Advertisement

ಶ್ರೀಲಂಕಾ ವಿರುದ್ಧ ಗೆಲುವು

07:00 AM Apr 06, 2018 | Team Udayavani |

ಗೋಲ್ಡ್‌ ಕೋಸ್ಟ್‌: ವಿಶ್ವದ ಎರಡನೇ ರ್‍ಯಾಂಕಿನ ಕಿದಂಬಿ ಶ್ರೀಕಾಂತ್‌ ಮತ್ತು ಸೈನಾ ನೆಹ್ವಾಲ್‌ ಅವರ ಉತ್ತಮ ಆಟದಿಂದಾಗಿ ಭಾರತವು ಮಿಕ್ಸೆಡ್‌ ತಂಡ ಬ್ಯಾಡ್ಮಿಂಟನ್‌ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಶ್ರೀಲಂಕಾ ವಿರುದ್ಧ 5-0 ಗೆಲುವು ದಾಖಲಿಸಿದೆ.

Advertisement

ಮೊದಲ ಸಿಂಗಲ್ಸ್‌ನಲ್ಲಿ ಶ್ರೀಕಾಂತ್‌ ಶ್ರೀಲಂಕಾದ ನಿಲುಕ ಕರುಣರತ್ನೆ ಅವರನ್ನು 21-16, 21-10 ನೇರ ಸೆಟ್‌ಗಳಿಂದ ಉರುಳಿಸಿದರು. ಸೈನಾ ಇನ್ನೊಂದು ಪಂದ್ಯದಲ್ಲಿ ಮದುಶಿಕಾ ದಿಲುಕ್ಸಿ ಬೆರುವೆಲಗೆ ಅವರನ್ನು 21-8, 21-4 ಸೆಟ್‌ಗಳಿಂದ ಸುಲಭವಾಗಿ ಮಣಿಸಿದರು.

ಶ್ರೀಕಾಂತ್‌ ಅವರ ಪಂದ್ಯದ ಮೊದಲು ಮಿಕ್ಸೆಡ್‌ ಡಬಲ್ಸ್‌ ಪಂದ್ಯದಲ್ಲಿ ರುತ್ವಿಕಾ ಶಿವಾನಿ ಗಾಡೆ ಮತ್ತು ಪ್ರಣವ್‌ ಜೆರ್ರಿ ಚೋಪಾx ಅವರು ಶ್ರೀಲಂಕಾದ ಸಚಿನ್‌ ಡಯಾಸ್‌ ಮತ್ತು ತಿಲಿನಿ ಪ್ರಮೊದಿಕಾ ಹೆಂದಹೆವಾ ಅವರನ್ನು 21-15, 19-21, 22-20 ಸೆಟ್‌ಗಳ ಕಠಿನ ಹೋರಾಟದಲ್ಲಿ ಜಯ ಸಾಧಿಸಿ ಭಾರತಕ್ಕೆ ಗೆಲುವಿನ ಅರಂಭ ಒದಗಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next