Advertisement

2018 ತಾಪದ ವರ್ಷ

12:30 AM Jan 17, 2019 | |

ಹೊಸದಿಲ್ಲಿ: 1901ರಿಂದೀಚೆಗಿನ ಲೆಕ್ಕಾಚಾರದ ಪ್ರಕಾರ, ಭಾರತದಲ್ಲಿ 2018ನೇ ವರ್ಷವು ಹೆಚ್ಚು ಸರಾಸರಿ ತಾಪಮಾನದ ವರ್ಷವಾಗಿದೆ. ಗಮನಾರ್ಹ ಅಂಶವೆಂದರೆ ಆ ವರ್ಷದ ಬಳಿಕ ಇದು 6ನೇ ಅತ್ಯಂತ ಉಷ್ಣದ ವರ್ಷವಾಗಿದೆ.  ಈ ರೀತಿಯ ಹವಾಮಾನ ಬದಲಾ ವಣೆಯ ಪರಿಣಾಮ, ಭಾರತದಲ್ಲಿ 1,428 ಜನ ಸಾವನ್ನಪ್ಪಿ ದ್ದಾರೆ ಎಂದು ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಜನವರಿ-ಫೆಬ್ರವರಿಯಲ್ಲಿ ಭಾರತಕ್ಕೆ ಚಳಿಗಾಲದ ಉತ್ತುಂಗ ಸ್ಥಿತಿ ಇರುತ್ತದೆ. ಆದರೆ, “”2018ರ ಈ ಅವಧಿಯಲ್ಲಿ ಸರಾಸರಿ ತಾಪಮಾನಕ್ಕಿಂತ +0.59 ಡಿಗ್ರಿ ಸೆಲ್ಸಿಯಸ್‌ ಹೆಚ್ಚಿನ ಉಷ್ಣಾಂಶವಿತ್ತು. 1901ರಿಂದೀಚೆಗಿನ ದಾಖಲೆಗಳ ಪ್ರಕಾರ, ಚಳಿಗಾಲದಲ್ಲಿ ಸರಾಸರಿ ಉಷ್ಣಾಂಶ ಹೀಗೆ ಏರಿಕೆಯಾಗಿದ್ದು 6ನೇ ಬಾರಿಯಾಗಿದ್ದು, ಈ ರೀತಿ ಉಷ್ಣಾಂಶ ಹೆಚ್ಚಾಗಲು, ಜಾಗತಿಕ ತಾಪಮಾನವೇ ಕಾರಣ” ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ತಾಪಮಾನ ಹೆಚ್ಚಳದಿಂದಾಗಿ, 2004ರಿಂದ 2018ರವರೆಗಿನ ಎಲ್ಲಾ ವರ್ಷಗಳಲ್ಲೂ ಸರಾಸರಿ ಉಷ್ಣಾಂಶ ಹೆಚ್ಚಾಗಿದೆ. ಅದರಲ್ಲೂ 2018ರ ಉಷ್ಣಾಂಶ 117 ವರ್ಷಗಳಲ್ಲಿ ಹೊಸ ದಾಖಲೆ ಬರೆದಿದೆ ಎಂದು ಐಎಂಡಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next