Advertisement

ಭಾರತೀಯ ಬ್ಲೈಂಡ್ ಕ್ರಿಕೆಟ್ ಟೀಮ್ ನ ಆಟಗಾರ ಈಗ ದಿನಗೂಲಿ ಕಾರ್ಮಿಕ..!

01:15 PM Aug 09, 2021 | Team Udayavani |

ನಾವ್ಸಾರಿ (ಗುಜರಾತ್)  :  ಭಾರತೀಯ ಬ್ಲೈಂಡ್ (ಅಂಧರ) ಕ್ರಿಕೆಟ್ ಟೀಮ್ ನ ಕ್ರಿಕೆಟಿಗ ಹಾಗೂ 2018 ರಲ್ಲಿ ಭಾರತದ ಬ್ಲೈಂಡ್ ಕ್ರಿಕೆಟ್ ಟೀಮ್ ವಿಶ್ವ ಕಪ್ ಪಡೆಯುವಲ್ಲಿ ಯಶಸ್ವಿ ಪಾತ್ರ ವಹಿಸಿದ್ದ ಗುಜರಾತ್ ನ ನಾವ್ಸಾರಿಯ ನರೇಶ್ ತುಂಬ್ಡಾ ಈಗ ದಿನಗೂಲಿ ಕಾರ್ಮಿಕ ಅಂದರೇ, ನೀವು ಆಶ್ಚರ್ಯಪಡಲೇ ಬೇಕು.

Advertisement

ಹೌದು, ಪಾಕಿಸ್ತಾನದ ವಿರುದ್ಧ ಗೆದ್ದು ವಿಶ್ವಕಪ್ ಪಡೆದ ಭಾರತದ ತಂಡದ XI ಶ್ರೇಣಿಯಲ್ಲಿ ಆಡುತ್ತಿದ್ದ ಗುಜರಾತಿನ ನಾವ್ಸಾರಿಯ ಅಂಧ ಕ್ರಿಕೆಟಿಗ ನರೇಶ್ ತುಂಬ್ಡಾ, ಕೋವಿಡ್ ಸೋಂಕಿನ ಕಾರಣದಿಂದಾಗಿ ದೇಶದಾದ್ಯಂತ ಲಾಕ್ ಡೌನ್ ಸಂಭವಿಸಿದ ಕಾರಣದಿಂದಾಗಿ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದು, ತರಕಾರಿ ವ್ಯಾಪಾರ ಹಾಗೂ ದಿನಗೂಲಿಯಲ್ಲಿ ದುಡಿಯುವಂತಾಗಿದೆ.

ಇದನ್ನೂ ಓದಿ : ಶಿವಮೊಗ್ಗ ಜಿಲ್ಲಾಧಿಕಾರಿ ಕಛೇರಿ ಸಭೆಯಲ್ಲಿ ಹೈಡ್ರಾಮ: ಆಯನೂರು ಮಂಜುನಾಥ್ ಗಲಾಟೆ

ಸರ್ಕಾರ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ : ತುಂಬ್ಡಾ

ನಾನು ದಿನಕ್ಕೆ ಈಗ 250ರೂಪಾಯಿಗಳನ್ನು ದಿನಗೂಲಿ ಮಾಡಿ ದುಡಿಯುತ್ತಿದ್ದೇನೆ. ಕೋವಿಡ್ ನಿಂದ ನನಗೆ ಹಾಗೂ ನನ್ನ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಈಗಾಗಲೇ ಮುಖ್ಯಮಂತ್ರಿಗಳನ್ನು ಮೂರು ಬಾರಿ ಉದ್ಯೋಗ ನೀಡುವಂತೆ ಕೇಳಿಕೊಂಡಿದ್ದೇನೆ, ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸರ್ಕಾರ ಯಾವುದಾದರೂ ಉದ್ಯೋಗವನ್ನು ನೀಡಿದ್ದಲ್ಲಿ ನನ್ನ ಕುಟುಂಬ ನಿರ್ವಹಣೆಗೆ ಸಹಾಯವಾಗುತ್ತದೆ ಎನ್ನುತ್ತಾರೆ ತುಂಬ್ಡಾ.

