ತಿಂಗಳಲ್ಲಿ ನಡೆಯಲಿದೆ.

Advertisement

ಈ ನಿಟ್ಟಿನಲ್ಲಿ  ಚುನಾವಣಾ ಆಯೋಗ ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಮತ್ತು ಚುನಾವಣಾ ಧಿಕಾರಿಗಳಿಗೆ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆ ಕುರಿತಾಗಿ ಪತ್ರ ಬರೆದಿದೆ. 

ಚುನಾವಣಾ ಆಯೋಗದ ಈ ಪತ್ರದಲ್ಲಿ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ರಾಜ್ಯ ವಿಧಾನಸಭಾ ಚುನಾವಣೆಗಳ ಬಗ್ಗೆ ಉಲ್ಲೇಖವಿದೆ. ಈ ರಾಜ್ಯಗಳ ವಿಧಾನಸಭಾ ಚುನಾವಣೆ ಈ ವರ್ಷವೇ ನಡೆಯಲಿಕ್ಕಿದೆ. ಹಾಲಿ ಲೋಕಸಭೆಯ ಅವಧಿ ಜೂನ್‌ 3ರಂದು ಕೊನೆಗೊಳ್ಳಲಿದೆ. 

2014ರ ಲೋಕಸಭಾ ಚುನಾವಣೆ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಆ ವರ್ಷ ಮಾರ್ಚ್‌ 5ರಂದು ಪ್ರಕಟಿಸಿತ್ತು ಮತ್ತು ಎಪ್ರಿಲ್‌ – ಮೇ ತಿಂಗಳಲ್ಲಿ ಒಟ್ಟು 9 ಹಂತಗಳಲ್ಲಿ ಲೋಕಸಭಾ ಚುನವಾಣೆಯನ್ನು ನಡೆಸಿತ್ತು. ಮೊದಲ ಹಂತದ ಮತದಾನ ಎಪ್ರಿಲ್‌ 7ರಂದು ನಡೆದಿತ್ತು; ಕೊನೇ ಹಂತದ ಮತದಾನ ಮೇ 12ರಂದು ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next