- ಪ್ರೀಮಿಯರ್ ಪದ್ಮಿನಿ : ನವರಸ ನಾಯಕ ಜಗ್ಗೇಶ್, ಸುಧಾರಾಣಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡ ಪ್ರೀಮಿಯರ್ ಪದ್ಮಿನಿ. ಒಳ್ಳೆ ಕಥಾ ಹಂದಾರ. ಸಂಸಾರದ ಜಂಜಾಟ, ಮೌಲ್ಯಗಳನ್ನು ಸಾರುವ ಚಿತ್ರ ಇದಾಗಿದ್ದು.ಮಧ್ಯಮ ವರ್ಗದ ವಾಸ್ತವ ಸ್ಥಿತಿಯ ಕುರಿತು ಹಾಗೂ ಹಳ್ಳಿಯ ಹೆಣ್ಣು ಮಕ್ಕಳ ಪರಿಸ್ಥಿತಿಯನ್ನು ಗಂಡು ಸಮಾಜದ ಮುಖವಾಡವನ್ನು, ಸಂಸಾರದ ಏರು ತಗ್ಗುಗಳನ್ನು ಚಿತ್ರ ಎತ್ತಿ ತೋರಿಸುತ್ತದೆ.
Advertisement
- ದೇವಕಿ: ಪ್ರಿಯಾಂಕ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ದೇವಕಿ ಚಿತ್ರ ಈ ವರ್ಷ ಗಮನ ಸೆಳೆದ ಚಿತ್ರಗಳಲ್ಲೊಂದು. ತಾಯಿ ಹಾಗೂ ಮಗಳ ಬಾಂಧವ್ಯವನ್ನು ಬೆಸೆಯುವ ಚಿತ್ರ ಪ್ರೇಕ್ಷಕರನ್ನು ಕೌತುಕವಾಗಿ ಸೀಟಿನ ತುದಿಯಲ್ಲಿ ಕೂರಿಸುವುದರ ಜೊತೆಗೆ ಕಣ್ಣಂಚಿನಲ್ಲಿ ನೀರು ತರಿಸುತ್ತದೆ. ತಾಯಿ ಮಗು ಹಾಗೂ ನಟ ಕಿಶೋರ್ ಅಭಿನಯದ ಜೊತೆ ಮೇಕಿಂಗ್ ಚಿತ್ರ ಪಾಸಿಟಿವ್ ಅಂಶ.
- ಕವಲುದಾರಿ: ರಿಷಿ ಅಭಿನಯದ ವಿತ್ರ ಕವಲುದಾರಿ. ಸ್ಯಾಂಡಲ್ ವುಡ್ ಅಂಗಳದಲ್ಲಿ ಸದ್ದು ಮಾಡಿದ ಸಿನಿಮಾ. ಟ್ರಾಫಿಕ್ ಪೊಲೀಸ್ ಯೊಬ್ಬ ಕೌತುಕಗಳನ್ನು ಭೇದಿಸುತ್ತಾ ಹೋಗುವ ಚಿತ್ರ ಸಸ್ಪೆನ್ಸ್, ಥ್ರಿಲ್ಲರ್ ದಿಕ್ಕಿನಲ್ಲಿ ಸಾಗುತ್ತದೆ.ಅನಂತ್ ನಾಗ್, ಅಚ್ಯುತ್ ಕುಮಾರ್ ನಟನೆ ಇಲ್ಲಿ ಗಮನ ಸೆಳೆಯುತ್ತದೆ. ಹೊಸ ಬಗೆಯ ಚಿತ್ರಗಳ ಪಟ್ಟಿಗೆ ಈ ಚಿತ್ರ ಸೇರುತ್ತದೆ.