Advertisement

ಉದ್ಯೋಗವಿದ್ದರೇ ಕುಟುಂಬ ನಿರ್ವಹಣೆ ಸಾಧ್ಯ

ವಿಶ್ವಕಪ್ ಗೆದ್ದು ಬಂದು ದೆಹಲಿಗೆ ವಾಪಾಸ್ ಆದಾಗ ಎಲ್ಲರೂ ಶ್ಲಾಘನೆಯ ಮಾತುಗಳನ್ನಾಡಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗುವ ಅವಕಾಶ ದೊರಕಿತ್ತು. ನಾವು ವಿಶ‍್ವಕಪ್ ಗೆದ್ದಾಗ ನನಗೆ ತುಂಬಾ ಸಂತೋಷವಾಗಿತ್ತು. ನನಗೆ ಸರ್ಕಾರದಿಂದ ಏನಾದರೂ ಉದ್ಯೋಗದ ಆಸರೆ ದೊರಕುತ್ತದೆ ಎಂದಂದುಕೊಂಡಿದ್ದೆ. ಆದರೇ, ಈವರೆಗೆ ಯಾವುದೇ ಉದ್ಯೋಗ ನನಗೆ ಸಿಕ್ಕಿಲ್ಲ. ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ನನಗೆ ಯಾವುದಾದರೂ ಉದ್ಯೋಗ ನೀಡಿ ಎಂದು ಒತ್ತಾಯಿಸುತ್ತೇನೆ. ಉದ್ಯೋಗ ಸಿಕ್ಕಿದರೇ, ನನಗೆ ಹಾಗೂ ನನ್ನ ಕುಟುಂಬದ ಜೀವನ ಸುಧಾರಣೆಗೆ ಸಾಧ್ಯವಾಗುತ್ತದೆ ಎಂದು ತುಂಬ್ಡಾ ಅವಲತ್ತುಕೊಳ್ಳುತ್ತಾರೆ.

ತುಂಬ್ಡಾ, ಮೂಲಭೂತ ಅವಶ್ಯಕತೆಗಳಿಗಾಗಿ ಹೋರಾಡುತ್ತಿರುವ ಯುವ ಪ್ರತಿಭಾನ್ವಿತ ಕ್ರಿಕೆಟಿಗ, ಜೀವನೋಪಾಯಕ್ಕಾಗಿ ಉದ್ಯೋಗವನ್ನು ಒದಗಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಒತ್ತಾಯಿಸಿದ್ದಾರೆ. ಒಂದು ಓವರ್ ಬಾಕಿ ಇರುವಾಗ ಅವರು ವಿಶ್ವಕಪ್ ಗೆಲ್ಲುವಲ್ಲಿ 2018 ರಲ್ಲಿ ಭಾರತೀಯ ಬ್ಲೈಂಡ್ ಕ್ರಿಕೇಟ್ ತಂಡ ಯಶಸ್ವಿಯಾಗಿತ್ತು. ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ 40 ಓವರ್ ಗಳಲ್ಲಿ 307 ರನ್ ಗಳಿಸಿತ್ತು. 307 ರನ್ ಗಳನ್ನು ಬೆನ್ನು ಹಿಡಿದ ಭಾರತೀಯ ತಂಡ ಒಂದು ಓವರ್ ಬಾಕಿ ಇರುವಾಗಲೇ ಗುರಿ ತಲುಪಿ ವಿಶ್ವಕಪ್ ನನ್ನು ತನ್ನ ಮುಡಿಗೇರಿಸಿಕೊಂಡಿತ್ತು.

ಇದನ್ನೂ ಓದಿ : ಉಜ್ವಲ ಯೋಜನೆ 2.0 ಗೆ ನಾಳೆ ಉ. ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ಮೋದಿ ಚಾಲನೆ

Advertisement

Udayavani is now on Telegram. Click here to join our channel and stay updated with the latest news.

Next