Advertisement

ಈ ಪದಕಕ್ಕಾಗಿ ದಶಕದಿಂದ ಕಾಯುತ್ತಿದ್ದೆ: ಅವಾರೆ

06:05 AM Apr 13, 2018 | Team Udayavani |

ಗೋಲ್ಡ್‌ಕೋಸ್ಟ್‌:”ಈ ಪದಕಕ್ಕಾಗಿ ನಾನು 10 ವರ್ಷಗಳಿಂದ ಕಾಯುತ್ತಿದ್ದೆ, ಈ ಕ್ಷಣವನ್ನು ಬಣ್ಣಿಸಲಾಗದು’ ಎಂಬುದಾಗಿ ರಾಹುಲ್‌ ಅವಾರೆ ಬಹಳ ಖುಷಿಯಿಂದ ಪ್ರತಿಕ್ರಿಯಿಸಿದ್ದಾರೆ.

Advertisement

“ನಾನು 2010 ಹಾಗೂ 2014ರ ಗೇಮ್ಸ್‌ಗಳಲ್ಲಿ ಚಿನ್ನದ ಪದಕ ಗೆಲ್ಲಲು ವಿಫ‌ಲನಾಗಿದ್ದೆ. ಕೊನೆಗೂ ನನ್ನ ಕನಸು ನನಸಾಗಿದೆ. ಯಾವುದೇ ಅಭ್ಯಾಸ ನೀಡದೆ ಕುಸ್ತಿ ತಂಡವನ್ನು ಗೋಲ್ಡ್‌ಕೋಸ್ಟ್‌ಗೆ ಕಳುಹಿಸಲಾಗಿತ್ತು. ಹೀಗಾಗಿ ಈ ಸಾಧನೆ ನನ್ನ ಪಾಲಿಗೆ ಹೆಚ್ಚುವರಿ ಸಂತಸ ಕೊಟ್ಟಿದೆ. ನನ್ನ ಕುಟುಂಬದವರ ಕನಸನ್ನೂ ನನಸಾಗಿಸಿದ್ದೇನೆ…’ ಎಂದು ಕಾಮನ್ವೆಲ್ತ್‌ ಚಾಂಪಿಯನ್‌ಶಿಪ್‌ನಲ್ಲೂ ಬಂಗಾರದ ಒಡೆಯನಾಗಿ ಮೆರೆದ ರಾಹುಲ್‌ ಹೇಳಿದರು.

“ಇಂದಿನ ಸ್ಪರ್ಧೆಗಳ ವೇಳೆ ನಾನು ಸ್ವಲ್ಪ ಸಮಯ ಕಾಲು ನೋವನ್ನು ಅನುಭವಿಸಿದೆ. ಆದರೀಗ ಈ ನೋವು ಮಾಯವಾಗಿದೆ. ಈ ಚಿನ್ನದ ಪದಕವನ್ನು ಗುರು ಆಗಿದ್ದ ಹರಿಶ್ಚಂದ್ರ ಬಿರಾಜಾªರ್‌ ಅವರಿಗೆ ಅರ್ಪಿಸುತ್ತಿದ್ದೇನೆ. ಅವರೂ ಗೇಮ್ಸ್‌ನಲ್ಲಿ ಬಂಗಾರ ಜಯಿಸಿದ್ದರು. 2011ರಲ್ಲಿ ಅವರು ಇಹಲೋಕ ತ್ಯಜಿಸಿದರು’ ಎಂಬುದಾಗಿ ರಾಹುಲ್‌ ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next