Related Articles
Advertisement
- ಪೈಲ್ವಾನ್ : ಸ್ಯಾಂಡಲ್ ವುಡ್ ಸೇರಿದಂತೆ ಬಹುಭಾಷೆಯಲ್ಲಿ ಬೆಟ್ಟದಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ ಸಿನಿಮಾ ಪೈಲ್ವಾನ್. ನಿರೀಕ್ಷೆ ತಕ್ಕ ಮಟ್ಟಿಗೆ ನಿರಾಶೆಯಾಗದೇ ಇದ್ರು ಕೊಟ್ಟ ಕಾಸಿಗೆ ಮೋಸವಿಲ್ಲದ ಹಾಗೆ ಪೈಲ್ವಾನ್ ಜನಮನದಲ್ಲಿ ಮೆಚ್ಚುಗೆಯನ್ನುಗಳಿಸಿಕೊಂಡಿತು. ಸುನಿಲ್ ಶೆಟ್ಟಿಯ ಜೊತೆ ಕಿಚ್ಚ ಸುದೀಪ್ ಚಿತ್ರಕ್ಕಾಗಿ ವ್ಯಯಿಸಿದ ಶ್ರಮ ಎದ್ದಉ ಕಾಣುತ್ತದೆ. ಅನಾಥ ಹುಡುಗನೊಬ್ಬನ ಪ್ರೇಮ ಕಥೆಯ ನಡುವೆ ಪೈಲ್ವಾನ್ ಆಗಿ ದುಷ್ಟರನ್ನು ಸಂಹರಿಸುವರೆಗಿನ ಪಯಣ ಅದ್ಭುತವಾಗಿ ಮೂಡಿ ಬಂದಿದೆ.
- ಒಡೆಯ: ಚಿತ್ರ ಪ್ರೇಮಿಗಳಲ್ಲಿ ನಿರೀಕ್ಷೆ ಹುಟ್ಟಿಸಿದ ಚಿತ್ರ ಒಡೆಯ. ದುಡಿಯುವ ಕೈಗಳಿಗೆ ಆಸರೆಯಾಗಿ ಇರುವವ ಒಡೆಯ. ಒಂದಿಷ್ಟು ಭಾವನಾತ್ಮಕ ಸಂಭಾಷಣೆಗಳು,ದೃಶ್ಯಗಳು ಹಾಗೂ ಸರಳ ಕಥೆಯನ್ನು ಸಾಗುವ ಚಿತ್ರದಲ್ಲಿ ದರ್ಶನ್ ಅಭಿನಯವೇ ಪ್ರಧಾನ.
- ಯಜಮಾನ: ದರ್ಶನ್ ಅಭಿಮಾನಿಗಳಲ್ಲಿಮ ಟ್ರೆಂಡ್ ಸೃಷ್ಟಿಸಿದ ಚಿತ್ರ ಯಜಮಾನ. ರಶ್ಮಿಕಾ ಮಂದಣ್ಣನ ಜೋಡಿ. ಬೆಳೆ ಬೆಳೆಯುವ ರೈತನೇ ನಿಜವಾದ ಯಜಮಾನ ಎನ್ನುವ ಅಂಶ ಚಿತ್ರದಲ್ಲಿ ಪ್ರಧಾನ. ಸೂಕ್ಷ್ಮ ವಿಷಯಗಳನ್ನು ತನ್ನದೇ ಕಮರ್ಷಿಯಲ್ ಶೈಲಿಯಲ್ಲಿ ಹೇಳಿಕೊಂಡು ಸಾಗುವ ಚಿತ್ರದಲ್ಲಿ ಫೈಟ್, ಥ್ರಿಲ್ಲಿಂಗ್ ದೃಶ್ಯಗಳು, ಅದ್ಭುತ ಸಾಹಿತ್ಯ ಇರು ಹಾಡುಗಳು ಗಮನ ಸೆಳೆದಿದ್ದವು.
- ಬೆಲ್ ಬಾಟಮ್ : ನಿರ್ದೇಶಕ ರಿಷಭ್ ಶೆಟ್ಟಿ ಬಣ್ಣ ಹಚ್ಚಿ ನಟಿಸಿದ ಚಿತ್ರ ಬೆಲ್ ಬಾಟಮ್. ದಿವಾಕರನ ಬುದ್ದಿವಂತಿಕೆ ಹಾಗೂ ಚತುರತನದ ಜೊತೆ ಮೋಹಿಸುವ ಪೋಲಿತನ ಚಿತ್ರದಲ್ಲಿ ಗಮನ ಸೆಳೆಯುತ್ತದೆ. ಚಿತ್ರದಲ್ಲಿ ಹರಿಪ್ರಿಯಾ ನಟನೆಯ ಮೂಲಕ ಗಮನ ಸೆಳೆಯುತ್ತಾರೆ. ಹಾಸ್ಯದ ಜೊತೆ ಕೌತುಕವನ್ನು ಹುಟ್ಟಿಸುವ ದಿವಾಕರ್ ಪತ್ತೇದಾರಿ ಪಾತ್ರ ಪ್ರೇಕ್ಷಕರನ್ನು ರಂಜಿಸುತ್ತದೆ. ಚಿತ್ರದ ಹಾಡುಗಳು ಗಮನ ಸೆಳೆದಿದ್ದವು.
