ಜೈಪುರ: 2015 ರ ಐಎಎಸ್ ಟಾಪರ್ ಟೀನಾ ದಾಬಿ ಎರಡನೇ ಮದುವೆಯಾಗುವ ವಿಚಾರ ದೃಢ ಪಟ್ಟಿದೆ, ಅವರು ಐಎಎಸ್ ಅಧಿಕಾರಿಯೊಬ್ಬರನ್ನು ಏಪ್ರಿಲ್ ನಲ್ಲಿ ಮದುವೆಯಾಗಲಿದ್ದಾರೆ.
ಇನ್ ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಐಎಎಸ್ ಅಧಿಕಾರಿ ಪ್ರದೀಪ್ ಗವಾಂಡೆ ಅವರೊಂದಿಗೆ ಸಂಭ್ರಮದಿಂದ ಇರುವ ಫೋಟೋ ಹಂಚಿಕೊಂಡಿದ್ದು, ಅವರು ಮದುವೆಯಾಗುವುದು ಖಚಿತವಾಗಿದೆ.ತಮ್ಮ ಪೋಸ್ಟ್‌ನಲ್ಲಿ ಸ್ಮೈಲಿಯನ್ನು ಹಾಕಿ # ನಿಶ್ಚಿತ ವರ ಎಂದು ಹ್ಯಾಶ್ ಟ್ಯಾಗ್ ಮಾಡಿದ್ದಾರೆ.
ಅಧಿಕೃತ ಮೂಲಗಳ ಪ್ರಕಾರ, ರಾಜಸ್ಥಾನದ ಹಣಕಾಸು ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿರುವ 28 ರ ಹರೆಯದ ದಾಬಿ ಅವರು ರಾಜಸ್ಥಾನದ ಐಎಎಸ್ ಅಧಿಕಾರಿ 42 ರ ಹರೆಯದ ಪ್ರದೀಪ್ ಗವಾಂಡೆ ಅವರನ್ನು ವಿವಾಹವಾಗಲಿದ್ದಾರೆ. ಗವಾಂಡೆ ಪ್ರಸ್ತುತ ರಾಜಸ್ಥಾನದ ಪುರಾತತ್ವ ಮತ್ತು ವಸ್ತುಸಂಗ್ರಹಾಲಯ ಇಲಾಖೆಯ ನಿರ್ದೇಶಕರಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಜನಿಸಿದ ಪ್ರದೀಪ್ ಗಾವಂಡೆ 2013 ರ ಬ್ಯಾಚ್‌ನ ಪ್ರಸಿದ್ಧ ಐಎಎಸ್ ಅಧಿಕಾರಿ. ಅವರು ಲೋಕಸೇವಾ ಆಯೋಗದ ಪರೀಕ್ಷೆಯನ್ನು ಪೂರ್ಣಗೊಳಿಸುವ ಮೊದಲು ತಮ್ಮ MBBS ಪದವಿಯನ್ನು ಪೂರ್ಣಗೊಳಿಸಿ ವೈದ್ಯರಾಗಿದ್ದರು.
ಟೀನಾ ದಾಬಿ ಈ ಹಿಂದೆ 2018 ರಲ್ಲಿ ತನ್ನದೇ ಬ್ಯಾಚ್‌ನ ಅಧಿಕಾರಿ ಅಥರ್ ಅಮೀರ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಟೀನಾ ಮತ್ತು ಅಥರ್ ಜೈಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ಆಗಸ್ಟ್ 2021 ರಲ್ಲಿ ವಿಚ್ಛೇದನ ಪಡೆಡಿದ್ದರು.