Advertisement

2018ರಲ್ಲಿ 8 ರಾಜ್ಯಗಳಲ್ಲಿ ಚುನಾವಣೆ: 2019ರ ಸಂಸತ್ತಿಗೆ ದಿಕ್ಸೂಚಿ

04:11 PM Jan 01, 2018 | Team Udayavani |

ಹೊಸದಿಲ್ಲಿ : 2018ರ ಈ ಹೊಸ ವರ್ಷದಲ್ಲಿ ಎಂಟು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದ್ದು 2019ರಲ್ಲಿ ನಡೆಯುವ ಮಹಾ ಚುನಾವಣೆಗೆ ಪೂರ್ವ ಭಾವಿಯಾಗಿ ಏರ್ಪಡುವ ಸೆಮಿ ಫೈನಲ್‌ (ಉಪಾಂತ್ಯದ) ಮಹಾ ಕದನವೆಂದೇ ಪರಿಗಣಿತವಾಗಲಿದೆ.

Advertisement

2018ರಲ್ಲಿ  ವಿಧಾನಸಭಾ ಚುನಾವಣೆಗಳನ್ನು ಕಾಣಲಿರುವ ರಾಜ್ಯಗಳು ಈ ಕೆಳಗಿನವು : 

1. ರಾಜಸ್ಥಾನ
2. ಮಧ್ಯ ಪ್ರದೇಶ
3. ಕರ್ನಾಟಕ
4. ಛತ್ತೀಸ್‌ಗಢ
5. ನಾಗಾಲ್ಯಾಂಡ್‌
6. ಮೇಘಾಲಯ
7. ತ್ರಿಪುರ
8. ಮಿಜೋರಾಂ 

2019ರ ಮಹಾ ಚುನಾವಣೆಯಲ್ಲಿ ಈ ಎಂಟು ರಾಜ್ಯಗಳು 99 ಸಂಸದರನ್ನು ಕಳುಹಿಸಲಿವೆ.

ಮೇಲಿನ ಎಂಟು ರಾಜ್ಯಗಳ ಪೈಕಿ ಹೆಚ್ಚಿನವುಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ವಿರುದ್ದ ಹೋರಾಟ ನಡೆಯಲಿದೆ.

Advertisement

ಮೇಲಿನ ಎಂಟು ರಾಜ್ಯಗಳ ಪೈಕಿ ಮಧ್ಯ ಪ್ರದೇಶ, ಛತ್ತೀಸ್‌ಗಢ, ತ್ರಿಪುರ ಮತ್ತು ನಾಗಾಲ್ಯಾಂಡ್‌ ಬಹುತೇಕ ಬಿಜೆಪಿ ಬುಟ್ಟಿಗೆ ಬೀಳಲಿವೆ. ಆದರೆ ಕರ್ನಾಟಕವು ಬಿಜೆಪಿಗೆ ಸುಲಭದಲ್ಲಿ ಸಿಗದ ತುತ್ತು. ಇಲ್ಲಿ ಆಳುವ ಕಾಂಗ್ರೆಸ್‌ ಪಕ್ಷವೇ ಗಟ್ಟಿ.

ರಾಜಸ್ಥಾನ ಕೂಡ ಬಿಜೆಪಿಗೆ ಸುಲಭದಲ್ಲಿ ದಕ್ಕಲಾರದು ಎಂದೇ ಈಗ ತಿಳಿಯಲಾಗಿದೆ. ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿ ಹೇಗೆ ಮೂರಂಕಿಯಿಂದ ಎರಡಂಕಿಗೆ ಇಳಿಯಿತೋ ಅದೇ ರೀತಿ ರಾಜಸ್ಥಾನದ ಕತೆಯೂ ಆಗಲಿದೆ ಎಂದು ತಿಳಿಯಲಾಗಿದೆ. 

ರಾಜಸ್ಥಾನದಲ್ಲಿ ರೈತರ ಬಿಕ್ಕಟ್ಟು, ಯುವಕರಲ್ಲಿನ ನಿರುದ್ಯೋಗ ಮತ್ತು ಗುಜ್ಜರ್‌ ಚಳವಳಿಯಿಂದಾಗಿ ಬಿಜೆಪಿಗೆ ಎಡವಟ್ಟಾಗಲಿದೆ. ಮಧ್ಯ ಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಆಡಳಿತ ವಿರೋಧಿ ಅಲೆಯನ್ನು ಎದುರಿಸಬೇಕಾಗಿದೆ. ಈ ಎರಡು ರಾಜ್ಯಗಳಲ್ಲೀಗ ಸಿಎಂ ಆಗಿರುವ ಶಿವರಾಜ್‌ ಸಿಂಗ್‌ ಚೌಹಾಣ್‌ ಮತ್ತು ರಮಣ್‌ ಸಿಂಗ್‌ ಅವರು ನಾಲ್ಕನೇ ಅವಧಿಗಾಗಿ ಹೋರಾಡಲಿದ್ದಾರೆ. 

ಮೇಘಾಲಯದಲ್ಲಿ ಬಿಜೆಪಿ ಬಹುತೇಕ ಅಲ್ಲಿನ ನ್ಯಾಶನಲ್‌ ಪೀಪಲ್ಸ್‌ ಪಾರ್ಟಿ (ಎನ್‌ಪಿಪಿ) ಜತೆಗೆ ಚುನಾವಣಾ ಮೈತ್ರಿ ಮಾಡಿಕೊಳ್ಳಲಿದೆ.  

Advertisement

Udayavani is now on Telegram. Click here to join our channel and stay updated with the latest news.

Next