- ಐ ಲವ್ ಯೂ : ಆರ್. ಚಂದ್ರು ಹಾಗೂ ಉಪೇಂದ್ರ ಕಾಂಬಿನೇಷನ್ ನಲ್ಲಿ ಮೂಡಿ ಬಂದ ಚಿತ್ರ ಐ ಲವ್ ಯೂ. ರಚಿತ ರಾಮ್ ಜೋಡಿಯಾಗಿ ಕಂಡ ಚಿತ್ರದಲ್ಲಿ ಪ್ರೀತಿ ಪ್ರೇಮದ ಹೊಸ ಪಾಠವನ್ನು ಹೇಳಲಾಗಿದ್ದು, ಹಾಡುಗಳು ಕೇಳುಗರಲ್ಲಿ ಸಂಚಲನ ಸೃಷ್ಟಿಸಿತ್ತು. ಮೋಹ, ಭಾವಗಳ ಕಲ್ಪನೆಗಳಿಗೆ ಚಿತ್ರ ಹೊಸ ತನ್ನದೇ ಆದ ಹೊಸ ಅರ್ಥವನ್ನು ನೀಡುತ್ತದೆ. ಚಿತ್ರ ಹಸಿಬಿಸಿ ದೃಶ್ಯಗಳಿಂದಲೂ ಸದ್ದು ಮಾಡಿತ್ತು.
- ಅವನೇ ಶ್ರೀಮನ್ನಾರಾಯಣ : ಸ್ಯಾಂಡಲ್ ವುಡ್ ನಲ್ಲಿ ವರ್ಷದ ಕೊನೆಗೆ ಪ್ರೇಕ್ಷಕರಿಗೆ ಮನರಂಜನೆಯ ಭರಪೂರ್ಣ ಔತಣವನ್ನು ಉಣಬಡಿಸಿದ ಚಿತ್ರ ಅವನೇ ಶ್ರೀಮನ್ನಾರಾಯಣ. ರಕ್ಷಿತ್ ಶೆಟ್ಟಿ ಮೂರುವರೆ ವರ್ಷದಿಂದ ಚಿತ್ರಕ್ಕಾಗಿ ಮಾಡಿಕೊಂಡ ತಯಾರಿ.ಚಿತ್ರದ ಪ್ರತಿ ಫ್ರೇಮ್ ನಲ್ಲೂ ಎದ್ದು ಕಾಣುತ್ತದೆ. ಅದ್ಭುತ ಮೇಕಿಂಗ್, ಹಾಸ್ಯ, ಹಾಗೂ ನಟನೆ ಈ ಚಿತ್ರದ ಪ್ಲಸ್. ಕನ್ನಡದ ಜೊತೆ ಬಹುಭಾಷೆಯಲ್ಲಿ ತಯಾರಾದ ಈ ಚಿತ್ರ ಲೂಟಿಕೋರರ ಕಥೆಯನ್ನು ಹೇಳುತ್ತಾ ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ. ರಕ್ಷಿತ್, ಶೆಟ್ಟಿಯ ಕನಸಿಗೆ ನಿರ್ದೇಶಕ ಸಚಿನ್ , ನಿರ್ಮಾಪಕ ಪುಷ್ಕರ್ ಹಾಗೂ ಸಂಗೀತ ಸಂಯೋಜಕ ಅಜನೀಶ್ ಧಾರೆ ಎರೆದು ಸಹಕಾರಿಸಿದ್ದಾರೆ. ಒಟ್ಟಿನಲ್ಲಿ ಚಿತ್ರ ನೋಡುಗರಿಗೆ ಒಂದು ಹೊಸ ಅನುಭವ ನೀಡುತ್ತದೆ.