Advertisement

ಕ್ವಾಂಟಿಕೋ ಅದ್ಭುತ ಅಭಿನಯಕ್ಕೆ ಪ್ರಿಯಾಂಕಾಗೆ People’s Choice Award

11:32 AM Jan 19, 2017 | Team Udayavani |

ಹೊಸದಿಲ್ಲಿ : ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಅವರು 2015ರ ಎಬಿಸಿ ಥ್ರಿಲ್ಲರ್‌ ಸೀರಿಸ್‌ ಕ್ವಾಂಟಿಕೋ ದಲ್ಲಿ ವಹಿಸಿದ್ದ ಅಲೆಕ್ಸ್‌ ಪ್ಯಾರಿಶ್‌ ಪಾತ್ರಕ್ಕಾಗಿ 2017ರ ಪೀಪಲ್ಸ್‌ ಚಾಯ್ಸ ಅವಾರ್ಡ್‌ ಪಡೆದಿದ್ದಾರೆ. 

Advertisement

ಪ್ರಿಯಾಂಕಾ ವೀಕ್ಷಕರ ಅಚ್ಚುಮೆಚ್ಚಿನ ನಾಟಕೀಯ ಟಿವಿ ತಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

43ನೇ ಪೀಪಲ್ಸ್‌ ಚಾಯ್ಸ ಅವಾರ್ಡ್‌ ಸಮಾರಂಭವನ್ನು ಕ್ಯಾಲಿಫೋರ್ನಿಯದ ಲಾಸ್‌ ಏಂಜಲಿಸ್‌ನಲ್ಲಿನ ಮೈಕ್ರೋಸಾಫ್ಟ್ ಥಿಯೇಟರ್‌ನಲ್ಲಿ ಜ.18ರ ಬುಧವಾರ ನಡೆಸಲಾಯಿತು.

ಪ್ರಿಯಾಂಕಾ ಅವರು 2015ರ ಎಬಿಸಿ ಥ್ರಿಲ್ಲರ್‌ ಸೀರಿಸ್‌ ಕ್ವಾಂಟಿಕೋ ಮೂಲಕ ಅಂತಾರಾಷ್ಟ್ರೀಯ ಪ್ರಸಿದ್ಧಿಗೆ ಬಂದಿದ್ದರು. ಈ ಟಿವಿ ರೋಚಕ ಸೀರಿಯಲ್‌ನಲ್ಲಿ ಆಕೆ ನಿರ್ವಹಿಸಿದ್ದ ಅಲೆಕ್ಸ್‌ ಪ್ಯಾರಿಶ್‌ ಪಾತ್ರ ಅಪಾರ ಜನಮನ್ನಣೆ ಪಡೆದಿತ್ತು.

ಅಮೆರಿಕನ್‌ ನೆಟ್‌ವರ್ಕ್‌ ಸೀರಿಸ್‌ನಲ್ಲಿ ಭಾರೀ ಹೆಡ್‌ಲೈನ್‌ ಖ್ಯಾತಿಗೆ ಪಾತ್ರಳಾದ ಮೊತ್ತ ಮೊದಲ ದಕ್ಷಿಣ ಏಶ್ಯ ಮಹಿಳೆ ಎಂದು ಪ್ರಿಯಾಂಕಾ ಪರಿಗಣಿತರಾಗಿದ್ದಾರೆ. 

Advertisement

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಿಯಾಂಕಾ, ತನ್ನ ಈ ಸಾಧನೆಗೆ ತನ್ನೊಂದಿಗಿನ ಎಲ್ಲ ಸಹ ಕಲಾವಿದರು ಕಾರಣರಾಗಿದ್ದು ಅವರಿಗೆಲ್ಲ ನನ್ನ ಧನ್ಯವಾದಗಳು ಎಂದು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next