Advertisement
ಪ್ರತಿಯೊಬ್ಬರು ವರ್ಷವೂ ಒಳ್ಳೆಯ ಸಿನಿಮಾ ಕೊಡಬೇಕೆಂಬ ಉದ್ದೇಶವನ್ನೇ ಹೊಂದಿರುತ್ತೇನೆ ಮತ್ತು ಆ ನಿಟ್ಟಿನಲ್ಲೇ ಕೆಲಸ ಮಾಡುತ್ತೇನೆ. ಈ ವರ್ಷವೂ ಅದೇ ಮುಂದುವರೆದಿದೆ. ಹಾಗೆ ನೋಡಿದರೆ ನಾನು 2018ರಲ್ಲಿ ಅಂದುಕೊಂಡಿದ್ದು ನಡೆಯಲಿಲ್ಲ. ಮೂರು ಸಿನಿಮಾವಾದರೂ ಬಿಡುಗಡೆಯಾಬೇಕೆಂದುಕೊಂಡಿದ್ದೆ. ಆದರೆ, ಬಿಡುಗಡೆಯಾಗಿದ್ದು ಕೇವಲ ಒಂದು ಮಾತ್ರ. ಈ ವರ್ಷ ಮೂರು ಸಿನಿಮಾ ಬಿಡುಗಡೆಯಾಗಲಿದೆ. ಜೊತೆಗೆ ಇನ್ನೊಂದಿಷ್ಟು ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳಲಿದ್ದೇನೆ. ಹೊಸ ತರಹದ ಪಾತ್ರಗಳಿಗೆ ಮೊದಲ ಆದ್ಯತೆ-ಗಣೇಶ್, ನಟ
-ದರ್ಶನ್ ಹೊಸ ವರ್ಷದಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಬೇಕು, ಇನ್ನಷ್ಟು ಒಳ್ಳೆಯ ಸಿನಿಮಾಗಳನ್ನು ಒಪ್ಪಿಕೊಳ್ಳಬೇಕೆಂಬುದಷ್ಟೇ ನನ್ನ ಉದ್ದೇಶ. ಈ ವರ್ಷಾರಂಭದಲ್ಲೇ ನನ್ನ ಮೂರು ಚಿತ್ರಗಳು ಬಿಡುಗಡೆಯಾಗಲಿದೆ. ಜೊತೆಗೆ ಇನ್ನೊಂದಿಷ್ಟು ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ. ಹೊಸ ವರ್ಷದಲ್ಲಿ ಅದು ಡಬಲ್ ಆಗಬೇಕೆಂಬ ಆಸೆ ಇದೆ. ಆರು ಸಿನಿಮಾ ರಿಲೀಸ್ ಆಗಬೇಕು. ಆರು ಸಿನಿಮಾ ಶೂಟಿಂಗ್ ಮಾಡುತ್ತಿರಬೇಕು. 2018ರಲ್ಲಿ ನಾನು ಏನೂ ಅಂದುಕೊಂಡಿಲ್ಲ. ಆದರೆ ಎಲ್ಲಾ ಆಗಿದೆ. ನಿರೀಕ್ಷೆ ಮಾಡದಿರುವುದೆಲ್ಲವೂ ನಡೆದುಹೋಗಿದೆ. ಅದು ಖುಷಿಕೊಟ್ಟಿದೆ. ಸಿನಿಮಾ ಬಿಟ್ಟು ಬೇರೆ ಯಾವುದೇ ವಿಚಾರ ನನ್ನ ತಲೆಯಲ್ಲಿ ಇಲ್ಲ.
-ರಚಿತಾ ರಾಮ್, ನಟಿ
Related Articles
-ಹರಿಪ್ರಿಯಾ,ನಟಿ
ಸಿನಿಮಾ, ಒಳ್ಳೆ ಊಟ, ಹಾಡುಗಳಿಗೆ ನನ್ನ ಮೊದಲ ಆದ್ಯತೆ. ಹೊಸ ವರ್ಷದಲ್ಲಿ ನನ್ನ ಮೂರು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಆ ಸಿನಿಮಾಗಳ ಪಾತ್ರಗಳು ಭಿನ್ನವಾಗಿವೆ. ನಾನಾಗಿ ಯಾವುದನ್ನೂ ಪ್ಲ್ರಾನ್ ಮಾಡಿಲ್ಲ. ಆ ದೇವರೇ ನನಗಾಗಿ ಒಂದು ಒಳ್ಳೆಯ ಪ್ಲ್ರಾನ್ ಮಾಡಿರುತ್ತಾರೆ. ಅದರೊಂದಿಗೆ ಸಾಗುತ್ತೇನೆ. ಹೊಸ ವರ್ಷದಲ್ಲಿ ಬರವಣಿಗೆ ಆರಂಭಿಸಬೇಕೆಂದುಕೊಂಡಿದ್ದೇನೆ. ಬರವಣಿಗೆ ಮಾಡುತ್ತಿದ್ದೆ. ಈಗಾಗಲೇ ಎರಡು ಸ್ಕ್ರಿಪ್ಟ್ ಮಾಡಿಟ್ಟಿದ್ದೇನೆ. ಈಗ ಮತ್ತೆ ಬರವಣಿಗೆ ಆರಂಭಿಸಬೇಕೆಂದಿದ್ದೇನೆ.
-ಮಾನ್ವಿತಾ
Advertisement
ಎಲ್ಲಾ ರಾಜ್ಯಗಳಲ್ಲೂ 2000ಕ್ಕೂ ಹೆಚ್ಚು ಚಿತ್ರಮಂದಿರಗಳಿವೆ. ನಮ್ಮ ರಾಜ್ಯದಲ್ಲೂ ಹೊಸ ವರ್ಷದಲ್ಲಾದರೂ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಲಿ ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಇದೇ ನನ್ನ ಹೊಸ ವರ್ಷದ ಆಸೆ, ಕನಸು.-ಯೋಗರಾಜ್ ಭಟ್ ನನಗೆ ಪ್ರತಿದಿನವೂ ಹೊಸ ವರ್ಷ. ಬೆಳಗ್ಗೆ ಎದ್ದ ಕೂಡಲೇ ಅದು ನನಗೆ ಹೊಸ ವರ್ಷ. ಹಾಗಾಗಿ, ಕನಸುಗಳು ನಿರಂತರ.
-ಸೂರಿ